Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

48 ಗಂಟೆಯೊಳಗೆ ಶರಣಾಗುವಂತೆ ಪ್ರಜ್ವಲ್‌ಗೆ ಕುಮಾರಸ್ವಾಮಿ ಸಲಹೆ

by admin May 20, 2024
written by admin May 20, 2024 0 comments 2 minutes read
0FacebookTwitterPinterestEmail
230

ಬೆಂಗಳೂರು:ತಾತ ದೇವೇಗೌಡರ ಮೇಲೆ ಗೌರವ ಇದ್ದರೆ ಇನ್ನು 48 ಗಂಟೆಯೊಳಗಾಗಿ ಎಸ್‌ಐಟಿಗೆ ಶರಣಾಗುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣಗೆ ಸಲಹೆ ನೀಡಿದ್ದಾರೆ.

ನಮ್ಮ ಕುಟುಂಬದ ಹೆಸರು ಹಾಳು ಮಾಡಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ, ಇದರ ಮಧ್ಯೆ ಸರ್ಕಾರ 376 ಸೆಕ್ಷನ್ ಬಳಕೆ ಮಾಡಿಕೊಂಡು ನಮ್ಮವರ ಮೇಲೆ ಪ್ರಕರಣ ದಾಖಲಿಸಲು ಸಂಚು ನಡೆಯುತ್ತಿದೆ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಶಿವರಾಮೇಗೌಡ ಹಾಗೂ ವಕೀಲ ದೇವರಾಜೇಗೌಡ ಅವರ ನಡುವೆ ನಡೆದಿರುವ ಸಂಭಾಷಣೆ ಬಹಿರಂಗಗೊಂಡ ನಂತರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರಜ್ವಲ್ ಪ್ರಕರಣ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ರೇವಣ್ಣಗೆ ಮತ್ತೊಂದು ಪ್ರಕರಣದಲ್ಲೂ ಜಾಮೀನು
ಕುಟುಂಬದಲ್ಲಿ ಆತಂಕದ ಛಾಯೆ

ದೊಡ್ಡಗೌಡರ ಕುಟುಂಬದಲ್ಲಿ ಆತಂಕದ ಛಾಯೆ ಆವರಿಸಿದೆ. ಇದರಿಂದ ನೊಂದ ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ನಾನು ಅದನ್ನು ತಡೆದಿದ್ದೇನೆ.

ಉದ್ದೇಶ ಪೂರ್ವಕವಾಗಿ ನಮ್ಮ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ, ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ.

ಅಷ್ಟೇ ಅಲ್ಲ, ನಮ್ಮ ಕುಟುಂಬದವರು ಹಾಗೂ ಸ್ನೇಹಿತರ ೪೦ ಮಂದಿಯ ದೂರವಾಣಿಯನ್ನು ಆಲಿಸಲಾಗುತ್ತಿದೆ.

ದೊಡ್ಡಗೌಡರಿಗೆ ನೀನು ಬೆಲೆ ಕೊಡುವುದೇ ಆದರೆ, ಇನ್ನೆರಡು ದಿನದಲ್ಲಿ ಎಸ್‌ಐಟಿ ಮುಂದೆ ಶರಣಾಗು ಎಂದಿದ್ದಾರೆ.

ಸಹೋದರಿಯರ ಕ್ಷಮೆ ಕೇಳುತ್ತೇನೆ

ಪ್ರಜ್ವಲ್‌ನಿಂದ ಮಹಿಳಾ ಸಿಬ್ಬಂದಿ ಮಾನಸಿಕ ಯಾತನೆ ಅನುಭವಿಸುತ್ತಿದ್ದು, ನನ್ನ ಸಹೋದರಿಯರ ಕ್ಷಮೆ ಕೇಳುತ್ತೇನೆ, ಈ ಪರಿಸ್ಥಿತಿ ಯಾರಿಗೂ ಬರಬಾರದಿತ್ತು.

ಇದಕ್ಕೆ ಕಾರಣಕರ್ತರಾದವರು ಒಬ್ಬರು, ಇದನ್ನು ಜಗಜ್ಜಾಹೀರುಗೊಳಿಸಿ ಹೆಣ್ಣು ಮಕ್ಕಳು ನೋವನ್ನು ಅನುಭವಿಸುವಂತೆ ಮಾಡಿದ್ದು ಯಾರೋ.

ಇದನ್ನು ಬಹಿರಂಗಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿವರಾಮೇಗೌಡ ಸೇರಿದಂತೆ ಕಾರಣಕರ್ತರ ವಿರುದ್ಧ ಎಸ್‌ಐಟಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಆಡಳಿತದ ಒಂದು ವರ್ಷ ಶೂನ್ಯ ಸಾಧನೆ: ಬಿಜೆಪಿ
ಪ್ರಜ್ವಲ್ ಜೊತೆ ಹೆಚ್ಚಿನ ಸಂಪರ್ಕ ಇರಲಿಲ್ಲ

ನಾನು ಗೌಡರ ಕುಟುಂಬದವನೇ ಆದರೂ ನಮ್ಮ ನಾಲ್ಕು ಸಹೋದರರು ಯಾರು ಏನು ಮಾಡುತ್ತಾರೆ ಎಂಬುದು ಇತರರಿಗೆ ಗೊತ್ತಿರುವುದಿಲ್ಲ, ಪ್ರಜ್ವಲ್‌ಗೂ ನಮಗೂ ಹೆಚ್ಚಿನ ಸಂಪರ್ಕವೂ ಇರಲಿಲ್ಲ.

ಆದರೂ ಕುಟುಂಬದವನಾಗಿ ಎಸ್‌ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್‌ಗೆ ಕಿವಿಮಾತು ಹೇಳುತ್ತೇನೆ.

ದೇವರಾಜೇಗೌಡ ಪಾಪ, ಪೋಲಿಸ್ ವಾಹನದಲ್ಲಿ ಕುಳಿತು, ಮಾತನಾಡಿದ್ದಾರೆ, ನಮ್ಮ ಕುಟುಂಬದ ಹೆಸರು ಕೆಡಿಸಲು ಒಂದು ತಂಡವನ್ನೇ ರಚಿಸಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

ನಿನ್ನೆ ಬಂತಲ್ಲ ಸಿಡಿ ಶಿವು, ನನ್ನನ್ನು ಬ್ರದರ್ ಅಂತಾರಲ್ಲಾ ಅವರದೇ ಎಂದು ಶಿವಕುಮಾರ್ ಹೆಸರೇಳದೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ, ಪೆನ್‌ಡ್ರೈವ್ ಪ್ರಕರಣ ಹೊರಬಂತಲ್ಲ ಆಗಲೇ ಹಿಡಿದು ಜೈಲಿಗೆ ಹಾಕಬೇಕಿತ್ತು.

ಯಾರಿಗೂ ಅನ್ಯಾಯವಾಗದಂತೆ ಜಾತಿ ಗಣತಿ ವರದಿ ಜಾರಿ
ನಿಮ್ಮ ಉಸಿರೇ ಇಲ್ಲ

ನನ್ನ ಹೆಸರೇಳಲಿ ಎಂದು ಸವಾಲು ಹಾಕುತ್ತಿದ್ದರಲ್ಲ, ಡಿ.ಕೆ.ಶಿವಕುಮಾರ್ ಅವರೇ, ನಿನ್ನೆ ಆಡಿಯೊ ಬಂತಲ್ಲ, ನಂತರ ನಿಮ್ಮ ಉಸಿರೇ ಇಲ್ಲ ಎಂದು ವ್ಯಂಗ್ಯವಾಡಿದರು.

ಶಿವಕುಮಾರ್ ವಿರುದ್ಧ ಯಾರೇ ಮಾತನಾಡಿದರೂ ೩೭೬ ಸೆಕ್ಷನ್ ಹಾಕುತ್ತಾರೆ, ಅದನ್ನೇ ದೇವರಾಜೇ ಗೌಡರ ಮೇಲೂ ಮಾಡಿದ್ದಾರೆ, ಇನ್ನು ಮುಂದೆ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಈ ಸೆಕ್ಷನ್ ಗ್ಯಾರಂಟಿ ಎಂದರು.

ಯಾರೂ ವಿಡಿಯೊ ಕತೃ ಇದ್ದಾರೆ, ಅವರನ್ನು ಕರೆತಂದು ನೇಣಿಗೆ ಹಾಕಿ ಎಂದು ಈಗಲೂ ಹೇಳುತ್ತೇನೆ.

ಸರ್ಕಾರ ಆತನನ್ನು ಹಿಡಿಯುವ ಬದಲು ನನ್ನನ್ನು ಪ್ರಕರಣಕ್ಕೆ ಅಂಟು ಹಾಕಿ ನನಗೆ ಮಸಿ ಬಳಿಯಲು ಇನ್ನಿಲ್ಲದ ಕಸರತ್ತು ನಡೆಸಿ ತಾನೇ ಸಿಕ್ಕಿಹಾಕಿಕೊಂಡಿದೆ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
family is in distress - hdkour family is targeted - hdksurrender within 48 hours - hdk to prajval
0 FacebookTwitterPinterestEmail
admin

previous post
ರೇವಣ್ಣಗೆ ಮತ್ತೊಂದು ಪ್ರಕರಣದಲ್ಲೂ ಜಾಮೀನು
next post
ಜಿಲ್ಲಾ ಉಸ್ತುವಾರಿಗಳ ಬದಲಾವಣೆ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ