Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಪಾಳೇಪಟ್ಟುಗಳ ಕೈಗೆಹೋಗುತ್ತಿದೆ ಕರ್ನಾಟಕ

by admin September 15, 2024
written by admin September 15, 2024 0 comments 3 minutes read
0FacebookTwitterPinterestEmail
211

ಪ್ರಜಾಪ್ರಭುತ್ವ ಎಂಬ ರಥದ ಚಕ್ರಗಳು ಸಡಿಲವಾಗುತ್ತಾ ಹೋದಂತೆ ಪಾಳೇಪಟ್ಟುಗಳು ಬಲಿಷ್ಠವಾಗುತ್ತಾ ಹೋಗುವುದು ನಿಯಮ.

ಇದನ್ನು ಒಟ್ಟಾರೆ ಭಾರತದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಅಂಶವನ್ನು ಗಮನಿಸಲು ಕರ್ನಾಟಕವನ್ನು ಸಾಂಕೇತಿಕವಾಗಿ ಪರಿಗಣಿಸಿದರೂ ಸಾಕು ಅನ್ನಿಸುತ್ತದೆ.

ಉದಾಹರಣೆಗೆ ಕರ್ನಾಟಕದ ರಾಜಕೀಯ ವ್ಯವಸ್ಥೆ ತಲುಪಿರುವ ಸನ್ನಿವೇಶವನ್ನು ನೋಡಿ. ಕಳೆದ ಎರಡು ದಶಕಗಳ ರಾಜಕಾರಣ ಕರ್ನಾಟಕದ ರಾಜಕಾರಣವನ್ನು ಹೇಗೆ ಶಿಥಿಲಗೊಳಿಸುತ್ತಾ ಬಂದಿದೆಯೆಂದರೆ, ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಅದು ಪಾಳೇಪಟ್ಟುಗಳ ಹಿಡಿತದಲ್ಲಿ ಸಿಲುಕಲು ತುಂಬ ಕಾಲ ಬೇಕಿಲ್ಲ ಎನಿಸುತ್ತದೆ.

ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿ ಆರು ನೂರಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಬಹುತೇಕ ಸಂಸ್ಥಾನಗಳು ತಮ್ಮದೇ ಆರ್ಥಿಕ, ರಾಜಕೀಯ ನೆಲೆಯನ್ನು ಹೊಂದಿದ್ದವು. ಆದರೆ ಬ್ರಿಟಿಷರು ಈ ಸಂಸ್ಥಾನಗಳನ್ನು, ಅವುಗಳಿಗೆ ಅಂಟಿಕೊಂಡ ಪಾಳೇಪಟ್ಟುಗಳನ್ನು ನಿಯಂತ್ರಣಕ್ಕೆ ಪಡೆದು ದೇಶವನ್ನು ಆಳಿದರು.

ಈಗಿನ ಪರಿಸ್ಥಿತಿಯಲ್ಲಿ ತಮ್ಮದೇ ಆರ್ಥಿಕ, ರಾಜಕೀಯ ನೆಲೆಯಲ್ಲಿ ಸಂಸ್ಥಾನಗಳು ರೂಪುಗೊಳ್ಳುವ ಸ್ಥಿತಿ ಇಲ್ಲ. ಆದರೆ ಇಂತಹ ಸಂಸ್ಥಾನಗಳಿಗೆ ಪೂರಕವಾಗಿದ್ದ ಪಾಳೇಪಟ್ಟುಗಳು ತಲೆ ಎತ್ತಲು ಪ್ರಶಸ್ತ ವಾತಾವರಣವಂತೂ ಇದೆ.

ಇಂತಹ ವಾತಾವರಣ ಸೃಷ್ಟಿಯಾಗಲು ಈ ಮೊದಲು ಹೇಳಿದಂತೆ ಆಳುವ ಸರ್ಕಾರಗಳು ದುರ್ಬಲವಾಗುತ್ತಾ, ಇಲ್ಲವೇ ಅಸಹಾಯಕವಾಗುತ್ತಾ ಬಂದಿರುವುದೇ ಮುಖ್ಯ ಕಾರಣ. ಹೀಗಾಗಿ ಇವತ್ತು ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಪಾಳೇಪಟ್ಟುಗಳು ತಲೆ ಎತ್ತುತ್ತಿವೆ.

ಹಾಗಂತ ತಲೆ ಎತ್ತುತ್ತಿರುವ ಪಾಳೇಪಟ್ಟುಗಳಿಗೆ ಅಧಿಕೃತ ಮೊಹರು ಒತ್ತಲಾಗುವುದಿಲ್ಲ. ಯಾಕೆಂದರೆ ಪಾಳೇಪಟ್ಟು ಸಂಸ್ಕೃತಿ ತಲೆ ಎತ್ತುತ್ತಿದೆ ಎಂದು ಯಾವ ಸರ್ಕಾರವೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಥವಾ ಅದಕ್ಕೆ ಅಧಿಕೃತತೆಯ ಮೊಹರು ಒತ್ತಲು ಸಾಧ್ಯವಿಲ್ಲ.

ಕೋರ್ಟ್ ತೀರ್ಪು ಏನೇ ಬಂದರೂ ನಾನೇ ಮುಖ್ಯಮಂತ್ರಿ

ಆದರೆ ಸುಮ್ಮನೆ ಗಮನಿಸುತ್ತಾ ಹೋಗಿ, ಕರ್ನಾಟಕದ ರಾಜಕೀಯ ಸಂದರ್ಭ ಹೇಗಿದೆ ಎಂದರೆ ರಾಜ್ಯದ ಪ್ರತಿ ಜಿಲ್ಲೆಗಳ ರಾಜಕೀಯ ವ್ಯವಸ್ಥೆ ಪ್ರಭಾವಿ ಕುಟುಂಬಗಳ ಮೂಲಕ ನಿರ್ವಹಿಸಲ್ಪಸುತ್ತಿದೆ. ಸರ್ಕಾರಗಳು ಬದಲಾದಾಗ ಪ್ರಭಾವಿ ಕುಟುಂಬಗಳ ರೂಪ ಬದಲಾಗಬಹುದು.

ಆದರೆ ಬಹುತೇಕ ಜಿಲ್ಲೆಗಳ ರಾಜಕಾರಣವನ್ನು ಕುಟುಂಬಗಳು ನಿರ್ವಹಿಸತೊಡಗಿವೆ. ಅರ್ಥಾತ್, ಯಾವುದೇ ಸರ್ಕಾರ ಬರಲಿ, ಯಾವ ಪಕ್ಷದ ಕೈಲಿ ಸರ್ಕಾರವಿದೆ ಎಂಬುದರ ಆಧಾರದ ಮೇಲೆ ಆಯಾಕಾಲಕ್ಕೆ ಅನುಗುಣವಾಗಿ ಪ್ರಬಲ ಕುಟುಂಬಗಳು ಮೇಲೆದ್ದು ನಿಲ್ಲುತ್ತವೆ.

ಕೆಲ ಜಿಲ್ಲೆಗಳಲ್ಲಿ ಈ ಕುಟುಂಬ ರಾಜಕಾರಣದ ಸ್ವರೂಪ ಇನ್ನೂ ಪರಿಪೂರ್ಣ ಶಕ್ತಿ ಹೊಂದಿಲ್ಲದೆ ಇರಬಹುದು. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳ ರಾಜಕಾರಣವನ್ನು ಗಮನಿಸಿದರೆ ಒಂದೋ, ಎರಡೋ, ಮೂರೋ ಕುಟುಂಬಗಳು ಆಯಾ ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ.

ಇದು ಪರೋಕ್ಷವಾಗಿ ಪಾಳೇಪಟ್ಟು ವ್ಯವಸ್ಥೆಯಲ್ಲದೆ ಬೇರೇನೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಅಸ್ತಿತ್ವದಲ್ಲಿರುವಾಗ ನೇರವಾಗಿ ಅವು ಪಾಳೇಪಟ್ಟು ಸಂಸ್ಕೃತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ.

ಇವತ್ತು ರಾಜಕೀಯ ವ್ಯವಸ್ಥೆ ಹೇಗಾಗಿದೆ ಎಂದರೆ ಕಾಲಕ್ರಮೇಣ ಅದರ ಶಕ್ತಿ ದುರ್ಬಲವಾಗುತ್ತಿದೆ. ವಾಸ್ತವವಾಗಿ ಸರ್ಕಾರಗಳು ಬಲಿಷ್ಠವಾಗಿ, ಜನಪರವಾಗಿ ಕೆಲಸ ಮಾಡಬೇಕು ಎಂದರೆ ನಾನು ಜನಪ್ರತಿನಿಧಿ, ಜನರಿಗಾಗಿ ಕೆಲಸ ಮಾಡಬೇಕಾದವನು ಎಂಬ ಮನ:ಸ್ಥಿತಿ ಉಳ್ಳವರು ಆಯ್ಕೆಯಾಗಿ ಬರಬೇಕು.

ಇದನ್ನು ಹೊರತುಪಡಿಸಿ ಆಯ್ಕೆಯಾಗಿ ಬರುವವರಿಗೆ ತಮ್ಮ ತಮ್ಮ ವ್ಯಾಪಾರ, ವಹಿವಾಟು, ತಮ್ಮವರ ಹಿತಾಸಕ್ತಿ ಮುಖ್ಯವಾದರೆ ಅವರು ಸೀಮಿತ ನೆಲೆಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಒಟ್ಟಾರೆ ವ್ಯವಸ್ಥೆಗಿಂತ ತಮ್ಮವರು, ಮುಖ್ಯ ತಮಗಾಗಿ ಇರುವವರು ಮುಖ್ಯ.‌ ಸೂಚ್ಯವಾಗಿ ಹೇಳುವುದಾದರೆ ಪಾಳೇಪಟ್ಟು ಸಂಸ್ಕೃತಿಯ ಮೂಲ ತತ್ವವೇ ಇದು.

ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂಬುದು ಮಾಯವಾಗಿ ಜಂಗಲ್ ರಾಜ್ ನಿರ್ಮಣವಾಗುತ್ತದೆ. ಅರ್ಥಾತ್, ಶಕ್ತಿ ಇದ್ದವರು ಬದುಕುತ್ತಾರೆ, ದುರ್ಬಲರು ಅಳಿಯುತ್ತಾರೆ.

ಮುನಿರತ್ನ ಬಾಯಿ ಶುದ್ಧ ಮಾಡಿ ಊರಿಗೆ ಬುದ್ಧಿ ಹೇಳಿ

ವಾಸ್ತವವಾಗಿ ವ್ಯವಸ್ಥೆಯ ಚಿಂತನೆಗೆ ಇದು ಮೂಲವಾಗಬೇಕು. ಆದರೆ ಕಾಲಕ್ರಮೇಣ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಒಂದು ಕಾಲದ ನೈತಿಕ ಕೇಂದ್ರಗಳು ಕೂಡಾ ತಮ್ಮ ತಮ್ಮ ನೆಲೆಯಲ್ಲಿ ಯಾವುದೋ ಬಲಿಷ್ಟ ಪಾಳೇಪಟ್ಟುಗಳನ್ನುಪೋಷಿಸುವ ಮನ:ಸ್ಥಿತಿಗೆ ತಲುಪದೆ. ಅಳಿವು-ಉಳಿವಿನ ಹೋರಾಟದಲ್ಲಿ ಇಂತಹ ಮಾರ್ಗ ಹಿಡಿಯುವುದು ಅನಿವಾರ್ಯ ಎಂದು ಭಾವಿಸಿರುವುದು ಕೂಡಾ ಇದಕ್ಕೆ ಮುಖ್ಯ ಕಾರಣ.

ತುಂಬಾ ದೂರ ಹೋಗುವುದೇನೂ ಬೇಡ, ಕೆಲವೇ ದಶಕಗಳ ಹಿಂದೆ ನೆಹರೂ-ಇಂದಿರಾಗಾಂಧಿ ಅವರ ಕುಟುಂಬ ರಾಜಕಾರಣದ ವಿರುದ್ಧ ಇಡೀ ದೇಶವೇ ತಿರುಗಿ ಬಿದ್ದಿತ್ತು. ಇಂತಹ ಹೋರಾಟಗಳ ಫಲವಾಗಿ ಕೇಂದ್ರದಿಂದ ಹಿಡಿದು,‌ರಾಜ್ಯಗಳ ತನಕ ಕಾಂಗ್ರೆಸ್ಸೇತರ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು.

ವಿಪರ್ಯಾಸವೆಂದರೆ ಯಾರು ಕುಟುಂಬ ರಾಜಕಾರಣದ ವಿರುದ್ಧ ಹೋರಾಡಿದರೋ? ಅಂತವರೇ ಕುಟುಂಬ ರಾಜಕಾರಣವನ್ನು ಅಪ್ಪಿ ಆರಾಧಿಸತೊಡಗಿದರು. ಇವತ್ತು ಕರ್ನಾಟಕದ ವಿದಾನಸಭೆಯಲ್ಲಿ ಎಷ್ಟು ಮಂದಿ ಕುಟುಂಬ ರಾಜಕಾರಣದ ಮೂಲಕ ಬಂದವರಿದ್ದಾರೆ ಎಂಬುದನ್ನು ಗಮನಿಸಿದರೆ ಸಾಕು. ಕುಟುಂಬ ರಾಜಕಾರಣದ ಬೇರು ಎಷ್ಟು ಬಲಿಷ್ಟವಾಗುತ್ತಾ ಹೋಗಿದೆ ಎಂಬುದು ಸಾಬೀತಾಗುತ್ತದೆ.

ಅರ್ಥಾತ್,‌ ಕುಟುಂಬ ರಾಜಕಾರಣ ಬೇರೆಯಲ್ಲ,ಪಾಳೇಪಟ್ಟುಗಳ ನಿರ್ಮಾಣ ಎಂಬುದು ಬೇರೆಯಲ್ಲ. ಮೇಲ್ನೋಟಕ್ಕೆ ಕುಟುಂಬ ರಾಜಕಾರಣವನ್ನು ಪಾಳೇಪಟ್ಟು ರಾಜಕಾರಣ ಎಂದು ಅಧಿಕೃತವಾಗಿ ಘೋಷಿಸಲು ಸಾಧ್ಯವಾಗದೆ ಇರಬಹುದು.ಆದರೆ ಕುಟುಂಬ ರಾಜಕಾರಣದ ಅಂತಿಮ ಗುರಿ ಪಾಳೇಪಟ್ಟು ನಿರ್ಮಾಣವೇ ಹೊರತು ಬೇರೆನಲ್ಲ.

ಚುನಾವಣಾ ರಾಜಕೀಯಕ್ಕೆ ಸಚಿವ ರಾಜಣ್ಣ ಗುಡ್‌ಬೈ

ಅಂದ ಹಾಗೆ ಇವತ್ತು ನಮ್ಮ ಕಣ್ಣ ಮುಂದೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಕೆಲವು ನಾಯಕರಾದರೂ ಇದ್ದಾರೆ. ಆದರೆ ಇಂತಹ ನಾಯಕರು ತೆರೆಯ ಹಿಂದೆ ಸರಿಯುತ್ತಿದ್ದಂತೆ ಕುಟುಂಬ ರಾಜಕಾರಣ ಎಂಬುದು ಮತ್ತಷ್ಟು ವಿಸ್ತ್ರತ ನೆಲೆ ಪಡೆದು ಪಾಳೇಪಟ್ಟಿನ ರೂಪ ಪಡೆಯುತ್ತದೆ. ಮತ್ತು ಅವು ಬಯಸಿದವರೇ ಶಾಸಕ, ಸಂಸದರಾಗಿ ಆಯ್ಕೆಯಾಗಿ ರಾಜಕೀಯ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವುದು ಸುಲಭವಾಗುತ್ತದೆ.

ಪಾಳೇಪಟ್ಟುಗಳ ನಿರ್ಮಾಣವಾಗುವುದು ಎಂದರೆ ಬೇರೇನೂ ಅಲ್ಲ. ಅಲ್ಲಿರುವ ಪ್ರಜೆಗಳು ಈ ಪಾಳೇಪಟ್ಟಿನ ಆರಾಧಕರಾಗಿರಬೇಕು, ಇಲ್ಲವಾದರೆ ಶೋಷಣೆಗೆ ಗುರಿಯಾಗಲು ಸಜ್ಜಾಗಿರಬೇಕು.‌ ಇವತ್ತು ಇಂತಹ ವಿಷಯವನ್ನು ಮುಂದಿಟ್ಟುಕೊಂಡು ಚರ್ಚಿಸದೆ ಹೋದರೆ ವ್ಯವಸ್ಥೆಗೆ ಭವಿಷ್ಯವಿರಲು ಸಾಧ್ಯವಿಲ್ಲ.

ಹೀಗಾಗಿ ಇನ್ನು ಕೆಂಗಲ್‌ ಹನುಮಮತಯ್ಯ, ಕಡಿದಾಳ್ ಮಂಜಪ್ಪ,‌ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸರ ಕಾಲಘಟ್ಟದ ಕನಸು ಕಾಣುವುದೂ ಭ್ರಮೆ ಅಷ್ಟೇ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
alepattuchariotdemocracyhandskarnatakaloosenrulestronger
0 FacebookTwitterPinterestEmail
admin

previous post
ಕೋರ್ಟ್ ತೀರ್ಪು ಏನೇ ಬಂದರೂ ನಾನೇ ಮುಖ್ಯಮಂತ್ರಿ
next post
ಬಿಜೆಪಿಯಲ್ಲಿ ಬಾಲಭವನ ವರ್ಸಸ್ ವೃದ್ಧಾಶ್ರಮ

You may also like

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026
Sign In

Prove your humanity


Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ