Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು?

by admin January 27, 2025
written by admin January 27, 2025 0 comments 5 minutes read
0FacebookTwitterPinterestEmail
426

ಕಳೆದ ವಾರ ಬಿಜೆಪಿಯ ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲ ನಾಯಕರು ದಿಲ್ಲಿಗೆ ಹೋಗಿದ್ದಾರೆ, ಹೀಗೆ ಹೋದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ಬಳಿ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ,
ಅವರ ಪ್ರಕಾರ, ಕರ್ನಾಟಕದ ರಾಜಕೀಯ ಬೆಳವಣಿಗೆಗಳು ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದನ್ನು ಅನಿವಾರ್ಯವಾಗಿಸಲಿವೆ, ಹೀಗಾಗಿ ರಾಜ್ಯ ಬಿಜೆಪಿಯ ನಾಯಕತ್ವ ಹಿರಿಯ ನಾಯಕರಿಗೆ ದಕ್ಕಬೇಕು.

ಕಾರಣ, ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಹುತೇಕರು ನಂಬಿಕೆ ಕಳೆದುಕೊಂಡಿದ್ದಾರೆ, ಹೀಗಾಗಿ ಅವರನ್ನು ತಕ್ಷಣ ಕೆಳಗಿಳಿಸಿ ಬೇರೆಯವರನ್ನು ನೇಮಿಸಬೇಕು ಎಂಬುದು ಯತ್ನಾಳ್ ಗ್ಯಾಂಗಿನ ವಾದ.

ಅಂದ ಹಾಗೆ, ಪಕ್ಷಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಬೇಕು ಎಂಬ ಯತ್ನಾಳ್ ಗ್ಯಾಂಗಿನ ವಾದ ಹೊಸತೇನಲ್ಲ, ಆದರೆ, ಈ ಸಲ ನಡ್ಡಾ ಅವರನ್ನು ಭೇಟಿ ಮಾಡಿದ ಈ ಗ್ಯಾಂಗು ವಿಜಯೇಂದ್ರ ಅವರನ್ನು ಯಾವ ಕಾರಣಕ್ಕಾಗಿ ಬದಲಿಸಬೇಕು ಅಂತ ಹೇಳಿರುವುದು ವಿಶೇಷ.

’ಸಾರ್, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬದಲು ಮುಂದಿನ ವಿಧಾನಸಭೆ ಚುನಾವಣೆ ಹತ್ತಿರವಾಗುವ ತನಕ ಬೇರೊಬ್ಬರನ್ನು ನೇಮಕ ಮಾಡಿ, ಇದನ್ನು ನಾವು ನಿಮಗೇಕೆ ಹೇಳುತ್ತಿದ್ದೇವೆ ಎಂದರೆ ಕರ್ನಾಟಕದ ರಾಜಕಾರಣ ಅಂತಹ ಸಂಕ್ರಮಣ ಸ್ಥಿತಿಯಲ್ಲಿದೆ’ ಅಂತ ಈ ಗ್ಯಾಂಗು ಹೇಳತೊಡಗಿದಾಗ ನಡ್ಡಾ ಕುತೂಹಲದಿಂದ ಕಿವಿ ಅರಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತು ಮುಂದುವರಿಸಿದ ಯತ್ನಾಳ್ ಮತ್ತಿತರ ನಾಯಕರು, ’ಸಾರ್, ಇವತ್ತಿನ ಸ್ಥಿತಿ ನೋಡಿದರೆ 2026ರ ಮಾರ್ಚ್ ವೇಳೆಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದು, ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ನಮಗಿರುವ ಮಾಹಿತಿಯ ಪ್ರಕಾರ, 2025ರ ನವೆಂಬರ್ ಹೊತ್ತಿಗೆ ಅಧಿಕಾರ ಹಂಚಿಕೆಯ ಮಾತು ಕಾಂಗ್ರೆಸ್ ಪಕ್ಷವನ್ನು ತಲ್ಲಣಗೊಳಿಸಲಿದೆ, ಯಾಕೆಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಂಚಿಕೆ ಮಾಡಲು ಪಕ್ಷದ ವರಿಷ್ಟರು ನಿರ್ಧರಿಸಿದ್ದಾರೆ.

ಈ ಕುರಿತಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರ ಸಮ್ಮುಖದಲ್ಲೇ ಒಪ್ಪಂದ ಪತ್ರ ಸಿದ್ಧವಾಗಿದೆ.

ಅದರ ಪ್ರಕಾರ, ಈ ವರ್ಷ ನವೆಂಬರ್ ಹೊತ್ತಿಗೆ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕು.

ಆದರೆ ಈಗಿನ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುವುದಿಲ್ಲ, ಯಾಕೆಂದರೆ, ಅವರ ಬೆಂಬಲಿಗ ಸಚಿವರ್ಯಾರೂ ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಬಯಸುವುದಿಲ್ಲ, ಕಾರಣ, ಈಗ ಉಪಮುಖ್ಯಮಂತ್ರಿಯಾಗಿರುವಾಗಲೇ ಅವರು ತಮ್ಮನ್ನು ಸೈಡ್‌ಲೈನ್ ಮಾಡಲು ಯತ್ನಿಸುತ್ತಿದ್ದಾರೆ, ಇಂತವರು ನಾಳೆ ಸಿಎಂ ಆದರೆ ಸುಮ್ಮನಿರುತ್ತಾರಾ.., ನೋ ಚಾನ್ಸ್.., ಹೀಗಾಗಿ ನೀವು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಡಿ ಎಂಬುದು ಈ ಬೆಂಬಲಿಗ ಸಚಿವರ ವಾದ.

ಅದರಲ್ಲೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಂತೂ, ನೀವು ಅಧಿಕಾರ ಬಿಟ್ಟುಕೊಡುವುದೇ ಆದರೆ ನಾವು ಹೇಳಿದವರು ಸಿಎಂ ಆಗಬೇಕು, ಇಲ್ಲವೇ ನಾವು ಐವತ್ತರಷ್ಟು ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದೇವೆ ಅಂತ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.

ಹೀಗೆ ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಿ ಇಂತಹ ಬೆಳವಣಿಗೆ ನಡೆದಿದ್ದರೆ, ಅತ್ತ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಲ್ಲೂ ಹಲವು ಬೆಳವಣಿಗೆಗಳು ನಡೆದಿವೆ.

ಅದರ ಪ್ರಕಾರ, ನವೆಂಬರ್ ಹೊತ್ತಿಗೆ ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೆ ಕ್ಲೈಮು ಮಾಡುತ್ತಾರೆ, ಎಷ್ಟೇ ಆದರೂ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ದೊಡ್ಡ ಮಟ್ಟದ ಇನ್‌ವೆಸ್ಟ್ ಮಾಡಿದವರು ಅವರು, ಹೀಗಾಗಿ ಅವರು ಕ್ಲೈಮು ಮಾಡಿದಾಗ ಹೈಕಮಾಂಡ್ ನಾಯಕರು ಇಲ್ಲ ಅನ್ನುವುದು ಕಷ್ಟ.

ಹೀಗಾಗಿ ಅವರು ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟುಕೊಡಲು ಹೇಳುತ್ತಾರೆ, ಅದರೆ ಅದನ್ನು ಸಿದ್ದರಾಮಯ್ಯ ಒಪ್ಪದೆ ಹೋದಾಗ ಸಂಘರ್ಷ ಪ್ರಾರಂಭವಾಗುತ್ತದೆ ಮತ್ತು ಈ ಸಂಘರ್ಷ ಸರ್ಕಾರದ ಪತನಕ್ಕೆ ಕಾರಣವಾಗಲಿದೆಯಲ್ಲದೆ, ಕರ್ನಾಟಕ ಮಧ್ಯಂತರ ಚುನಾವಣೆಗೆ ಅಣಿಯಾಗುವುದು ಅನಿವಾರ್ಯವಾಗುತ್ತದೆ.

ನಾವು ಇದನ್ನೇಕೆ ಹೇಳುತ್ತಿದ್ದೇವೆ ಎಂದರೆ ಕಾಂಗ್ರೆಸ್ ಸರ್ಕಾರ ಪತನವಾದಾಗ ಪರಿಸ್ಥಿತಿಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಶಕ್ತಿ ಬಿಜೆಪಿಗಿರಬೇಕು.

ಅದರೆ, ಆ ಸಂದರ್ಭದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿದ್ದರೆ ಅದು ಕಷ್ಟ, ಯಾಕೆಂದರೆ, ಅವರ ನಾಯಕತ್ವದಡಿ ಹೋರಾಡಲು ಬಹುತೇಕ ನಾಯಕರು ಸಿದ್ಧರಿಲ್ಲ.

ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲೇಕು ಅಂತ ಯತ್ನಾಳ್ ಟೀಮು ಒತ್ತಾಯಿಸಿದಾಗ, ನೋಡೋಣ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಅಂತ ತೀರ್ಮಾನಿಸಿದ ಮೇಲೆ ಅದನ್ನು ತಡೆಯುವುದು ಕಷ್ಟ ಅನ್ನಿಸುತ್ತದೆ ಅಂತ ನಡ್ಡಾ ಎಂದರಂತೆ.

ಗೌಡ್ರ ಮನೆಯಲ್ಲಿ ನಡೆದಿದ್ದೇನು?

ಹೀಗೆ ಯತ್ನಾಳ್ ಅಂಡ್ ಟೀಮು ದಿಲ್ಲಿಗೆ ಹೋಗಿ ಬಂದ ಮೇಲೆ ಜನವರಿ ೨೨ರ ಬುಧವಾರ ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಮನೆಯಲ್ಲಿ ಒಂದು ಸಭೆ ನಡೆದಿದೆ.

ಈ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಸಿ.ಟಿ.ರವಿ, ಡಾ.ಸುಧಾಕರ್, ದಾಸರಹಳ್ಳಿ ಮುನಿರಾಜು ಮತ್ತಿತರರು ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನ್ಯಾಯಯುತವಾಗಿ ನಡೆಯಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇವತ್ತು ಬಿಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಬಹುತೇಕರು ವಿಜಯೇಂದ್ರ ಅವರ ಒತ್ತಾಸೆಯಿಂದ ನೇಮಕಗೊಂಡವರು, ಹಲವು ಮಂಡಲ ಅಧ್ಯಕ್ಷರ ಕತೆಯೂ ಇದೇ.

ನಾಳೆ ಚುನಾವಣೆಯಲ್ಲಿ ಇವರೇ ಮತದಾರರಾದರೆ ಅವರು ವಿಜಯೇಂದ್ರ ಅವರ ಪರವಾಗಿ ನಿಲ್ಲುತ್ತಾರೆ, ಪರಿಸ್ಥಿತಿ ಹೀಗಿರುವಾಗ ಚುನಾವಣೆ ನಡೆದರೆ ಏನಾಗುತ್ತದೆ, ವಿಜಯೇಂದ್ರ ಗೆದ್ದೇ ಗೆಲ್ಲುತ್ತಾರೆ.

ಹೀಗೆ ಪೂರ್ವ ನಿರ್ಧರಿತ ಎಪಿಸೋಡು ನಡೆಯುವುದಾದರೆ ಅದರಲ್ಲಿ ಅರ್ಥವೇ ಇಲ್ಲ, ಹೀಗಾಗಿ ಚುನಾವಣೆ ನಡೆಯುವುದಾದರೆ ಮೊದಲು ಇಂತಹ ಮತದಾರರನ್ನು ಕಟ್ ಮಾಡಬೇಕು.

ಅರ್ಥಾತ್, ಈಗ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡವರ ಪೈಕಿ ಬೆಂಗಳೂರಿನ ಮೂವರು ಅಧ್ಯಕ್ಷರು ಸೇರಿದಂತೆ ಹದಿನಾಲ್ಕು ಜಿಲ್ಲಾಧ್ಯಕ್ಷರನ್ನು ಬದಲಿಸಬೇಕು.

ಅಂದ ಹಾಗೆ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಅಂತಲ್ಲ, ಪಕ್ಷದ ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲಿ ನಡೆದಿರುವುದೂ ಇದೇ.

ಹೀಗೆ ವಿಜಯೇಂದ್ರ ಅವರ ಆಪ್ತರೇ ಹೆಚ್ಚಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಿಸಿ ಅಂತ ಪಕ್ಷದ ಬಹುತೇಕ ಹಿರಿಯ ನಾಯಕರು ಒತ್ತಾಯಿಸುತ್ತಲೇ ಇದ್ದಾರೆ, ಅಷ್ಟೇ ಅಲ್ಲ, ಇದರ ಪರಿಣಾಮವಾಗಿ ನಾಯಕರಲ್ಲಿ ವೈಮನಸ್ಸು ಬೆಳೆಯುತ್ತಲೇ ಇದೆ.

ಹೀಗಾಗಿ ಇದನ್ನೆಲ್ಲ ಸರಿಪಡಿಸದೆ ಮುಂದುವರಿದರೆ ಪಕ್ಷದಲ್ಲಿ ಒಗ್ಗಟ್ಟು ಬರುವುದು ಹೇಗೆ, ಎಲ್ಲರೂ ಒಗ್ಗೂಡಿ ಒಮ್ಮತದಿಂದ ದುಡಿಯುವುದು ಹೇಗೆ, ಅಂತ ಮಾತನಾಡಿಕೊಂಡ ಈ ನಾಯಕರು ಅಂತಿಮವಾಗಿ ಸಭೆಯ ಸಂದೇಶವನ್ನು ವರಿಷ್ಟರಿಗೆ ತಲುಪಿಸಲು ನಿರ್ಧರಿಸಿದ್ದಾರೆ.

ಕುತೂಹಲದ ಸಂಗತಿ ಎಂದರೆ, ಈ ಸಭೆಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಮತ್ತು ಸಂಸದ ಡಾ.ಸುಧಾಕರ್ ಅವರು, ವರಿಷ್ಟರು ಬಯಸಿದರೆ ರಾಜ್ಯಾಧ್ಯಕ್ಷ ಹುದ್ದೆಯನ್ನು ನಿಭಾಯಿಸಲು ನಾವು ರೆಡಿ ಅಂದಿದ್ದಾರಂತೆ.

ಬೊಮ್ಮಾಯಿ, ಅಶೋಕ್ ರೆಬೆಲ್ ಆಗಿದ್ದೇಕೆ?

ಇನ್ನು ಸದಾನಂದಗೌಡರ ಮನೆಯಲ್ಲಿ ನಡೆದ ಸಭೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಹೋದ ಬೆಳವಣಿಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಯಾಕೆಂದರೆ, ಇವರಿಬ್ಬರು ಇತ್ತೀಚಿನವರೆಗೆ ಯಡಿಯೂರಪ್ಪ ಅವರ ಜತೆಗಿದ್ದವರು, ಅದರೆ ಈಗ ಇದ್ದಕ್ಕಿದ್ದಂತೆ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಪೈಕಿ ಬೊಮ್ಮಾಯಿ ಅವರು ಇತ್ತೀಚೆಗೆ ನಡೆದ ಉಪಚುನಾವಣೆಯ ನಂತರ ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ, ಕಾರಣ, ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಮ್ಮ ಪುತ್ರ ಭರತ್ ಬೊಮ್ಮಾಯಿ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಅವರೇ ಕಾರಣ ಎಂಬುದು ಬೊಮ್ಮಾಯಿ ಸಿಟ್ಟು, ಈ ಇಬ್ಬರು ಸೇರಿ ಕ್ಷೇತ್ರದ ಲಿಂಗಾಯತ ಮತ ಬ್ಯಾಂಕನ್ನು ಒಡೆದರು, ಆ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣರಾದರು ಎಂಬುದು ಬೊಮ್ಮಾಯಿ ಕೋಪ, ಹೀಗಾಗಿ ಅವರು ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಅಶೋಕ್ ಅಸಮಾಧಾನಕ್ಕೆ ಅವರ ಕಿವಿ ತಲುಪಿದ ಒಂದು ಮೆಸೇಜು ಕಾರಣ, ಅದರ ಪ್ರಕಾರ ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ವಿಜಯೇಂದ್ರ ಅವರು ’ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಅವರ ಪರ್ಫಾರ್ಮೆನ್ಸ್ ಡಲ್ಲು’ ಅಂದಿದ್ದರಂತೆ.

ಹೀಗೆ ವಿಜಯೇಂದ್ರ ತಮ್ಮ ಬಗ್ಗೆ ವರಿಷ್ಟರಿಗೆ ಕೊಟ್ಟ ರಿಪೋರ್ಟಿನ ವಿವರ ಮರುದಿನವೇ ಅಶೋಕ್ ಕಿವಿಗೆ ಬಿದ್ದಿದೆ, ಪರಿಣಾಮ, ಕೆರಳಿದ ಅಶೋಕ್ ಕೂಡಾ ಈಗ ವಿಜಯೇಂದ್ರ ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.

ಅಗರ್ವಾಲ್‌ಗೇ ಗುರ್ ಎಂದ ಕಟ್ಟಾ ಟೀಮು

ಈ ಮಧ್ಯೆ ರಾಜ್ಯ ಬಿಜೆಪಿಯ ಒಳಬೇಗುದಿಯನ್ನು ಅರಿಯಲು ಪಕ್ಷದ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಕಳೆದ ವಾರ ಸಭೆ ನಡೆಸಿದರಲ್ಲ, ಈ ಸಭೆಯ ನಂತರ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ ಮತ್ತಿತರರು ಅಗರ್ವಾಲ್ ಅವರನ್ನು ಅಮರಿಕೊಂಡಿದ್ದಾರೆ.

’ಅಲ್ಲ ಸಾರ್, ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿವೆ, ಆದರೆ ಈ ಕುರಿತು ಚರ್ಚಿಸಲು ನೀವು ನಮ್ಮೊಂದಿಗೆ ಏಕೆ ಸಭೆ ಮಾಡುತ್ತಿಲ್ಲ’ ಅಂತ ಪ್ರಶ್ನಿಸಿದ್ದಾರೆ.

ಆಗ ಉತ್ತರಿಸಿದ ಅಗರ್ವಾಲ್, ’ಅರೇ ಮಾತೆತ್ತಿದರೆ ನಿಮ್ಮನ್ನೆಲ್ಲ ಕರೆಯುತ್ತಾ ಕೂರಲು ಆಗುತ್ತದಾ, ನೀವೇನು ಹಾಲಿ ಎಮ್ಮೆಲ್ಲೆಗಳಾ, ಎಮ್ಮೆಲ್ಸಿಗಳಾ’ ಎಂದು ಕೇಳಿದ್ದಾರೆ.

ಆಗೆಲ್ಲ ಉರಿದುಬಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರರು, ’ನಾವು ಹಾಲಿ ಎಮ್ಮೆಲ್ಲೆಗಳು, ಎಮ್ಮೆಲ್ಸಿಗಳು ಅಲ್ಲ ಅಂದ್ರೆ ರಾಜಕೀಯವಾಗಿ ಶಕ್ತಿ ಇಲ್ಲದವರು ಅಂತ ಅರ್ಥಾನಾ ಅಥವಾ ಇರುವ ಅರವತ್ತು ಪ್ಲಸ್ ಶಾಸಕರನ್ನು ಕಟ್ಟಿಕೊಂಡು ರಾಜ್ಯದಲ್ಲಿ ಪಕ್ಷ ಕಟ್ಟಬಹುದು ಅಂತೇನಾದರೂ ನೀವು ತೀರ್ಮಾನಿಸಿದ್ದೀರಾ’ ಅಂತ ಅಬ್ಬರಿಸಿದ್ದಾರೆ, ಅಷ್ಟೇ ಅಲ್ಲ, ಮಾತು ಮುಂದುವರಿಸಿ, ’ನಾವೂ ಮೂರು, ನಾಲ್ಕು ಬಾರಿ ಶಾಸಕರಾದವರು, ಸಚಿವರಾಗಿ ಕೆಲಸ ಮಾಡಿದವರು, ರಾಜ್ಯದಲ್ಲಿ ಪಕ್ಷಕ್ಕೆ ಭದ್ರ ನೆಲೆ ಅಂತಿದ್ದರೆ ಅದರಲ್ಲಿ ನಮ್ಮ ಕೊಡುಗೆಯೂ ಇದೆ, ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಿ, ಈಗ ನೀವು ಹೇಳುತ್ತಿರುವುದು ಹೇಗಿದೆ ಎಂದರೆ ನಿಮ್ಮಿಂದೇನು ಪ್ರಯೋಜನ ಅನ್ನುವಂತಿದೆ.

ಆದರೆ ಇವೆಲ್ಲ ನಡೆಯುವುದಿಲ್ಲ, ಇನ್ನು ಮೇಲೆ ರಾಜ್ಯ ಬಿಜೆಪಿಯ ಬೆಳವಣಿಗೆಗಳೇನೇ ಇದ್ದರೂ ನಮ್ಮನ್ನು ಕರೆಸಿ ಮಾತನಾಡಬೇಕು’ ಅಂತ ತಾಕೀತು ಮಾಡಿದ್ದಾರೆ.

ಯಾವಾಗ ಹಿರಿಯ ನಾಯಕರ ದಂಡು ಹೀಗೆ ಗುಟುರು ಹಾಕತೊಡಗಿತೋ, ಆಗ ರಾಧಾಮೋಹನದಾಸ್ ಅಗರ್ವಾಲ್ ಬೆಚ್ಚಿ ಬಿದ್ದಿದ್ದಾರೆ, ಅಷ್ಟೇ ಅಲ್ಲ, ಕುಳಿತ ಜಾಗದಿಂದ ಮೇಲೆದ್ದು ಹೊರಡಲು ಅಣಿಯಾಗಿದ್ದಾರೆ.

ಅಷ್ಟಾದರೂ ಪಟ್ಟು ಬಿಡದ ಕಟ್ಟಾ ಮತ್ತಿತರರು, ’ಇಷ್ಟು ದಿನದಿಂದ ಯತ್ನಾಳ್ ಮತ್ತಿತರರು ರಾಜ್ಯ ನಾಯಕತ್ವದ ವಿರುದ್ಧ ಮಾತನಾಡುತ್ತಲೇ ಇದ್ದಾರೆ, ಯಾಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ’ ಅಂತ ಕೇಳಿದ್ದಾರೆ.

ಆಗ ಅಗರ್ವಾಲ್ ಅವರು, ’ಯತ್ನಾಳ್ ಪಕ್ಷದ ಹಿರಿಯ ನಾಯಕರು, ಹೀಗಾಗಿ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಅಂತ ಹೇಳಿ ರಪಕ್ಕನೆ ಪಕ್ಕದಲ್ಲಿದ್ದ ರೂಮು ಸೇರಿಕೊಂಡಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
b y vijayendrabasanagowda patil yatnalbjp dissidentsd v sadananda gowdaj p naddar.ashok
0 FacebookTwitterPinterestEmail
admin

previous post
ಮೈಕ್ರೊ ಫೈನಾನ್ಸ್ ಹಾವಳಿ ತಡೆಗೆ ಸುಗ್ರೀವಾಜ್ಞೆ
next post
ಮುಡಾ ಪ್ರಕರಣ: ಇ.ಡಿ. ನೋಟಿಸ್ ರಾಜಕೀಯ ಪಿತೂರಿ

You may also like

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ