ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 7ರ ಮಂಗಳವಾರದಂದು ಪ್ರಕಟಗೊಳ್ಳಲಿದೆ.
2026ರ ಫೆಬ್ರುವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ನಡೆದ ಪರೀಕ್ಷೆಯಲ್ಲಿ 7,10,363 ವಿದ್ಯಾರ್ಥಿಗಳು ಹಾಜರಾಗಿದ್ದರು.
ಉತ್ತೀರ್ಣ ಮಾನದಂಡ ಇಳಿಕೆ
ಈ ಬಾರಿ ಒಟ್ಟಾರೆ ಉತ್ತೀರ್ಣ ಮಾನದಂಡವನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಲಾಗಿದೆ (ಪ್ರಾಯೋಗಿಕವಲ್ಲದ ವಿಷಯಗಳಿಗೆ 80ರಲ್ಲಿ 24, ವಿಜ್ಞಾನ ವಿಷಯಗಳಿಗೆ 70ರಲ್ಲಿ 21 ಅಂಕಗಳು).
ವಿಜ್ಞಾನ ವಿಭಾಗದಲ್ಲಿ 2,92,645 ವಾಣಿಜ್ಯ ವಿಭಾಗದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ಏಪ್ರಿಲ್ 7ರಂದೇ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ.
ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಏಪ್ರಿಲ್ 25 ರಿಂದ ಮೇ 8ರ ವರೆಗೆ ನಡೆಯಲಿರುವ ಪರೀಕ್ಷೆಗೆ (ಮರುಪರೀಕ್ಷೆ) ಹಾಜರಾಗಬಹುದು.
ಮೂರು ವಾರ್ಷಿಕ ಪರೀಕ್ಷೆ
ಮಂಡಳಿ ಈ ಬಾರಿ ಮೂರು ವಾರ್ಷಿಕ ಪರೀಕ್ಷೆಗಳ (ಪರೀಕ್ಷೆ 1, 2, ಮತ್ತು 3) ವ್ಯವಸ್ಥೆ ಪರಿಚಯಿಸಿದೆ.
ಫಲಿತಾಂಶ ಪರಿಶೀಲಿಸಲು karresults.nic.in ಅಥವಾ kseab.karnataka.gov.in ನಲ್ಲಿ ಲಾಗ್-ಇನ್ ಮಾಡಿ, ‘II PUC Exam-1 Result 2026’ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ.
ಫಲಿತಾಂಶದ ಅಧಿಕೃತ ದಿನಾಂಕಕ್ಕೆ ಕೆಎಸ್‌ಇಎಬಿ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದಾಗಿದೆ.


