Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

by KM Shivaraju July 22, 2026
written by KM Shivaraju July 22, 2026 0 comments 2 minutes read
0FacebookTwitterPinterestEmail
66

’ನನಗೂ ಇದು ಸಾಕಾಗಿದೆ, ನಡಿಯಪ್ಪ ಹೋಗೋಣ, ದೆಹಲಿಗೆ ಇನ್ನು ಎಷ್ಟು ಬಾರಿ ಬರುವುದು’

ನವದೆಹಲಿ:ನೀಟ್ ಪರೀಕ್ಷೆ ಅಕ್ರಮ ಕುರಿತು ಕಾಂಗ್ರೆಸ್ ನಡೆಸಿರುವ ಹೋರಾಟದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬಿದ್ದಿದೆ.

ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರಿಷ್ಠರ ಅನುಮತಿ ದೊರೆಯದೆ, ಬರಿಗೈಯಲ್ಲಿ ಹಿಂತಿರುಗಿದ್ದಾರೆ.

ಕಾಂಗ್ರೆಸ್ ಸಂಸದರ ಪ್ರತಿಭಟನೆ

ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ, ಸಂಸತ್ ಭವನ ಹಾಗೂ ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆ ನಂತರ ಮುಖ್ಯಮಂತ್ರಿ ಅವರು ರಾಹುಲ್ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ಮುಂದಾದರು.

ಮುಖ್ಯಮಂತ್ರಿ ಮಾತು ಆಲಿಸಿದ ರಾಹುಲ್, ಇಷ್ಟೆಲ್ಲಾ ನಡೆಯುತ್ತಿದೆ, ನಿಮಗೆ ಅಧಿಕಾರದ್ದೇ ಚಿಂತೆಯೇ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಮಾತಿಗೆ ಮರು ಉತ್ತರ ನೀಡದೆ, ಪ್ರತಿಭಟನೆ ನಂತರ ಕರ್ನಾಟಕ ಭವನಕ್ಕೆ ಹಿಂತಿರುಗಿದ ಶಿವಕುಮಾರ್, ತಮ್ಮ ಆಪ್ತ ಶಾಸಕರ ಜೊತೆ ಚರ್ಚೆ ನಡೆಸಿ, ಬುಧವಾರ ಬೆಳಿಗ್ಗೆಯೇ ಬೆಂಗಳೂರಿಗೆ ಹಿಂತಿರುಗುವ ತೀರ್ಮಾನ ಕೈಗೊಂಡರು.

ಸಚಿವ ಆಕಾಂಕ್ಷಿಗಳಿಗೆ ರಾಹುಲ್ ಸಂದೇಶ

ಸಚಿವ ಆಕಾಂಕ್ಷಿಗಳಿಗೆ ರಾಹುಲ್ ಸಂದೇಶ ತಿಳಿಸಿದ್ದಲ್ಲದೆ, ಅಲ್ಲೇ ಇದ್ದ ಹಿರಿಯ ಶಾಸಕ ಜಯಚಂದ್ರ ಅವರಿಗೆ ’ನಡಿಯಪ್ಪ, ನನಗೂ ಇದು ಸಾಕಾಗಿದೆ, ಹೋಗೋಣ’ ಎಂದಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಿಸುವ ಉದ್ದೇಶದಿಂದ ನಾನು ದೆಹಲಿಗೆ ಎರಡು-ಮೂರು ಬಾರಿ ಬಂದಿದ್ದೇನೆ, ಇನ್ನು ಎಷ್ಟು ಬಾರಿ ಬರುವುದು.

ಪ್ರವಾಸಕ್ಕೆ ತೆರಳಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಸಂಪರ್ಕಿಸಿ, ಬುಧವಾರವೇ ಸಂಪುಟ ವಿಸ್ತರಣೆಗೆ ಅವಕಾಶ ಮಾಡಿಕೊಡುವಂತೆ ಕೋರಿಕೊಂಡಿದ್ದೆ, ನನ್ನ ಮನವಿಗೆ ಸ್ಪಂದಿಸಿ, ಅವರು ತಮ್ಮ ಪ್ರವಾಸ ಮೊಟಕುಗೊಳಿಸಿದ್ದರು, ಆದರೆ ಇಲ್ಲಿ ನಡೆದಿದ್ದೇ ಬೇರೆ ಎಂದರು.

ನಮ್ಮ ಕೆಲಸ ಮಾಡೋಣ ಬನ್ನಿ

ವರಿಷ್ಠರು ಕರೆದರೆ ಮಾತ್ರ ದೆಹಲಿಗೆ ಬರುತ್ತೇನೆ, ಇಲ್ಲದಿದ್ದರೆ, ನಮ್ಮ ಕೆಲಸ ಮಾಡೋಣ ಬನ್ನಿ ಎಂದು ಸಚಿವ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿ, ತಮ್ಮ ಕೊಠಡಿಗೆ ತೆರಳಿದರು.

ಕೊಠಡಿಗೆ ತೆರಳವುದಕ್ಕೂ ಮುನ್ನ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಸಚಿವ ಸಂಪುಟದ ಬಗ್ಗೆ ನಮ್ಮ ನಾಯಕರ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಅವರ ನಿರ್ಧಾರದಂತೆ ಮುಂದೆ ನಡೆಯುತ್ತೇನೆ, ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ, ಅದರಲ್ಲಿ ಅರ್ಥವೂ ಇಲ್ಲ, ಆದರೆ, ಮಂಗಳವಾರ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ, ನಾನೇನು ಮಾಡಲಿ ಎಂದರು.

ನಾಯಕರ ಹೋರಾಟ ಶ್ಲಾಘನೀಯ

ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ, ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು, ವಿದ್ಯಾರ್ಥಿಗಳಿಗೆ ನ್ಯಾಯಕೊಡಬೇಕು, ಈ ವಿಷಯದಲ್ಲಿ ನಮ್ಮ ನಾಯಕರು ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಬಣ್ಣಿಸಿದರು.

ಸಂಪುಟ ವಿಚಾರಕ್ಕೆ ಮತ್ತೆ ದೆಹಲಿಗೆ ಬರುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, ಕರೆದಾಗ ಬರುತ್ತೇನೆ, ಚರ್ಚೆ ಮಾಡುತ್ತೇನೆ, ಈಗಾಗಲೇ ನಾನು, ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿ ನಮ್ಮ ಅಭಿಪ್ರಾಯ ತಿಳಿಸಿ ಸಂಭಾವ್ಯ ಸಚಿವರ ಪಟ್ಟಿಗೆ ಒಂದು ಸ್ವರೂಪ ನೀಡಿದ್ದೇವೆ.

ರಾಹುಲ್ ಗಾಂಧಿ ಜೊತೆ ಖರ್ಗೆ ಚರ್ಚಿಸಿ ಅನುಮೋದನೆ ನೀಡುವುದಷ್ಟೇ ಬಾಕಿ, ಒಂದು ವೇಳೆ ವಿಷಯ ಪ್ರಸ್ತಾಪಿಸಿದರೆ ನಾವು, ನಮ್ಮ ಅಭಿಪ್ರಾಯ ಹೇಳಬೇಕಾಗುತ್ತದೆ, ಅವರು ನೀಡುವ ಪಟ್ಟಿಯಂತೆ ನಾನು ಮಂತ್ರಿಮಂಡಲ ವಿಸ್ತರಿಸುತ್ತೇನೆ ಎಂದರು.

ಪಟ್ಟಿ ಅಂತಿಮಗೊಳಿಸಲು ಸಿದ್ಧ

ನನಗಂತೂ ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ, ನನಗೆ ಇಂದೇ ಅವಕಾಶ ನೀಡಿದರೆ, ಪಟ್ಟಿ ಅಂತಿಮಗೊಳಿಸಲು ಸಿದ್ಧ.

ಸೋಮವಾರವೇ ದೆಹಲಿಗೆ ಬರುವಂತೆ ವರಿಷ್ಠರು ಆಹ್ವಾನ ನೀಡಿದ್ದರು, ಆದರೆ, ಹಾಸನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದರಿಂದ ನಾನು ರಾಜಧಾನಿಗೆ ಬರಲು ಆಗಲಿಲ್ಲ, ಮಂಗಳವಾರ ನೀಟ್ ಕುರಿತು ಶಾಂತ ಹೋರಾಟಕ್ಕೆ ದೆಹಲಿ ಪೊಲೀಸರು ಅವಕಾಶ ನೀಡದೆ, ನಾಯಕರುಗಳನ್ನು ಬಂಧಿಸಿದ್ದರಿಂದ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಪುಟ ವಿಸ್ತರಣೆ ಮಾತುಕತೆ ಸಂಪೂರ್ಣವಾಗಲಿಲ್ಲ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cm d k shivakumarkarnataka cabinetmeets rahul gandhinew delhino expansion nowno interest in expansionRahul Gandhiwhat is so urgent
0 FacebookTwitterPinterestEmail
KM Shivaraju

previous post
ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ
next post
ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ