Saturday, September 5, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, September 5, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಉದ್ಯೋಗರಾಜಕೀಯರಾಜ್ಯರಾಷ್ಟ್ರ

ಇಂದಿರಾ ಕಿಟ್‌ಗೆ ಕಾಂಗ್ರೆಸ್ ವರಿಷ್ಠರ ತಾತ್ಕಾಲಿಕ ಬ್ರೇಕ್

by KM Shivaraju May 8, 2026
written by KM Shivaraju May 8, 2026 0 comments 2 minutes read
0FacebookTwitterPinterestEmail
153

ಬೆಂಗಳೂರು:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಜೊತೆಗೆ ಎಣ್ಣೆ, ಬೇಳೆ ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕಿಟ್ ಯೋಜನೆಗೆ ಕಾಂಗ್ರೆಸ್ ವರಿಷ್ಠರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

ಯೋಜನೆ ಜಾರಿಯಲ್ಲಿ ಭ್ರಷ್ಟಾಚಾರ ಆರೋಪ ಎದುರಾಗಲಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ದಿನೋಪಯೋಗಿ ಪದಾರ್ಥ ತೀರ್ಮಾನ

ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬಕ್ಕೆ ಮಾಸಿಕ ಪ್ರತಿ ಯೂನಿಟ್‌ಗೆ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವ ಬದಲು ಐದು ಕೆ.ಜಿ. ಅಕ್ಕಿ ಹಾಗೂ ಇತರೆ ದಿನೋಪಯೋಗಿ ಆಹಾರ ಪದಾರ್ಥಗಳನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು.

ಯೋಜನೆ ಅನುಷ್ಟಾನಕ್ಕೆ ವಾರ್ಷಿಕ 6,000 ಕೋಟಿ ರೂ. ತಗಲುತ್ತಿದ್ದರೂ, ವಾರ್ಷಿಕವಾಗಿ ಸರ್ಕಾರಕ್ಕೆ ಸ್ವಲ್ಪಮಟ್ಟಿನ ಉಳಿತಾಯವೇ ಆಗುತ್ತಿತ್ತು.

ಇಂದಿರಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಒಂದು ಲೀಟರ್ ಕಡಲೇಕಾಯಿ ಎಣ್ಣೆ ಇಲ್ಲವೇ ಸೂರ್ಯಕಾಂತಿ ಎಣ್ಣೆ, ತಲಾ ಒಂದು ಕೆ.ಜಿ. ಸಕ್ಕರೆ, ಉಪ್ಪು ಹಾಗೂ ತೊಗರಿಬೇಳೆ ನೀಡಲು ಸಿದ್ಧತೆ ನಡೆಸಲಾಗಿತ್ತು.

ನಾಲ್ಕು ಸದಸ್ಯರಿಗೆ ಒಂದು ಕಿಟ್

ಕುಟುಂಬದ ಒಂದರಿಂದ ನಾಲ್ಕು ಸದಸ್ಯರಿಗೆ ಒಂದು, ಆರು ಮಂದಿ ಇದ್ದರೆ 2, ಎಂಟು ಮಂದಿಯಿದ್ದರೆ ಮೂರು ಆಹಾರ (ಇಂದಿರಾ) ಕಿಟ್ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ಧರಿಸಿತ್ತು.

ಅಕ್ಕಿ ಜೊತೆಗೆ ಆಹಾರ ಕಿಟ್‌ಗಳನ್ನು ಫಲಾನುಭವಿಗಳಿಗೆ ನಿಗದಿತ ಕಾಲಕ್ಕೆ ತಲುಪಿಸುವ ಉದ್ದೇಶದಿಂದ ರಾಜ್ಯವನ್ನು ಐದು ವಿಭಾಗಗಳನ್ನಾಗಿ ಮಾಡಿ ಪ್ರತ್ಯೇಕ ಪೂರೈಕೆಗೆ ಸಿದ್ಧತೆ ನಡೆಸಲಾಗಿತ್ತು.

ಇಂದಿರಾ ಕಿಟ್‌ಗಾಗಿ ಇಲಾಖೆ ಟೆಂಡರ್ ಕರೆದು 20 ಗುತ್ತಿಗೆದಾರರನ್ನು ಆಯ್ಕೆ ಮಾಡಿ, ಅದರಲ್ಲಿ ಅಂತಿಮವಾಗಿ ಏಳು ಮಂದಿಯ ಪಟ್ಟಿ ಸಿದ್ಧಪಡಿಸಿತ್ತು.

ಹಣಕಾಸು ಇಲಾಖೆ ತಕರಾರು

ಆಹಾರ ಇಲಾಖೆ ಕೈಗೊಳ್ಳುವ ತೀರ್ಮಾನದಿಂದ ಸರ್ಕಾರಕ್ಕೆ ಕಳಂಕ ಬರುತ್ತದೆ, ಮತ್ತು ಹಣ ಕೈಬದಲಾವಣೆ ಆಗುವುದೆಂಬ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ತಕರಾರು ತೆಗೆದು ಗುತ್ತಿಗೆ ನೀಡುವುದನ್ನೇ ವಿರೋಧಿಸಿತ್ತು.

ಇದರ ಬದಲು ಕುಟುಂಬದ ಒಬ್ಬರಿಗೆ ರೂಪ್‌ವೇ ಕಾರ್ಡ್ ವಿತರಿಸಿ, ಕುಟುಂಬದ ಸದಸ್ಯರು ತಮಗೆ ನಿಗದಿ ಪಡಿಸಿದ ಆಹಾರ ಪದಾರ್ಥಗಳನ್ನು ರಾಜ್ಯದ ಯಾವುದೇ ಭಾಗದ ಕಿರಾಣಿ ಅಂಗಡಿಯಲ್ಲಿ ಖರೀದಿಸುವ ವ್ಯವಸ್ಥೆ ತನ್ನಿ ಎಂದು ಸಲಹೆ ನೀಡಿತ್ತು.

ರೂಪ್‌ವೇ ಕಾರ್ಡ್‌ಗಳನ್ನು ನಾವೇ ನೀಡುತ್ತೇವೆ, ಇದರಿಂದ ಸರ್ಕಾರಕ್ಕೆ ಕಳಂಕ ಬರುವುದಿಲ್ಲ ಹಾಗೂ ವಿಳಂಬವೂ ಆಗದು, ತಕ್ಷಣದಿಂದಲೇ ಫಲಾನುಭವಿಗಳಿಗೆ ಸೌಲಭ್ಯ ಲಭ್ಯವಾಗಲಿದೆ ಎಂದಿತ್ತು.

ಆಹಾರ ಇಲಾಖೆ ಪಟ್ಟು

ಆದರೆ, ಆಹಾರ ಇಲಾಖೆ ಇದನ್ನು ಒಪ್ಪದೆ, ಟೆಂಡರ್ ಕರೆದೇ ಇಂದಿರಾ ಕಿಟ್ ವಿತರಣೆ ಆಗಬೇಕು ಎಂದು ಪಟ್ಟು ಹಿಡಿಯಿತು.

ಟೆಂಡರ್ ನೀಡುವ ಸಂದರ್ಭದಲ್ಲೂ ಭಾರೀ ಷರತ್ತುಗಳನ್ನು ಹಾಕಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಬಿಡ್‌ದಾರರು ಪಾಲ್ಗೊಳ್ಳುವಂತಾಯಿತು.

ಇದರ ನಡುವೆ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿ, ಇಂದಿರಾ ಕಿಟ್‌ಗೆ ನಿಗದಿಯಾದ ಅನುದಾನ ಸಾಲದಾಗುತ್ತದೆ, ಆದ್ದರಿಂದ, ಅನುದಾನ ಹೆಚ್ಚಳ ಮಾಡುವಂತೆ ಕೋರಲಾಯಿತು.

ಸಚಿವ ಮುನಿಯಪ್ಪ ಸಂಕಟ

ಈ ಪ್ರಸ್ತಾವನೆಯನ್ನೂ ಹಣಕಾಸು ಇಲಾಖೆ ಸಾರಾಸಗಟಾಗಿ ತಳ್ಳಿಹಾಕಿದ್ದರಿಂದ ಸಂಬಂಧಪಟ್ಟ ಖಾತೆ ಸಚಿವ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಸ್ತವ ಸಂಗತಿ ವಿವರಿಸಿದರು.

ಇಷ್ಟರಲ್ಲಾಗಲೇ ಎಐಸಿಸಿ, ಮುಖ್ಯಮಂತ್ರಿ ಅವರಿಗೆ ಇಂದಿರಾ ಕಿಟ್ ಯೋಜನೆ ಕುರಿತ ದೂರುಗಳ ಮಾಹಿತಿ ತಲುಪಿಸಿದ್ದರಿಂದ ಸಿದ್ದರಾಮಯ್ಯ, 10 ಕೆ.ಜಿ. ಅಕ್ಕಿ ನೀಡುವ ಪದ್ಧತಿಯನ್ನೇ ಮುಂದುವರೆಸಿ ಎಂದು ಸೂಚಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cm siddaramaiahcongres high commandindira kitminister k h muniyappa
0 FacebookTwitterPinterestEmail
KM Shivaraju

previous post
ಸದ್ಯದಲ್ಲೇ ಸಿದ್ದರಾಮಯ್ಯ, ಡಿಕೆಶಿಗೆ ದೆಹಲಿ ಬುಲಾವ್
next post
ಕರ್ನಾಟಕ ಕೇಸರಿ ಪಾಳೆಯಕ್ಕೆ ಪ್ರಧಾನಿ ಮೋದಿ ಪಾಠ

You may also like

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನಿರ್ಧಾರ

August 26, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (558)
  • ಅಂಕಣ (109)
  • ಉದ್ಯೋಗ (345)
  • ದಿನ ಭವಿಷ್ಯ (110)
  • ರಾಜಕೀಯ (2,051)
  • ರಾಜ್ಯ (2,366)
  • ರಾಷ್ಟ್ರ (2,331)
  • ವಿಶ್ಲೇಷಣೆ (202)
  • ಶಿಕ್ಷಣ (407)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

    September 3, 2026

KMS Special

  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

    September 3, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ