Friday, October 30, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Friday, October 30, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಉದ್ಯೋಗರಾಜಕೀಯರಾಜ್ಯರಾಷ್ಟ್ರಶಿಕ್ಷಣ

ನವೆಂಬರ್‌ನಿಂದ ಹಾಲು-ಬಸ್‌ ಪ್ರಯಾಣ ದರ ಹೆಚ್ಚಳ

by admin October 29, 2026
written by admin October 29, 2026 0 comments 2 minutes read
0FacebookTwitterPinterestEmail
10

ಪ್ರತೀ ಲೀಟರ್‌ಗೆ 8 ರೂ. ಏರಿಕೆ, ಬಸ್‌ ದರ ಹೆಚ್ಚಳ ನಿರ್ಧಾರ ಅಧಿಕಾರ ನಿಗಮಗಳಿಗೆ

ಬೆಂಗಳೂರು:ಕೆಎಂಎಫ್‌ ನಂದಿನಿ ಹಾಲು ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಸಚಿವ ಸಂಪುಟ ಇಂದಿಲ್ಲಿ ಹಸಿರು ನಿಶಾನೆ ತೋರಿದೆ.

ನಂದಿನಿ ಹಾಲಿನ ದರ ಪ್ರತೀ ಲೀಟರ್‌ಗೆ 8 ರೂ. ಹೆಚ್ಚಿಸಿದ್ದು ನವೆಂಬರ್‌ 1ರಿಂದ ಜಾರಿಗೆ ಬರಲಿದೆ, ಬಸ್‌ ಪ್ರಯಾಣ ದರ ಹೆಚ್ಚಳವನ್ನು ನವೆಂಬರ್‌ 5ರಿಂದ ಅನುಷ್ಟಾನಕ್ಕೆ ತರಲು ಸಂಬಂಧಪಟ್ಟ ನಿಗಮಗಳಿಗೆ ಅಧಿಕಾರ ನೀಡಲಾಗಿದೆ.

ರೈತರಿಗೆ ಪ್ರತೀ ಲೀಟರ್‌ 7 ರೂ.

ಹಾಲು ದರ ಹೆಚ್ಚಳದಲ್ಲಿ ರೈತರಿಗೆ ಪ್ರತೀ ಲೀಟರ್‌ 7 ರೂ., ಒಕ್ಕೂಟಗಳಿಗೆ 1 ರೂ. ನೀಡಲಿದೆ, ಹಾಲಿನ ದರ ಪ್ರತೀ ಲೀಟರ್‌ಗೆ 10 ರೂ. ಹೆಚ್ಚಿಸುವಂತೆ ಮಾಡಿದ ಮನವಿ ಕುರಿತು ಸಂಪುಟದಲ್ಲಿ ಚರ್ಚಿಸಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಭೆ ನಿರ್ಣಯ ಕೈಗೊಂಡಿದೆ.

ಡೀಸೆಲ್‌ ಮತ್ತು ಪೆಟ್ರೋಲ್‌ ದರ ಹೆಚ್ಚಳದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾರೀ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಮತ್ತು ಸಂಪನ್ಮೂಲ ಕ್ರೂಡೀಕರಣಕ್ಕೆ ತಜ್ಞರ ವರದಿ ಆಧರಿಸಿ ಸಾರಿಗೆ ನಿಗಮಗಳೇ ದರ ಹೆಚ್ಚಳ ಬಗ್ಗೆ ತೀರ್ಮಾನ ಕೈಗೊಂಡು ಅನುಷ್ಟಾಗೊಳಿಸಲಿ ಎಂದು ಸಭೆ ತೀರ್ಮಾನಿಸಿದೆ.

ಗ್ಯಾರಂಟಿ ಯೋಜನೆಗಳು, ಜಲಜೀವನ್ ಮಿಷನ್/ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ಶಿಕ್ಷಣ, ನಾಗರಿಕ ಮೂಲಸೌಕರ್ಯಗಳ ಪ್ರಗತಿ ಮತ್ತು ಸರ್ಕಾರದ ವಿವಿಧ ಯೋಜೆಗಳು ಜನರಿಗೆ ಯಾವ ರೀತಿ ಅನುಕೂಲವಾಗಿದೆ ಎಂದು ತಿಳಿಯುವ ಇದ್ದೇಶದಿಂದ ಸಮೀಕ್ಷೆ ನಡೆಸಲು ಸಂಪಿಟ ಅನುಮೋದನೆ ನೀಡಿದೆ.

ಯೋಜನೆಗಳ ಮೌಲ್ಯಮಾಪನ

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ವತಿಯಿಂದ ಪ್ರಮುಖ ಸರ್ಕಾರಿ ಯೋಜನೆಗಳ ಮೌಲ್ಯಮಾಪನ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಸಂಗ್ರಹಿಸುವ ಉದ್ದೇಶದಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ಕಾರ್ಯಕೈಗೊಳ್ಳಲಿದೆ.

ಎರಡು ಹಂತಗಳಲ್ಲಿ ಈ ಸಮೀಕ್ಷೆ ನಡೆಯಲಿದ್ದು, ಮೊದಲ ಹಂತದಲ್ಲಿ 1 ಲಕ್ಷ ಪ್ರತಿಕ್ರಿಯೆದಾರರು ಹಾಗೂ ಎರಡನೇ ಹಂತದಲ್ಲಿ 60 ಸಾವಿರ ಪ್ರತಿಕ್ರಿಯೆದಾರನ್ನು ಸಮೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ಯೋಜನೆಗಳ ವಾಸ್ತವಿಕ ಅನುಷ್ಠಾನ ಮತ್ತು ಕ್ಷೇತ್ರಮಟ್ಟದ ಫಲಿತಾಂಶಗಳನ್ನು ಸ್ವತಂತ್ರವಾಗಿ, ವ್ಯವಸ್ಥಿತವಾಗಿ ನಿರಂತರವಾಗಿ ಮೌಲ್ಯಮಾಪನ ಮಾಡುವ ಮೂಲಕ ನಾಗರಿಕರ ಅನುಭವ, ಸೇವಾ ವಿತರಣೆಯ ಗುಣಮಟ್ಟ, ಒಳಗೊಳ್ಳುವಿಕೆ/ಹೊರಗಿಡುವಿಕೆ ಸಂಬಂಧಿ ಸಮಸ್ಯೆಗಳು, ದೂರುಗಳು ಮತ್ತು ಇತರ ಆಡಳಿತಾತ್ಮಕ ಫಲಿತಾಂಶಗಳನ್ನು ಗುರುತಿಸಲು ಈ ಸಮೀಕ್ಷೆ ಸಹಾಯಕ ಆಗಲಿದೆ ಎಂದು ಸಭೆ ನಂತರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16.04 ಕೋಟಿ ರೂ. ಹೊಲಿಗೆ ಯಂತ್ರ ಖರೀದಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ನಾಲ್ಕು ನಿಗಮಗಳ ಮೂಲಕ ಹೊಲಿಗೆ ಯಂತ್ರ ಯೋಜನೆಯಡಿ 16.04 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ಖರೀದಿಸಿ ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು.

ಸಂಗೊಳ್ಳಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ಕಾಮಗಾರಿಯ 228.95 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಉಚಿತ ರೋಗನಿರ್ಣಯ ಸೇವೆ

ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಉಚಿತ ಔಷಧ ಮತ್ತು ರೋಗನಿರ್ಣಯ ಸೇವೆಗಳ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಉಚಿತ ರೋಗನಿರ್ಣಯ ಸೇವೆಗಳನ್ನು ಒದಗಿಸಲು 21.11 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ಧಿ ಮತ್ತು ಇತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರತ್ಯೇಕ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
8 rs. per ltr.cabinet meeting decisionimplementation from novemberKMF milk rate hikeksrtc bus fare hike
0 FacebookTwitterPinterestEmail
admin

previous post
ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

You may also like

ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

October 28, 2026

ಎಸ್‌ಐಆರ್‌ ನಂತರ 99.32 ಲಕ್ಷ ಮತದಾರರ ಹೆಸರು ಕಡಿತ

October 27, 2026

ಕಬ್ಬು ಬೆಳೆಗಾರರಿಗೆ ಸ್ಪಂದಿಸಿ ಬೇಡಿಕೆಗಳ ಈಡೇರಿಸಿ

October 26, 2026

ಸ್ಟಿಂಗ್ ಆರೋಪಿಗಳು ಸಚಿವ ಕುಮಾರಸ್ವಾಮಿ ಬಂಟರು

October 24, 2026

ಸ್ಟಿಂಗ್‌ ಕಾರಣಕರ್ತರ ವಿರುದ್ಧ ಕ್ರಮಕ್ಕೆ ಡಿಕೆಶಿಗೆ ತಾಕೀತು

October 23, 2026

ಸಚಿವರ ತಡೆದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆದೇಶ

October 22, 2026

ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

October 19, 2026

ಸ್ಟಿಂಗ್‌ ಕಿಂಗ್‌ಪಿನ್‌ ಬಂಧಿಸದಿದ್ದರೆ ತೀವ್ರ ಹೋರಾಟ

October 17, 2026

ದೇಶ ಅಭದ್ರತೆಗೆ ಸಿಜೆಪಿಗೆ ಕಾಂಗ್ರೆಸ್‌ ಸರ್ಕಾರದ ಹಣ

October 16, 2026

ಸ್ಟಿಂಗ್‌ ಆಪರೇಷನ್‌: ಹೋರಾಡಲು ಅಖಾಡಕ್ಕೆ ಬನ್ನಿ

October 15, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (600)
  • ಅಂಕಣ (109)
  • ಉದ್ಯೋಗ (359)
  • ದಿನ ಭವಿಷ್ಯ (110)
  • ರಾಜಕೀಯ (2,093)
  • ರಾಜ್ಯ (2,408)
  • ರಾಷ್ಟ್ರ (2,372)
  • ವಿಶ್ಲೇಷಣೆ (202)
  • ಶಿಕ್ಷಣ (414)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ನವೆಂಬರ್‌ನಿಂದ ಹಾಲು-ಬಸ್‌ ಪ್ರಯಾಣ ದರ ಹೆಚ್ಚಳ

    October 29, 2026
  • ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

    October 28, 2026
  • ಎಸ್‌ಐಆರ್‌ ನಂತರ 99.32 ಲಕ್ಷ ಮತದಾರರ ಹೆಸರು ಕಡಿತ

    October 27, 2026

KMS Special

  • ನವೆಂಬರ್‌ನಿಂದ ಹಾಲು-ಬಸ್‌ ಪ್ರಯಾಣ ದರ ಹೆಚ್ಚಳ

    October 29, 2026
  • ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

    October 28, 2026
  • ಎಸ್‌ಐಆರ್‌ ನಂತರ 99.32 ಲಕ್ಷ ಮತದಾರರ ಹೆಸರು ಕಡಿತ

    October 27, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

October 28, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ