Thursday, April 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, April 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಪ್ರಧಾನಿ v/s ಸಿದ್ದು

by admin January 2, 2024
written by admin January 2, 2024 0 comments 2 minutes read
2FacebookTwitterPinterestEmail
305

ದೇಶ ಕಂಡರಿಯದ ಉದ್ಯೋಗ ಮೇಳಕ್ಕೆ ಸಿದ್ಧತೆ

ಬೆಂಗಳೂರು:ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಂದಿರ ಉದ್ಘಾಟನೆಯ ಮೂಲಕ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಎಬ್ಬಿಸಲು ಬಿಜೆಪಿ ಸಜ್ಜಾಗಿದ್ದರೆ, ಜನವರಿ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಉದ್ಯೋಗ ಮೇಳದ ಮೂಲಕ ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಎಬ್ಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.

ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಇಪ್ಪತ್ತೊಂಬತ್ತರಂದು ಸಂಪುಟದ ಪ್ರಮುಖ ಸಚಿವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಅವರು, ಜನವರಿ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಉದ್ಯೋಗ ಮೇಳ ದೇಶದ ಇತಿಹಾಸದಲ್ಲೇ ಇದುವರೆಗೆ ನಡೆದ ಅತ್ಯಂತ ದೊಡ್ಡ ಮೇಳವಾಗಬೇಕು ಎಂದು ಬಯಸಿದ್ದಾರೆ.

ಈ ಕಾರಣಕ್ಕಾಗಿಯೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಉದ್ಯೋಗ ಮೇಳದ ರೂಪುರೇಷೆ ತಯಾರಿಸುವ ಜವಾಬ್ದಾರಿಯನ್ನು ನೀಡಿದ್ದರು.

ಮೂಲಗಳ ಪ್ರಕಾರ, ಜನವರಿ ಅಂತ್ಯದಲ್ಲಿ ಬೆಂಗಳೂರಿನಲ್ಲಿ, ತದನಂತರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿರುವ ಉದ್ಯೋಗ ಮೇಳಗಳ ಮೂಲಕ ಆರು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕೊಡಿಸಬಹುದು ಎಂದು ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ವರದಿ ನೀಡಿದ್ದಾರೆ.

ರಾಜ್ಯದಲ್ಲಿ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಸೇರಿ ಹದಿನೇಳು ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಮತ್ತು ಕಂಪನಿಗಳಿದ್ದು, ಇವುಗಳಿಗೆ ಅನುಕ್ರಮವಾಗಿ ಇಂತಿಷ್ಟು ಉದ್ಯೋಗಾವಕಾಶಗಳನ್ನು ನೀಡಬೇಕು ಎಂದು ಗುರಿ ನಿಗದಿ ಪಡಿಸಿದರೆ ಆರು ಲಕ್ಷಕ್ಕೂ ಅಧಿಕ ಮಂದಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಬಹುದು.

ಈ ಪೈಕಿ ಬೃಹತ್ ಕೈಗಾರಿಕೆ ಮತ್ತು ಕಂಪನಿಗಳಿಗೆ ಕನಿಷ್ಟ ಪಕ್ಷ ತಲಾ ನೂರು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಗುರಿ ನಿಗದಿ ಮಾಡಬೇಕು, ಇದೇ ರೀತಿ ಮಧ್ಯಮ ಗಾತ್ರದ ಕೈಗಾರಿಕೆಗಳು, ಕಂಪನಿಗಳಿಗೆ ಕನಿಷ್ಟ ಇಪ್ಪತ್ತೈದು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಗುರಿ ನಿಗದಿ ಮಾಡಬೇಕು.

ಸಣ್ಣ ಕೈಗಾರಿಕೆಗಳಿಗೆ ಕನಿಷ್ಟ ಎರಡರಿಂದ ಐದು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಗುರಿ ನಿಗದಿ ಮಾಡಿದರೆ ಒಟ್ಟು ಆರು ಲಕ್ಷಕ್ಕೂ ಅಧಿಕ ಮಂದಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಬಹುದು.

ಒಬ್ಬ ಉದ್ಯೋಗಿ ನಾಲ್ಕು ಮಂದಿಗೆ ಅನ್ನಕ್ಕೆ ಆಸರೆಯಾಗುವುದರಿಂದ ಈ ಪ್ರಮಾಣದ ಉದ್ಯೋಗಗಳ ಮೂಲಕ ಇಪ್ಪತ್ತೈದು ಲಕ್ಷ ಮಂದಿಯ ಜೀವನ ನಿರ್ವಹಣೆಗೆ ದಾರಿಯಾಗುತ್ತದೆ ಎಂಬುದು ಹಿರಿಯ ಸಚಿವರು ನೀಡಿದ ವರದಿಯ ಮುಖ್ಯಾಂಶ.

ಇದೇ ರೀತಿ ಉದ್ಯೋಗ ಮೇಳಗಳಲ್ಲಿ ಆಯಾ ಕೈಗಾರಿಕೆ ಮತ್ತು ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಂಡರೆ ಸಾಲದು, ಬದಲಿಗೆ ಕೈಗಾರಿಕೆ, ಕಂಪನಿಗಳ ಮುಖ್ಯಸ್ಥರೇ ಭಾಗವಹಿಸಲು ಮನವಿ ಮಾಡಿಕೊಳ್ಳಬೇಕು.

ಹೀಗೆ ಸರ್ವರ ಸಹಕಾರವನ್ನು ಪಡೆದು ಉದ್ಯೋಗ ಮೇಳಗಳನ್ನು ನಡೆಸಿದರೆ ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉದ್ಯೋಗ ಮೇಳ ನಡೆಸಿದ ಮತ್ತು ಅತ್ಯಂತ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ದಕ್ಕುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟಿಸುವ ಮೂಲಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಎಬ್ಬಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದ್ದರೆ, ಅದಕ್ಕೆ ಪರ್ಯಾಯವಾಗಿ ರೋಟಿ, ಕಪಡಾ ಔರ್ ಮಕಾನ್ ಎಂಬುದು ಕಾಂಗ್ರೆಸ್‌ನ ನೀತಿ ಎಂದು ದೇಶಕ್ಕೆ ಸಂದೇಶ ರವಾನಿಸಬಹುದು ಎಂಬುದು ಈ ಸಚಿವರ ಅಭಿಪ್ರಾಯ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
all over state including bengalurucm siddaramaiahcongressdelhimassive job expopm nrendra modipmopolitics
2 FacebookTwitterPinterestEmail
admin

previous post
ದ್ವೇಷದ ರಾಜಕಾರಣ ಮಾಡಿಲ್ಲ
next post
ಕೋವಿಡ್ ರೂಪಾಂತರಿ: ಮುಂಜಾಗ್ರತೆ ವಹಿಸಿ

You may also like

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

April 20, 2026

ಬದಲಾಗದ ಮಹಿಳಾ ವಿರೋಧಿ ಕಾಂಗ್ರೆಸ್ ಮನಸ್ಥಿತಿ

April 18, 2026

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

April 17, 2026

ಪಕ್ಷ ವಿರೋಧಿ ಚಟುವಟಿಕೆ: ಸಚಿವ ಜಮೀರ್‌ಗೆ ಕಂಟಕ

April 16, 2026

ಪ್ರಧಾನಿ ಮೋದಿಗೆ ರಾಜ್ಯದ 18 ಬೇಡಿಕೆಗಳ ಪಟ್ಟಿ

April 15, 2026

ಶಾಸಕರ ಜೊತೆ ಪ್ರತ್ಯೇಕ ಸಭೆಗೆ ಶಿವಕುಮಾರ್ ಸಮರ್ಥನೆ

April 14, 2026

ಸಂಪುಟ ಪುನರ್ ರಚನೆಗೆ ಅವಕಾಶ ಕೊಡಬೇಡಿ

April 13, 2026

ಅಧಿಕಾರ ಹಸ್ತಾಂತರ ನಿರೀಕ್ಷೆಯಲ್ಲಿ ಡಿ.ಕೆ.ಶಿವಕುಮಾರ್

April 11, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (443)
  • ಅಂಕಣ (109)
  • ಉದ್ಯೋಗ (326)
  • ದಿನ ಭವಿಷ್ಯ (110)
  • ರಾಜಕೀಯ (1,937)
  • ರಾಜ್ಯ (2,252)
  • ರಾಷ್ಟ್ರ (2,222)
  • ವಿಶ್ಲೇಷಣೆ (189)
  • ಶಿಕ್ಷಣ (393)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

    April 23, 2026
  • ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

    April 21, 2026
  • ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

    April 20, 2026

KMS Special

  • ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

    April 23, 2026
  • ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

    April 21, 2026
  • ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

    April 20, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ