Wednesday, October 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, October 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

by KM Shivaraju October 6, 2026
written by KM Shivaraju October 6, 2026 0 comments 3 minutes read
0FacebookTwitterPinterestEmail
4

ಬೆಂಗಳೂರು:ಕರ್ನಾಟಕ ಬಿಜೆಪಿ ಕುತಂತ್ರ ರಾಜಕಾರಣ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಗೆಲ್ಲಬೇಕು, ಚುನಾವಣಾ ಆಯೋಗದ ವ್ಯವಸ್ಥೆ ಬಳಸಿಕೊಂಡು ಮತದಾರರ ಪಟ್ಟಿ ತಿರುಚಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಟೀಕಿಸಿದ್ದಾರೆ.

ಮತದಾರರ ಹೆಸರನ್ನು ಒಂದು ಬೂತ್ ನಿಂದ ಮತ್ತೊಂದು ಬೂತ್‌ ಗೆ ಸ್ಥಳಾಂತರಿಸುವುದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗ ಹಾಗೂ ಬಡವರ ಮತಗಳನ್ನು ಕಿತ್ತುಹಾಕಲಾಗುತ್ತಿದೆ, ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ.

ದಾಖಲೆ ಸಮೇತ ಬಹಿರಂಗ

ಬಿಜೆಪಿಯವರು ಮತಕಳ್ಳರ ರಕ್ಷಣೆಗೆ ಹೊರಟಿದ್ದಾರೆ, ಆ ಪಕ್ಷದ ಕಾರ್ಯಕರ್ತರು ಅಮಾಯಕರು, ಏಕೆಂದರೆ ಒಂದೇ ಕುಟುಂಬದಿಂದ ಗಂಡ, ಹೆಂಡತಿ, ಮಗಳು ಸೇರಿ ಮೂರೂ ಜನರು ಫಾರಂ 7 ಅರ್ಜಿ ನೀಡಿದ್ದನ್ನು ಮಾಧ್ಯಮದವರೇ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.

ಒಂದೇ ಕುಟುಂಬದ ಮೂವರು ಈ ಅರ್ಜಿಗೆ ಸಹಿ ಹಾಕಿ ಕೊಟ್ಟಿದ್ದು, ತಮ್ಮ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ, ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ ಎಂದರು.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಬಿಜೆಪಿ ರಾಜಕಾರಣಿ ರವಿ ಪಾಟೀಲ್ ಹಾಗೂ ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿ ಫಾರಂ 7 ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ, ಶೃಂಗೇರಿ ಕ್ಷೇತ್ರದಲ್ಲಿ 1500 ಫಾರಂ 7 ಅರ್ಜಿಗಳನ್ನು ಮಧ್ಯರಾತ್ರಿ ಸುಟ್ಟಿದ್ದಾರೆ ಎಂದರು.

ಹಲವು ಕ್ಷೇತ್ರದಲ್ಲಿ ದುರುಪಯೋಗ

ಬೆಂಗಳೂರಿನ ಜಯನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕ್ಷೇತ್ರದಲ್ಲಿ ಫಾರಂ 7 ಅರ್ಜಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಬಿಜೆಪಿಯ ಆರ್.ಅಶೋಕ್ ಹಾಗೂ ವಿಜಯೇಂದ್ರ, ಸುಮಾರು 25,000 ಫಾರಂ 7 ಅರ್ಜಿ ನೀಡಿರಬಹುದು ಎಂದಿದ್ದಾರೆ, ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಇದೆ. ಬಿಜೆಪಿ ಮತಗಳ್ಳತನಕ್ಕೆ ಮುಂದಾಗಿರುವುದು ಸರಿಯಲ್ಲ.

ರಾಜ್ಯದ ಮುಖ್ಯಮಂತ್ರಿಯಾಗಿ, ಜನಪ್ರತಿನಿಧಿಯಾಗಿ ಹಾಗೂ ಪಕ್ಷದ ಮುಖ್ಯಸ್ಥನಾಗಿ ನಮ್ಮ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ, ಜನರ ಮತಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದು, ವಿರೋಧ ಪಕ್ಷಗಳ ನಾಯಕರು, ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಹೇಳಿಕೊಳ್ಳಲಿ.

ಬಿಜೆಪಿ ನಾಯಕರು ಹೆದರಿದ್ದಾರೆ

ದೇಶದ ವಿರೋಧ ಪಕ್ಷಗಳ ನಾಯಕರು, ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿ ಅವರನ್ನು ಕೇಳುವ ಹಕ್ಕಿದೆ, ರಾಜ್ಯದ ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿ, ಫಾರಂ 7 ದುರುಪಯೋಗಪಡಿಸಿಕೊಂಡಿದ್ದು ಈಗ ಹೆದರಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಅವರುಗಳು, ಫಾರಂ 7 ಅನ್ನು ನಾವೇ ಕೊಟ್ಟಿದ್ದೇವೆ ಎಂಬುದಾಗಿ ಒಪ್ಪಿಕೊಳ್ಳಲಿ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಣ್ಣ ಕಾರ್ಯಕರ್ತರಿಗೆ ಫಾರಂ 7 ಅರ್ಜಿ ನೀಡಿದ್ದಾರೆ, ಯಾವ ರೀತಿ ಕಾರ್ಯಚರಣೆ ಮಾಡಿದ್ದಾರೆ ಎಂಬ ಕುರಿತು ನನ್ನ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ, ಒಬ್ಬೊಬ್ಬರಿಗೆ 1000, 5000, 10,000 ಅರ್ಜಿ ನೀಡಿದ್ದಾರೆ, ನಾನು ರಾಜ್ಯದ ಮುಖ್ಯಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ ನಂತರ ಬಿಎಲ್ಓಗಳಿಂದ ಸಲ್ಲಿಸಿದ್ದ ಫಾರಂ 7 ಅರ್ಜಿಯನ್ನು ಕೆಲವರು ಮನವಿ ಮಾಡಿ ವಾಪಸ್ ಪಡೆದರೆ ಮತ್ತೆ ಕೆಲವರು ಕಿತ್ತುಕೊಂಡಿದ್ದಾರೆ.

ಬಿಎಲ್ಓಗಳಿಗೆ ಬೆದರಿಕೆ

ನಂತರ ಅವುಗಳನ್ನು ಸುಟ್ಟು ಹಾಕಿದ್ದಾರೆ, ಬಿಎಲ್ಓಗಳಿಗೆ ಬೆದರಿಕೆ ಹಾಕಿ ಲಕ್ಷಾಂತರ ಅರ್ಜಿ ಪಡೆದಿದ್ದಾರೆ, ಬಿಎಲ್ಓಗಳು ಇದರ ಬಗ್ಗೆ ವರದಿ ನೀಡಿದ್ದಾರೆ, ಮತದಾನದ ಹಕ್ಕು ಕಳೆದುಕೊಂಡವರು ದೂರು ನೀಡುವುದು ಸಹಜ, ಬದುಕಿರುವವರನ್ನು ಸತ್ತಿದ್ದಾರೆ ಎಂದು ತೋರಿಸಲಾಗಿದೆ.

ಫಾರಂ 7 ಅರ್ಜಿ ದೆಹಲಿ ಅಥವಾ ಬೇರೆಡೆ ಮುದ್ರಿಸಿ ಕೊಟ್ಟಿದ್ದು, ನಾವು ಮುಖ್ಯಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ್ದೇವೆ, ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಜೆಡಿಎಸ್ ನಾಯಕರ ತಂತ್ರಗಳೇನು, ಬಿಜೆಪಿ ನಾಯಕರ ತಂತ್ರಗಳೇನು ಎಂಬುದು ನನಗೆ ಗೊತ್ತಿದೆ, ನನಗೆ ಗೊತ್ತಿಲ್ಲವೆಂದು ಭಾವಿಸಿದ್ದಾರೆ, ಮತದಾನದ ಹಕ್ಕು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ.

ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ

ರಾಜ್ಯ ಚುನಾವಣಾ ಆಯುಕ್ತರ ಕಚೇರಿಗೆ ದೂರು ಕೊಟ್ಟ ನಂತರ ಪರಿಶೀಲನೆ ನಡೆಸದೇ ಯಾವುದೇ ಫಾರಂ 7 ಅರ್ಜಿಗಳನ್ನು ಅನುಮೋದಿಸುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಕೆಲವು ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಆ ಅರ್ಜಿಗಳನ್ನು ಯಾರು ನೀಡಿದರು ಎಂಬುದನ್ನು ಅವರೇ ಹೇಳಬೇಕು, ಇದರ ಬಗ್ಗೆಯೂ ತನಿಖೆ ಆಗಬೇಕು.

ಭಾರತದ ಇತಿಹಾಸದಲ್ಲೇ ಇದು ಅತಿ ದೊಡ್ಡ ಪಿತೂರಿ, ಮತಗಳ್ಳತನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಅಧಿನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದು ಬೆಂಗಳೂರಿನಿಂದಲೇ.

ರಾಹುಲ್ ಗಾಂಧಿ ಜಗ್ಗುವುದಿಲ್ಲ

ರಾಹುಲ್ ಗಾಂಧಿ ಅವರ ಪ್ರತಿಭಟನೆ ತಡೆಯಲಿ, ಬಂಧಿಸಲಿ, ಅವರು ಇದಕ್ಕೆಲ್ಲಾ ಜಗ್ಗುವುದಿಲ್ಲ, ಜನರ ಹಾಗೂ ದೇಶದ ಚುನಾವಣಾ ವ್ಯವಸ್ಥೆ ಉಳಿವಿಗೆ ಹೋರಾಟ ಮಾಡುತ್ತಿದ್ದಾರೆ, ಎಸ್ಐಆರ್ ನಮ್ಮ ವಿಚಾರವಲ್ಲ, ದೇಶದ ಜನರ ವಿಚಾರ.

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ, ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಪಕ್ಷದ ನಾಯಕರಾಗಿ ಪ್ರತಿಭಟನೆ ಮಾಡುವ ಹಕ್ಕು ರಾಹುಲ್ ಗಾಂಧಿ ಅವರಿಗಿದೆ, ಬಿಜೆಪಿಯವರು ನಮ್ಮ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ.

ನಮ್ಮ ದೂರಿನ ಬಳಿಕ ಚುನಾವಣಾ ಆಯೋಗ, ಮತಪಟ್ಟಿಯಿಂದ ಹೊರಗುಳಿದವರು ತಮ್ಮ ಹಕ್ಕು ಪಡೆಯಲು ಫಾರಂ 6 ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದಾರೆ, ಇದಕ್ಕಾಗಿ ವಿಶೇಷ ಅಭಿಯಾನ ನಡೆಸಲು ಸೂಚಿಸಿದ್ದಾರೆ, ಇದು ಕರ್ನಾಟಕದ ಜಯ ಎಂದರು.

ನೈಸ್ ಮರೆ ಮಾಚಲು ಎಸ್ಐಆರ್

ನೈಸ್ ಹೋರಾಟ ಮರೆ ಮಾಚಲು ಎಸ್ಐಆರ್ ಮುನ್ನೆಲೆಗೆ ತರಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಈಗಲೇ ಉತ್ತರ ನೀಡುವುದಿಲ್ಲ, ಅದಕ್ಕೆಲ್ಲಾ ಕಾನೂನಿದೆ, ಆಮೇಲೆ ಮಾತನಾಡುತ್ತೇನೆ, ಮೊದಲು ಜನರ ಮತದಾನದ ಹಕ್ಕು ರಕ್ಷಣೆ ಮಾಡಬೇಕಿದೆ, ನೈಸ್ ಯೋಜನೆಗೆ ಸಹಿ ಮಾಡಿದ ಪಿತಾಮಹರು ಅವರೇ ಎಂದರು.

ರಾಜ್ಯಮ ರಸ್ತೆ ಸಾರಿಗೆ ಬಸ್ ಪ್ರಯಾಣ ದರ, ಹಾಲಿನ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿ, ರೈತರಿಗೆ ಕೊಡಬೇಡಿ ಎಂಬುದಾಗಿ ಬಿಜೆಪಿಯವರು ಹೇಳುತ್ತಾರೆಯೇ, ಈ ಬಗ್ಗೆ ಚರ್ಚೆ ಮಾಡೋಣ ಎಂದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿಲ್ಲದ ಸಮಯದಲ್ಲಿ ಬಸ್ ಟಿಕೆಟ್ ದರ ಏರಿಸಿದರೆ ಪ್ರತಿಭಟಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದು, ಅವರು ಏನು ಬೇಕಾದರೂ ಮಾಡಲಿ, ನಮ್ಮ ರಾಜ್ಯಕ್ಕೆ, ರೈತರಿಗೆ, ಬಿಜೆಪಿಯವರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡೋಣ. 

ಜಿಎಸ್ ಟಿ ಮಂಡಳಿ ಸಭೆಗೆ ತೆರಳಿ, ನಮ್ಮ ಪ್ರಾತ್ಯಕ್ಷಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ, ಸಚಿವ ಕೃಷ್ಣಬೈರೇಗೌಡರು ಮುಂಚಿತವಾಗಿ ತೆರಳಿದ್ದು, ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ, ನಾನೂ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ, ನಾಡಿದ್ದು ಗೋವಾಕ್ಕೆ ತೆರಳುತ್ತಿದ್ದು, ಪಕ್ಷದ ಕೆಲಸ ಮುಗಿಸಿ ಹಿಂತಿರುಗುತ್ತೇನೆ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cm d k shivakumarcongres fightelection commission misuse by bjpRahul Gandhivote theft
0 FacebookTwitterPinterestEmail
KM Shivaraju

previous post
ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

You may also like

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

October 5, 2026

ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

October 3, 2026

ಸಚಿವ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

October 1, 2026

ಜನವರಿಯಲ್ಲಿ ಪಂಚಾಯತ್‌ ಚುನಾವಣೆಗೆ ತೀರ್ಮಾನ

September 30, 2026

ನೈಸ್‌ ಯೋಜನೆ: ಡಿಕೆಶಿ ಕುಟುಂಬ 3 ಲಕ್ಷ ಕೋಟಿ ಲೂಟಿ

September 29, 2026

ವರಿಷ್ಠರ ಜೊತೆ ಡಿಕೆಶಿ ಸಂಪುಟ ಪುನರ್ ರಚನೆ ಚರ್ಚೆ

September 28, 2026

ಪರಿಷತ್ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಹೋರಾಟ

September 26, 2026

ಸಚಿವ ಜಾರಕಿಹೊಳಿ-ಕುಮಾರಸ್ವಾಮಿ ರಹಸ್ಯ ಚರ್ಚೆ ?

September 25, 2026

ರಾಜಕೀಯ ಸಂದಿಗ್ಧತೆಯಲ್ಲಿ ಸಚಿವ ಜಾರಕಿಹೊಳಿ

September 24, 2026

ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

September 23, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (584)
  • ಅಂಕಣ (109)
  • ಉದ್ಯೋಗ (355)
  • ದಿನ ಭವಿಷ್ಯ (110)
  • ರಾಜಕೀಯ (2,077)
  • ರಾಜ್ಯ (2,392)
  • ರಾಷ್ಟ್ರ (2,356)
  • ವಿಶ್ಲೇಷಣೆ (202)
  • ಶಿಕ್ಷಣ (412)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

    October 6, 2026
  • ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

    October 5, 2026
  • ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

    October 3, 2026

KMS Special

  • ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

    October 6, 2026
  • ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

    October 5, 2026
  • ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

    October 3, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50...

October 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ