Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಸಿದ್ದು ಅಲ್ಲಾಡ್ತಿಲ್ಲ, ಗವರ್ನರ್ ಬಿಡ್ತಿಲ್ಲ

by admin September 23, 2024
written by admin September 23, 2024 0 comments 5 minutes read
0FacebookTwitterPinterestEmail
270

ಕಳೆದ ಶನಿವಾರ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಜೆಪಿಯ ಸದಸ್ಯತ್ವ ಅಭಿಯಾನ ಸಭೆ ನಡೆದಿದೆ, ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಥೇಟು ಬಬ್ರುವಾಹನನಂತೆ ಅಬ್ಬರಿಸಿದರಂತೆ.

’ಪಕ್ಷ ಕಟ್ಟೋದು ಅಂದ್ರೆ ಸುಮ್ಮನೆ ಅಲ್ಲ, ಇವತ್ತು ಕರ್ನಾಟಕದಲ್ಲಿ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಅವರು ಕಾರಣ, ಅಂದ ಹಾಗೆ ಯಡಿಯೂರಪ್ಪ ಅವರಿಗೆ ಒಂದಲ್ಲ, ಎರಡು ಸಲ ಸೆಂಟ್ರಲ್ ಮಿನಿಸ್ಟರ್ ಆಗುವ ಆಫರ್ ಬಂತು.

ದೆಹಲಿ ನಾಯಕರ ಈ ಆಫರ್ ಅನ್ನು ಒಪ್ಪಿಕೊಂಡಿದ್ದರೆ ಕೇಂದ್ರದಲ್ಲಿ ಮಂತ್ರಿಯಾಗಿ ಯಡಿಯೂರಪ್ಪನವರು ಅರಾಮವಾಗಿರಬಹುದಿತ್ತು, ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು.

ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಶ್ರಮವಹಿಸಿ ಪಕ್ಷ ಸಂಘಟನೆ ಮಾಡಿದರು, ಒಂದಲ್ಲ, ಎರಡು ಸಲ ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದರು.

ಇವತ್ತು ಅವರ ಬಗ್ಗೆ, ನನ್ನ ಬಗ್ಗೆ ಯಾರು ಅಪಸ್ವರ ಎತ್ತುತ್ತಿದ್ದಾರೋ, ಅವರಿಗೆ ಗೊತ್ತಿರಲಿ, ಪಕ್ಷ ಸಂಘಟನೆ ಮಾಡೋದು ಸುಲಭದ ಕೆಲಸ ಅಲ್ಲ, ಮಾತನಾಡುವುದು ಸುಲಭ, ಆದರೆ ಪಕ್ಷ ಕಟ್ಟೋದು ಕಷ್ಟ, ಹೀಗಾಗಿ ಇವತ್ತು ಯಾರು ಅಪಸ್ವರ ಎತ್ತುತ್ತಿದ್ದಾರೋ, ಅವರ ಬಗ್ಗೆ ನನಗೆ ಮರುಕವಿದೆ’ ಅಂತ ವ್ಯಂಗ್ಯವಾಡಿದರು.

ಹೀಗೆ ವಿಜಯೇಂದ್ರ ಅವರು ಯಾರ ಬಗ್ಗೆ ವ್ಯಂಗ್ಯವಾಡಿದರು ಎಂಬುದು ರಹಸ್ಯವೇನಲ್ಲ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಸೇರಿದಂತೆ ಪಕ್ಷದ ಹಲವು ನಾಯಕರು ಯಡಿಯೂರಪ್ಪ ಕ್ಯಾಂಪಿನ ವಿರುದ್ಧ ಗುಡುಗುತ್ತಲೇ ಇದ್ದಾರೆ.

ಕುತೂಹಲದ ಸಂಗತಿ ಎಂದರೆ ಹಿಂದೆಲ್ಲ ಭಿನ್ನಮತೀಯ ನಾಯಕರು ತಮ್ಮನ್ನು ಟೀಕಿಸಿದರೆ ವಿಜಯೇಂದ್ರ ಸಹಿಸಿಕೊಂಡು ಸುಮ್ಮನಿರುತ್ತಿದ್ದರು, ಆದರೆ ಈ ಸಲ ಅಗ್ರೆಸಿವ್ ಆಗಿ ತಿರುಗಿ ಬಿದ್ದಿರುವುದಲ್ಲದೆ, ನನ್ನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಯಾವಾಗ ಅವರು ಇಂತಹ ಮೆಸೇಜು ರವಾನಿಸಿದರೋ, ಇದಾದ ನಂತರ ಅವರ ವಿರೋಧಿ ಪಡೆ ಎಚ್ಚೆತ್ತಿದೆ, ಅಷ್ಟೇ ಅಲ್ಲ, ವಿಜಯೇಂದ್ರ ಇಷ್ಟು ಬೀಡು ಬೀಸಾಗಿ ಮಾತನಾಡುವುದರ ಹಿಂದೆ ಯಾವ ಶಕ್ತಿ ಇದೆ ಅಂತ ಚೆಕ್ ಮಾಡಿದೆ.

ಅದಕ್ಕೆ ಬಂದಿರುವ ಸದ್ಯದ ಮಾಹಿತಿಯ ಪ್ರಕಾರ ವಿಜಯೇಂದ್ರ ಹೀಗೆ ಬಬ್ರುವಾಹನನ ಪೋಜು ಧರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೊಟ್ಟ ಟಾನಿಕ್ಕೇ ಕಾರಣ.

ಇತ್ತೀಚೆಗೆ ದಿಲ್ಲಿಗೆ ಬಂದು ತಮ್ಮನ್ನು ಭೇಟಿಯಾದ ವಿಜಯೇಂದ್ರ ಅವರಿಗೆ, ’ನೀವು ಯಾವುದಕ್ಕೂ ಯೋಚನೆ ಮಾಡಬೇಡಿ, ಪಕ್ಷ ಕಟ್ಟಲು ಏನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡಿ, ಬಿಬಿಎಂಪಿ ಎಲೆಕ್ಷನ್ ಸದ್ಯಕ್ಕೆ ನಿಮ್ಮ ಟಾರ್ಗೆಟ್ ಆಗಿರಲಿ, ಮೊದಲು ಕರ್ನಾಟಕದ ರಾಜಧಾನಿಯನ್ನು ವಶಪಡಿಸಿಕೊಂಡರೆ ನಂತರ ರಾಜ್ಯವನ್ನು ವಶಪಡಿಸಿಕೊಳ್ಳುವುದು ಸುಲಭ’ ಅಂತ ನಡ್ಡಾ ಹೇಳಿದರಂತೆ.

ಅಂದ ಹಾಗೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಹೆಜ್ಜೆ ಹೆಜ್ಜೆಗೂ ನಡ್ಡಾ ಬ್ರೇಕ್ ಹಾಕುತ್ತಿದ್ದರು.

ಆದರೆ ಇತ್ತೀಚೆಗೆ ಕರ್ನಾಟಕದಿಂದ ಅವರಿಗೆ ಬರುತ್ತಿರುವ ವರದಿ ವಿಜಯೇಂದ್ರ ಅವರನ್ನು ತಾರೀಪು ಮಾಡುತ್ತಿದೆ, ವಿಜಯೇಂದ್ರ ಅವರಂತೆ ಪಕ್ಷ ಸಂಘಟಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳುತ್ತಿವೆ.

ಪರಿಣಾಮ, ಜಗತ್ ಪ್ರಕಾಶ್ ನಡ್ಡಾ ಅವರೀಗ ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ, ಫುಲ್ ಪ್ರೀಡಮ್ಮೂ ಕೊಟ್ಟಿದ್ದಾರೆ.

ಹೀಗಾಗಿಯೇ ವಿಜಯೇಂದ್ರ ತಮ್ಮನ್ನು ಲೆಕ್ಕಿಸದೆ ಆಟ ಮುಂದುವರಿಸುತ್ತಿದ್ದಾರೆ ಎಂಬುದು ಬಿಜೆಪಿ ಭಿನ್ನರಿಗಿರುವ ಮಾಹಿತಿ.

ಸಿದ್ದು ಅಲ್ಲಾಡ್ತಿಲ್ಲ, ಗವರ್ನರ್ ಬಿಡ್ತಿಲ್ಲ

ಈ ಮಧ್ಯೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿದ್ದ ಗವರ್ನರ್ ಗೆಹ್ಲೋಟ್ ಪುನಃ ಸಿದ್ದು ವಿರುದ್ಧ ದಾಳ ಉರುಳಿಸತೊಡಗಿದ್ದಾರೆ.

ಅದು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ರೀ-ಡೂ ಪ್ರಕರಣ ಇರಬಹುದು, ಮೂಡಾದಲ್ಲಿ ಸಿಎಂ ಮೌಖಿಕ ಆದೇಶದ ಮೇಲೆ ಆದ ಕೆಲಸಗಳೇನು ಎಂಬುದೇ ಇರಬಹುದು, ಒಟ್ಟಿನಲ್ಲಿ ಈ ಕುರಿತು ಮಾಹಿತಿ ಕೇಳಿ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಗೆಹ್ಲೋಟ್ ಪತ್ರ ಬರೆದಿದ್ದಾರೆ.

ಇದೇ ರೀತಿ ಸರ್ಕಾರಕ್ಕೆ ತಾವು ಬರೆದ ಪತ್ರಗಳು ಯಾಕೆ ಸೋರಿಕೆಯಾಗುತ್ತಿವೆ ಎಂಬುದರಿಂದ ಹಿಡಿದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಯಾವ ಅವಕಾಶಗಳನ್ನೂ ಗೆಹ್ಲೋಟ್ ಬಿಡುತ್ತಿಲ್ಲ.

ಅರ್ಥಾತ್, ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧದ ವಿಚಾರಣೆಗೆ ತಾವು ಅನುಮತಿ ನೀಡಿದ ಬಗ್ಗೆ ಹೈಕೋರ್ಟ್ ಏನೇ ತೀರ್ಪು ನೀಡಲಿ, ಆದರೆ ಸಿದ್ದರಾಮಯ್ಯ ಅವರಿಗೆ ಮುಜುಗರವಾಗುವ ಇನ್ನಷ್ಟು ಬೆಳವಣಿಗೆಗಳು ನಡೆಯುತ್ತಾ ಹೋಗುವುದು ಸ್ಪಷ್ಟವಾಗಿದೆ.

ಹೀಗಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಸಿದ್ದು ಅಲುಗಾಡ್ತಿಲ್ಲ, ಗವರ್ನರ್ ಬಿಡ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದ ಹಾಗೆ ಇತ್ತೀಚೆಗೆ ಗುಲ್ಬರ್ಗಕ್ಕೆ ಹೋದ ಸಿದ್ದರಾಮಯ್ಯ ಅವರು, ’ನನ್ನನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ’ ಅಂತ ವಿರೋಧಿಗಳಿಗೆ ಸವಾಲು ಹಾಕಿದ್ದರು.

ಸಿದ್ದರಾಮಯ್ಯ ಅವರು ಇಷ್ಟು ಗಟ್ಟಿ ಧ್ವನಿಯಲ್ಲಿ ಸವಾಲು ಹಾಕುತ್ತಿದ್ದಾರೆ ಎಂದರೆ ಏನರ್ಥ, ನಾಳೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿದ ಅನುಮತಿಗೆ ಹೈಕೋರ್ಟ್ ಅಸ್ತು ಎಂದರೂ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಅಂತ ತಾನೇ.

ಹೀಗಾಗಿಯೇ ಗವರ್ನರ್ ಗೆಹ್ಲೋಟ್ ಹೊಸ ಹೊಸ ಅಸ್ತ್ರಗಳನ್ನು ಹುಡುಕಿಯೋ, ಇಲ್ಲವೇ ತುಕ್ಕು ಹಿಡಿದು ಮೂಲೆ ಸೇರಿದ್ದ ಅಸ್ತ್ರಗಳನ್ನೋ ಹೆಕ್ಕಿ ಹೆಕ್ಕಿ ಬಿಸಾಡುತ್ತಿದ್ದಾರೆ.

ಹೀಗಾಗಿ ಮೂಡಾ ಪ್ರಕರಣದ ವಿಷಯದಲ್ಲಿ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ರಿಲೀಫ್ ನೀಡಿದರೂ ಗವರ್ನರ್ ಗೆಹ್ಲೋಟ್ ಸುಮ್ಮನಿರುವುದಿಲ್ಲ ಎಂಬುದು ಕೈ ಪಾಳಯದ ಅನುಮಾನ.

ಇಂತಹ ಅನುಮಾನಗಳ ಬೆನ್ನಲ್ಲೇ ಕೈ ಪಾಳಯಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಎದ್ದೆದ್ದು ಕಾಣುತ್ತಿರುವುದು ಮಾತ್ರ ಸುಳ್ಳಲ್ಲ.

ಆರ್.ಸಿ.ಬಿ.ಗೆ ಈಶ್ವರಪ್ಪ ಕ್ಯಾಪ್ಟನ್

ಇನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮುನಿಸಿಕೊಂಡು ಬಿಜೆಪಿ ಪಾಳಯ ತೊರೆದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆರ್.ಸಿ.ಬಿ. ಕ್ಯಾಪ್ಟನ್ ಆಗಲಿದ್ದಾರೆ.

ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಯಡಿಯೂರಪ್ಪ ಪಾಳಯವನ್ನು ನಡುಗಿಸಿದ್ದ ಈಶ್ವರಪ್ಪ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತು ಕೇಳಿ ಅದನ್ನು ಬರ್ಖಾಸ್ತು ಮಾಡಿದ್ದರು.

ಆದರೆ ಈಗ ಬಿಜೆಪಿಯಿಂದ ಹೊರಗಿರುವ ಈಶ್ವರಪ್ಪ ಹೊಸ ಸಂಘಟನೆ ಕಟ್ಟುವ ತಯಾರಿಯಲ್ಲಿದ್ದಾರೆ.

ಅಂದುಕೊಂಡಂತೆ ನಡೆದರೆ ನವೆಂಬರ್ 20 ರಂದು ಬಾಗಲಕೋಟೆಯಲ್ಲಿ ಈಶ್ವರಪ್ಪ ಆರ್.ಸಿ.ಬಿ. ಕ್ಯಾಪ್ಟನ್ ಆಗುವುದು ನಿಶ್ಚಿತ.

ಅಂದ ಹಾಗೆ ಆರ್.ಸಿ.ಬಿ. ಎಂದರೆ ರಾಯಣ್ಣ-ಚನ್ನಮ್ಮ ಬ್ರಿಗೇಡ್ ಎಂದರ್ಥ.

ಹೀಗೆ ರಾಯಣ್ಣ-ಚನ್ನಮ್ಮ ಬ್ರಿಗೇಡ್ ಕಟ್ಟಲು ಈಶ್ವರಪ್ಪ ಅವರಿಗೆ ಪ್ರೇರಣೆ ನೀಡಿದವರು ಪಂಚಮಸಾಲಿ ಮಠಾಧೀಶರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅವರ ಪ್ರಕಾರ, ಬಡವರು ಎಲ್ಲ ಸಮುದಾಯಗಳಲ್ಲೂ ಇದ್ದಾರೆ, ಹಿಂದುಳಿದವರು, ದಲಿತರು ಮಾತ್ರವಲ್ಲ, ಬ್ರಾಹ್ಮಣರು, ಲಿಂಗಾಯತರಲ್ಲೂ ಇದ್ದಾರೆ, ಹೀಗಾಗಿ ಎಲ್ಲ ಜಾತಿಗಳ ಬಡವರಿಗಾಗಿ ಆರ್.ಸಿ.ಬಿ. ಕಟ್ಟಿ ಅಂತ ಸ್ವಾಮೀಜಿಗಳು ಹೇಳಿದ್ದಾರೆ.

ಅವರು ಈ ಮಾತು ಹೇಳುವಾಗ ಈಶ್ವರಪ್ಪ ಅವರ ಜತೆಯಲ್ಲಿ ಬಿಜೆಪಿಯ ಭಿನ್ನಮತೀಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡಾ ಇದ್ದುದು ವಿಶೇಷ.

ಅರ್ಥಾತ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ವಿರೋಧಿಸುವ ಶಕ್ತಿಗಳು ಒಂದು ದೊಡ್ಡ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿವೆ.

ಈ ವೇದಿಕೆಗೆ ದೊಡ್ಡ ಮಟ್ಟದ ಪವರ್ ಸಿಗಲಿದೆ ಅಂತ ಹೇಳಲು ಮತ್ತೊಂದು ಕಾರಣವೂ ಇದೆ, ಅದೆಂದರೆ ರಾಜ್ಯ ಬಿಜೆಪಿಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿ ವರಿಷ್ಟರು ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ, ತಮ್ಮ ಸುತ್ತ ಆಪ್ತರನ್ನಷ್ಟೇ ಇಟ್ಟುಕೊಂಡು ವಿಜಯೇಂದ್ರ ಆಟವಾಡುತ್ತಿದ್ದಾರೆ ಅಂತ ಭಿನ್ನರು ಅದೆಷ್ಟೇ ಕಂಪ್ಲೇಂಟ್ ಕೊಡಲಿ, ಪಕ್ಷದ ವರಿಷ್ಟರು ಕ್ಯಾರೇ ಅನ್ನುತ್ತಿಲ್ಲ, ಬದಲಿಗೆ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಬೇಡಿ ಅಂತ ಫರ್ಮಾನು ಹೊರಡಿಸುತ್ತಿದ್ದಾರೆ.

ಪರಿಣಾಮ, ವಿಜಯೇಂದ್ರ ವಿರುದ್ಧ ಹೋರಾಡಲು ಬಿಜೆಪಿಯ ಅತೃಪ್ತರಿಗೆ ಒಂದು ದೊಡ್ಡ ವೇದಿಕೆ ಬೇಕಾಗಿದೆ, ರಾಯಣ್ಣ-ಚನ್ನಮ್ಮ ಬ್ರಿಗೇಡ್ ಯಾಕೆ ಬಲಿಷ್ಟವಾಗಲಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ.

ಹೀಗಾಗಿ ಈ ನಾಯಕರ ಬೆಂಬಲದೊಂದಿಗೆ ನವೆಂಬರ್ 20 ರಂದು ತಲೆ ಎತ್ತಲಿರುವ ಆರ್.ಸಿ.ಬಿ. ಬಿಜೆಪಿ ವರಿಷ್ಟರ ಪಾಲಿಗೆ ತಲೆನೋವು ತರುವುದಂತೂ ಗ್ಯಾರಂಟಿ.

ಮಿತ್ರಕೂಟದ ವಿರುದ್ಧ ನಾಲ್ಕನೇ ಶಕ್ತಿ?

ಇನ್ನು ಸೆಪ್ಟೆಂಬರ್ 22 ರ ಭಾನುವಾರ ಬೆಂಗಳೂರಿನ ಏಟ್ರಿಯಾ ಹೋಟೆಲಿನಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ.

ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕನ್ನಡ ಚಳವಳಿ ನಾಯಕ ನಾರಾಯಣಗೌಡ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಬಹುಜನ ಸಮಾಜ ಪಕ್ಷದ ಗೋಪಿ ಸೇರಿದಂತೆ ಹಲ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆ ಬಗ್ಗೆ ಒಲವು ವ್ಯಕ್ತವಾಗಿದೆ.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುತ್ತಿದ್ದು ಬಿಜೆಪಿ-ಜೆಡಿಎಸ್ ಮಿತ್ರಕೂಟದ ಶಕ್ತಿ ಹೆಚ್ಚಾಗುತ್ತಿದೆ, ಈ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಕಾಂಗ್ರೆಸ್ ಪಕ್ಷವೊಂದರಿಂದ ಸಾಧ್ಯವಿಲ್ಲ.

ಹೇಗಿದ್ದರೂ ಕನ್ನಡ ಪರ ಸಂಘಟನೆ, ರೈತ ಸಂಘಟನೆಗಳಲ್ಲೇ ಒಂದು ಕೋಟಿಯಷ್ಟು ಸದಸ್ಯರಿದ್ದಾರೆ, ಉಳಿದಂತೆ ಎಲ್ಲರೂ ಸೇರಿದರೆ ರಾಜ್ಯದ ಎಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು, ಹೀಗಾಗಿ ಹೊಸ ಪಕ್ಷ ಕಟ್ಟೋಣ ಅಂತ ಸಭೆಯಲ್ಲಿದ್ದ ನಾಯಕರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಈ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಲಿದ್ದಾರೆ.

ಈ ಸಭೆಯ ನಂತರ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮಿತ್ರಕೂಟದ ಶಕ್ತಿ ಕುಗ್ಗಿಸಲು ನಾಲ್ಕನೇ ಶಕ್ತಿ ತಲೆ ಎತ್ತಲಿದೆ.

ಲಾಸ್ಟ್ ಸಿಪ್

ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರಂತೆ.

ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಾ, ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಈ ನಾಯಕರು ಕೇಳಿದ್ದಾರೆ.

‘ಸಾರ್, ವರಿಷ್ಟರು ಹೇಳಿದ ಪ್ರಕಾರ ಈಗಾಗಲೇ ಸಂಪುಟ ಪುನರ್ರಚನೆ ಪ್ರಕ್ರಿಯೆ ಮುಗಿಯಬೇಕಿತ್ತು, ಇನ್‌ಫ್ಯಾಕ್ಟ್ ಸಿದ್ದರಾಮಯ್ಯ ಅವರ ಸಂಪುಟದಲ್ಲಿರಬೇಕಿದ್ದ ಮಿನಿಮಮ್ ಎರಡು ಡಜನ್‌ನಷ್ಟು ನಾಯಕರು ಹೊರಗಿದ್ದಾರೆ, ಈಗ ಸಂಪುಟದಲ್ಲಿರುವ ಹಲವರು ನಿಷ್ಕ್ರಿಯರಾಗಿದ್ದಾರೆ, ಹೀಗಾಗಿ ಸರ್ಕಾರಕ್ಕೆ ಇಮೇಜು ಬರಬೇಕೆಂದರೆ ಅರ್ಹರಿಗೆ ಮಂತ್ರಿಗಿರಿ ಸಿಗಬೇಕು ಸಾರ್ ಎಂದಿದ್ದಾರೆ.

ಈ ನಾಯಕರಾಡಿದ ಮಾತನ್ನು ಮೌನವಾಗಿ ಕೇಳಿಸಿಕೊಂಡ ಸುರ್ಜೇವಾಲ, ನೀವು ಹೇಳಿದ್ದು ನಿಜ, ಆದರೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಪ್ರಕರಣ ಜೀವಂತವಾಗಿದೆ, ಅದು ಇತ್ಯರ್ಥವಾಗದೆ ಸಂಪುಟ ಪುನರ್ರಚನೆಯಂತಹ ಕೆಲಸಕ್ಕೆ ಕೈ ಹಾಕುವುದು ಹೇಗೆ ಎಂದಿದ್ದಾರೆ.

ಹಾಗೆಯೇ ಮುಂದುವರಿದು, ಹೇಗಿದ್ದರೂ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಬರುತ್ತಿದೆ, ಕರ್ನಾಟಕದಲ್ಲೂ ಮೂರು ಕ್ಷೇತ್ರಗಳ ಉಪಚುನಾವಣೆ ಇದೆ, ಅಲ್ಲಿಯವರೆಗೆ ಏನು ಮಾಡಲು ಸಾಧ್ಯ, ಹೀಗಾಗಿ ಡಿಸೆಂಬರ್ ತನಕ ಸಂಪುಟ ಪುನರ್ರಚನೆ ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಯಾವಾಗ ಸುರ್ಜೇವಾಲಾ ಈ ಮಾತು ಹೇಳಿದರೋ, ಇದಾದ ನಂತರ ಈ ನಾಯಕರು, ಸಿದ್ರಾಮಯ್ಯ ಪ್ರಕರಣ ಇತ್ಯರ್ಥವಾದರೂ ಅಷ್ಟೇ, ಆಗದಿದ್ದರೂ ಅಷ್ಟೇ, ಸಂಪುಟ ಪುನರ್ರಚನೆ ಮಾತ್ರ ಗಗನ ಕುಸುಮವೇ ಸೈ ಅಂತ ಹೇಳತೊಡಗಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
basana gowda patil yatnalbjpbs yadiyurappaby vijayendracm siddaramaiahCT Ravigovernorjdsjp naddaks eshwarappamuda scamrcb
0 FacebookTwitterPinterestEmail
admin

previous post
ಕಾವೇರಿ ಆರತಿ ಹೆಸರಲ್ಲಿ ಸಚಿವರ ಮೋಜು-ಮಸ್ತಿ
next post
ಕುಡಿದು ವಾಹನ ಚಲಾಯಿಸಿದರೆ ಲೈಸೆನ್ಸ್ ಕ್ಯಾನ್ಸಲ್

You may also like

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ