72
ಬೆಂಗಳೂರು:ದೇವಸ್ಥಾನಗಳಲ್ಲಿ ಪ್ರಸಾದ ಹಂಚಿಕೆಗೂ ಮುನ್ನ ಅದರ ತಯಾರಿಕೆಯ ಕಚ್ಚಾ ಸಾಮಗ್ರಿಗಳನ್ನು ಪರೀಕ್ಷೆಗೆ ಒಳಪಡಿಸಿ ನಂತರ ಬಳಕೆ ಮಾಡುವಂತೆ ಸರ್ಕಾರ ಇಂದಿಲ್ಲಿ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಪ್ರಸಾದ ಸೇವನೆ ನಂತರ ಸಾರ್ವಜನಿಕರು ಅಸ್ವಸ್ತಗೊಂಡ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಕಚ್ಚಾ ಸಾಮಗ್ರಿಗಳನ್ನು ಎಫ್ಎಸ್ಎಸ್ಎಐ ಅಂಗೀಕೃತ ಹಾಗೂ ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.