Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಉದ್ಯೋಗರಾಜಕೀಯರಾಜ್ಯರಾಷ್ಟ್ರ

ಎಂಎಸ್‌ಐಎಲ್‌ನ 10,000 ಕೋಟಿ ರೂ. ಚಿಟ್ ಫಂಡ್

by admin September 27, 2025
written by admin September 27, 2025 0 comments 2 minutes read
0FacebookTwitterPinterestEmail
89

ಬೆಂಗಳೂರು:ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವಾರ್ಷಿಕ 10,000 ಕೋಟಿ ರೂ. ವಹಿವಾಟು ಗುರಿಯ ಚಿಟ್ ಫಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಂಎಸ್‌ಐಎಲ್ ಸದ್ಯಕ್ಕೆ ವಾರ್ಷಿಕ 500 ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ, ಕೇರಳ ಸರ್ಕಾರ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ.

ಡಿಜಿಟಲ್ ಸ್ವರೂಪದಲ್ಲಿ

ಎಂಎಸ್‌ಐಎಲ್ ಉಪಕ್ರಮ ಸಂಪೂರ್ಣ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಟನೆ ಮಾಡಲಾಗುವುದು.

ಒಂದು ಶತಮಾನದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸೋಸಲೆ ಗರಳಪುರಿ ಶಾಸ್ತ್ರಿಗಳು ಒಟ್ಟಾಗಿ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಆರಂಭಿಸಿದ್ದು, ಸಂಸ್ಥೆ ’ಕಾಂತಾರ- ಚಾಪ್ಟರ್-1’ ಚಲನಚಿತ್ರಕ್ಕೆ ಸುಗಂಧ ಭಾಗೀದಾರ ಆಗಿದೆ.

ಸಂಸ್ಥೆ ಉತ್ಪನ್ನಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಮಾರುಕಟ್ಟೆ ಸಿಗಲಿದೆ, ಜೊತೆಗೆ ಚಿತ್ರ ಬಿಡುಗಡೆ ಮಾಡುವ 30 ದೇಶಗಳಲ್ಲಿ ಸಂಸ್ಥೆ ಉತ್ಪನ್ನಗಳು ಜನರನ್ನು ತಲುಪಲಿವೆ, ’ಕಾಂತಾರ’ ಸುಗಂಧ ಭಾಗೀದಾರ ಆಗುವ ಮೂಲಕ ಮಾರುಕಟ್ಟೆ ವಿಭಾಗ ಮತ್ತಷ್ಟು ಶಕ್ತಗೊಳ್ಳಲಿದೆ.

ಹೊಂಬಾಳೆ ಫಿಲಂಸ್ ಜೊತೆ ವ್ಯವಹಾರ

ಹೊಂಬಾಳೆ ಫಿಲಂಸ್ ಮತ್ತು ರಿಷಭ್ ಶೆಟ್ಟಿ ಈ ಸಂಬಂಧ ಕೆಎಸ್‌ಡಿಎಲ್ ಜತೆ ವ್ಯಾವಹಾರಿಕ ಆಸಕ್ತಿ ತೋರಿಸಿರುವುದು ಸಂತಸದ ಸಂಗತಿ ಎಂದರು.

ಕೆಎಸ್‌ಡಿಎಲ್ 1,700 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದ್ದು, 415 ಕೋಟಿ ರೂ. ಲಾಭ ಗಳಿಸಿದೆ, ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ.ಗೆ ಕೊಂಡೊಯ್ಯಲಾಗುವುದು.

ಕಾಂತಾರ ಸಿನಿಮಾ ಏಕಕಾಲದಲ್ಲಿ ದೇಶ-ವಿದೇಶಗಳ 13,500 ತೆರೆಗಳಲ್ಲಿ ಪ್ರದರ್ಶನ ಕಾಣಲಿದೆ, ಕೆಎಸ್‌ಡಿಎಲ್ ಮೂಲಕ ಕಳೆದ ಎರಡು ವರ್ಷಗಳಲ್ಲಿ 22 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.

ಔಷಧೋತ್ಪನ್ನಗಳ ಮೇಲೆ ಅಮೆರಿಕ ಸುಂಕ

ಭಾರತದ ಔಷಧೋತ್ಪನ್ನಗಳ ಮೇಲೆ ಅಮೆರಿಕ ಹೇರುತ್ತಿರುವ ವಿಪರೀತ ಸುಂಕ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಉತ್ಪಾದನೆ ಹಾಗೂ ರಫ್ತಿನಲ್ಲಿ ಚೀನಾ, ವಿಯಟ್ನಾಂ ನಮಗಿಂತ ಮುಂದಿವೆ, ಈ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹಾಕಿದ್ದಾರೆ, ಆದರೆ, ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿರುವುದು ನಮ್ಮ ದೇಶದ ಉತ್ಪಾದಕರಿಗೆ ಭಾರೀ ಹೊಡೆತ ಬೀಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ’ಅಬ್ ಕೀ ಬಾರ್ ಟ್ರಂಪ್’ ಎಂದು ಪ್ರಚಾರ ಮಾಡಿದ್ದರಾದರೂ, ಜೋ ಬೈಡನ್ ಗೆದ್ದರು, ಅವರು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ, ಈ ಬಾರಿ ಗೆದ್ದು ಬಂದ ಟ್ರಂಪ್ ಭಾರತದ ಉತ್ಪನ್ನಗಳ ಆಮದು ಮೇಲೆ ಅತಾರ್ಕಿಕ ಸುಂಕ ವಿಧಿಸುತ್ತಿದ್ದು, ನಾವು ಇದರ ದುಷ್ಪರಿಣಾಮ ಎದುರಿಸಬೇಕಾಗಿದೆ.

ಆಘಾತಕಾರಿ ತೀರ್ಮಾನಗಳು

ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ, ಇಂತಹ ತೀರ್ಮಾನಗಳು ಭಾರತದ ಐಟಿ ಸೇವೆ ಮತ್ತು ಎಫ್‌ಡಿಐ ಮೇಲೆ ಕರಿಛಾಯೆ ಮೂಡಿಸಿದೆ, ಇದನ್ನೂ ಪರಿಹರಿಸಬೇಕು.

ಭಾರತದ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು, ಆದರೆ, ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ, ಇದರಿಂದ ಕರ್ನಾಟಕ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.

ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ, ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
chit fundKSDLMinister M B Patilmsil
0 FacebookTwitterPinterestEmail
admin

previous post
ಹೈಕೋರ್ಟ್ ಆದೇಶದಂತೆ ಗಣತಿ: ಅವಧಿ ವಿಸ್ತರಣೆ ಇಲ್ಲ
next post
ಬಿಡದಿ ಟೌನ್‌ಶಿಪ್: ರೈತಪರ ಜೆಡಿಎಸ್ ಹೋರಾಟ

You may also like

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

May 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ