Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ತೆಲಂಗಾಣದ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ

by cklbkrish November 11, 2023
written by cklbkrish November 11, 2023 0 comments 2 minutes read
2FacebookTwitterPinterestEmail
118
ತೆಲಂಗಾಣದಲ್ಲಿ ಕರ್ನಾಟಕದ ಫಲಿತಾಂಶ ಮರುಕಳಿಸಲಿದೆ – ಜಮೀರ್ ಅಹಮದ್ ಖಾನ್

ಹೈದರಾಬಾದ್ : ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶವೇ ಮರುಕಳಿಸಲಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಹೈದರಾಬಾದ್ ನಲ್ಲಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹತ್ತು ವರ್ಷಗಳ ಕೆ ಸಿ ಆರ್ ಆಡಳಿತದಿಂದ ಜನ ಬೇಸರಗೊಂಡಿದ್ದು, ಈ ಬಾರಿ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ದ ಮಾದರಿಯಲ್ಲೇ ಇಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಕೆ ಸಿ ಆರ್ ಕೊಟ್ಟ ಭರವಸೆ ಈಡೇರಿಸಿಲ್ಲ; ಆಡಳಿತ ವಿರೋಧಿ ಅಲೆ ತೀವ್ರ

ತೆಲಂಗಾಣ ದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಜಾತ್ಯತೀತ ಮನೋಭಾವದ ಎಲ್ಲ ವರ್ಗ ಕಾಂಗ್ರೆಸ್ ಪರ ವಿಶ್ವಾಸ ಹೊಂದಿದೆ. ಕೆ ಸಿ ಆರ್ ಕೊಟ್ಟ ಭರವಸೆ ಈಡೇರಿಸಿಲ್ಲ, ಆಡಳಿತ ವಿರೋಧಿ ಅಲೆ ತೀವ್ರವಾಗಿದೆ ಎಂದು ತಿಳಿಸಿದರು.

ಕರ್ನಾಟಕ ದಲ್ಲಿ ನಾವು ಕೊಟ್ಟ ಗ್ಯಾರಂಟಿ ಈಡೇರಿಸಿದ್ದೇವೆ. ಕೋಟ್ಯಂತರ ಕುಟುಂಬಗಳಿಗೆ ನಮ್ಮ ಗ್ಯಾರಂಟಿ ಯೋಜನೆಯ ಫಲ ದೊರಕುತ್ತಿದೆ. ತೆಲಂಗಾಣದಲ್ಲೂ ನಾವು ಆರು ಗ್ಯಾರಂಟಿ ನೀಡಿದ್ದು ಅದರ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್  ಪಕ್ಷವು ಅಲ್ಪಸಂಖ್ಯಾತರ ಸಮುದಾಯಕ್ಕೆ ಕೊಟ್ಟ ಮಾತು ಉಳಿಸಿಕೊಂಡಿದೆ.  ಸ್ಪೀಕರ್, ಎರಡು ಸಚಿವ ಸ್ಥಾನ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ, ಪರಿಷತ್ ಮುಖ್ಯ ಸಚೇತಕ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಇದು ಕಾಂಗ್ರೆಸ್ ನ ಬದ್ಧತೆ ಆಗಿದ್ದು ತೆಲಂಗಾಣ ದಲ್ಲೂ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಹೆಚ್ಚು ಆದ್ಯತೆ ಸಿಗಲಿದೆ ಎಂದು ಹೇಳಿದರು.

ಕೆ. ಸಿ. ರಾಮರಾವ್ ಕಳೆದ ಐದು ವರ್ಷ ತೋಟದ ಮನೆಯಲ್ಲಿದ್ದು, ಇದೀಗ ಚುನಾವಣೆ ಬಂತು ಎಂದು ಹೊರಗೆ ಬಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ್ದ ಶೇ.22 ರಷ್ಟು ಮೀಸಲಾತಿ ವಾಗ್ದಾನ ಈಡೇರಿಸಿಲ್ಲ. ಶೇ.16 ರಿಂದ 17 ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪ ಸಂಖ್ಯಾತ ಸಮುದಾಯಕ್ಕೆ ಕೇವಲ 2200 ಕೋಟಿ ರೂ. ಅನುದಾನ ಘೋಷಿಸಿ 800 ರಿಂದ 1000 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಬಗ್ಗೆ ಅವರಿಗೆ ಇರುವ ಕಾಳಜಿ ಎಂದು ಲೇವಡಿ ಮಾಡಿದರು.

ಅಭಿವೃದ್ಧಿ ಕಾರ್ಯಗಳ ಶ್ವೇತ ಪತ್ರ ಹೊರಡಿಸಲಿ

ನಮ್ಮ ಸರ್ಕಾರ ಬಂದರೆ ಐದು ಸಾವಿರ ಕೋಟಿ ರೂ. ಅನುದಾನ, ಬಡ ಮುಸ್ಲಿಂ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ. ನೆರವು, ಉನ್ನತ ವ್ಯಾಸಂಗ ಮಾಡುವ ಸಮುದಾಯದ ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ. ವರೆಗೂ ವಿದ್ಯಾರ್ಥಿ ವೇತನ, ಇಮಾಮ್, ಮೌಜ್ವನ್ ರಿಗೆ ಮಾಸಿಕ 12 ಸಾವಿರ ರೂ. ಗೌರವ ಧ2004 ರಿಂದ ಖಾಲಿ ಉಳಿದಿರುವ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದ್ದೇವೆ ಅದರಂತೆ ನಡೆಯುತ್ತೇವೆ ಎಂದು ಹೇಳಿದರು.

ಕೆ. ಸಿ. ರಾಮರಾವ್ ಅವರು ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಕ್ಕಾಗಿ ಹತ್ತು ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಶ್ವೇತ ಪತ್ರ ಹೊರಡಿಸಲಿ ಎಂದು ಅಗ್ರಹಿಸಿದರು.

ಕಾಂಗ್ರೆಸ್ ಮಾತ್ರ ಅಪ್ಪಟ ಜಾತ್ಯತೀತವಾದಿ ಪಕ್ಷ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ರೀತಿ ತೆಲಂಗಾಣ ದಲ್ಲೂ ಕಾರ್ಯಕ್ರಮ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ತೆಲಂಗಾಣ ದಲ್ಲಿ ಬಿ ಆರ್ ಎಸ್, ಬಿಜೆಪಿ, ಐ ಎ ಎಂ ಎಲ್ಲವೂ ಒಂದೇ. ಕಾಂಗ್ರೆಸ್ ಮಾತ್ರ ಅಪ್ಪಟ ಜಾತ್ಯತೀತವಾದಿ ಪಕ್ಷ ಎಂದು ತಿಳಿಸಿದರು.

ಎ ಐ ಸಿಸಿ ತೆಲಂಗಾಣ ಉಸ್ತುವಾರಿ ಅಜೋಯ್ ಕುಮಾರ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ತೆಲಂಗಾಣ ಕಾಂಗ್ರೆಸ್ ಮಾಧ್ಯಮ ಘಟಕದ ಕಮಲ್ ಉಪಸ್ಥಿತರಿದ್ದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
changing waveselectionhousing ministerhydarabadkarnatakakmskmskannadatelanganazamir
2 FacebookTwitterPinterestEmail
cklbkrish

previous post
ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್ ಶಿಪ್
next post
ಪುತ್ರನಿಗಾಗಿ ನಾನೇನು ದಂಡಯಾತ್ರೆ ಮಾಡಿರಲಿಲ್ಲ: ಯಡಿಯೂರಪ್ಪ

You may also like

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

July 18, 2026

ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ

July 17, 2026

ಸಂಭಾವ್ಯ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ

July 16, 2026

ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಶಿವಕುಮಾರ್

July 15, 2026

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ

July 14, 2026

ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

July 13, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ