Tuesday, July 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, July 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಕರ್ನಾಟಕದಿಂದ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕಸರತ್ತು

by KM Shivaraju May 22, 2026
written by KM Shivaraju May 22, 2026 0 comments 1 minutes read
0FacebookTwitterPinterestEmail
79

ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ.

ದೇವೇಗೌಡ ಹಾಗೂ ಖರ್ಗೆ ಅವರಲ್ಲದೆ, ಬಿಜೆಪಿಯ ಈರಣ್ಣ ಕಡಾಡಿ, ಕೆ.ನಾರಾಯಣ್ ಅವರ ಸದಸ್ಯತ್ವ ಅವಧಿಯೂ ಜೂನ್ 25ಕ್ಕೆ ಪೂರ್ಣಗೊಳ್ಳಲಿದೆ.

ಜೂನ್ 18ರಂದು ಮತದಾನ

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನ, ನಾಮಪತ್ರ ಹಿಂಪಡೆಯಲು ಜೂನ್ 11, ಜೂನ್ 18ರಂದು ಮತದಾನ ನಡೆದು ಅಂದು ಸಂಜೆಯೇ ಫಲಿತಾಂಶ ಪ್ರಕಟಗೊಳ್ಳಲಿದೆ.

ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನದಲ್ಲಿ ಸುಲಭ ಜಯ ಗಳಿಸಬಹುದಾಗಿದೆ.

ಕಳೆದ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್‌ನಿಂದ ದೇವೇಗೌಡ ರಾಜ್ಯಸಭೆ ಪ್ರವೇಶಿಸಿದ್ದರು, ಆದರೆ, ಈ ಬಾರಿ ಅವರಿಗೆ ರಾಜ್ಯಸಭೆ ಪ್ರವೇಶಿಸುವಷ್ಟು ಸಂಖ್ಯಾಬಲ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್‌ಗೆ ಲಭ್ಯವಿಲ್ಲ.

ಮೂರು ಸ್ಥಾನಗಳಿಗೆ ಪೈಪೋಟಿ

ಕಾಂಗ್ರೆಸ್‌ನ ಮೂರು ಸ್ಥಾನಗಳಿಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ನಡೆದಿದೆ, ಮಲ್ಲಿಕಾರ್ಜುನ ಖರ್ಗೆ ಅವರ ಪುನರ್ ಆಯ್ಕೆಗೆ ಪಕ್ಷ ತೀರ್ಮಾನ ಕೈಗೊಳ್ಳಬಹುದು.

ಉಳಿದಂತೆ ಎರಡು ಸ್ಥಾನಗಳಿಗೆ ಯುವಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಡಿ.ಬಿ.ಶ್ರೀನಿವಾಸ್ (ಹಿಂದುಳಿದ ವರ್ಗ), ವಿಜಯಕುಮಾರ್ (ಒಕ್ಕಲಿಗ, ಮೈಸೂರು) ಇವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ.

ರಾಜ್ಯದ ಜಲವಿವಾದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸುತ್ತಿರುವ ಮೋಹನ್ ಕಾತರಕಿ (ಲಿಂಗಾಯತ), ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರುಗಳೂ ಚರ್ಚೆಯಲ್ಲಿವೆ.

ಕರ್ನಾಟಕದಿಂದ ಪವನ್ ಖೇಡ

ಈ ಮಧ್ಯೆ, ಎಐಸಿಸಿ ವಕ್ತಾರ ಪವನ್ ಖೇಡ ಅವರನ್ನು ಕರ್ನಾಟಕದಿಂದ ರಾಜ್ಯಸಭೆ ಕಳುಹಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ.

ವಿಜಯಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಬೆಂಬಲವಿದೆ, ಆದರೆ, ಒಕ್ಕಲಿಗ ಕೋಟಾದಲ್ಲಿ ತಾವು ನಿರ್ಧಾರ ಕೈಗೊಂಡು ವರಿಷ್ಠರಿಗೆ ಶಿಫಾರಸು ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಂತಿದೆ.

ಇವರಲ್ಲದೆ, ಇನ್ನೂ ಕೆಲವು ಮುಖಂಡರು ತೆರೆಮರೆಯಲ್ಲಿ ರಾಜ್ಯಸಭಾ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.

ಬಿಜೆಪಿಗೆ ಒಂದು ಸ್ಥಾನ

ಬಿಜೆಪಿಗೆ ಸುಲಭವಾಗಿ ಒಂದು ಸ್ಥಾನ ಗೆಲ್ಲುವ ಅವಕಾಶ ಇದೆಯಾದರೂ ಅದಕ್ಕಾಗಿ ಪೈಪೋಟಿ ಕಂಡುಬರುತ್ತಿಲ್ಲ.

ಆದರೆ, ಪಕ್ಷದ ರಾಜ್ಯ ಘಟಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಿದೆ.

ಬಿಜೆಪಿಯ ಒಂದು ಸ್ಥಾನ ಜೆಡಿಎಸ್‌ನ ದೇವೇಗೌಡರಿಗೆ ಬಿಟ್ಟುಕೊಡಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ಅಭ್ಯರ್ಥಿ ಆಯ್ಕೆ ನಡೆಯಲಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bjpcongresfour seats from karnatakah d devegowdajdsmallikarjuna khargerajyasabha election
0 FacebookTwitterPinterestEmail
KM Shivaraju

previous post
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ ಸಾಧ್ಯವಿಲ್ಲ
next post
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ರಣಕಹಳೆ

You may also like

ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

July 13, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

July 9, 2026

ಮಲ್ಲಿಕಾರ್ಜುನ ಖರ್ಗೆ ಕೃಪಾಕಟಾಕ್ಷ ಇದ್ದರೆ ಸಚಿವ ಸ್ಥಾನ

July 8, 2026

ನಂದಿನಿ ಹಾಲು, ಮೊಸರು ಲೀಟರ್‌ಗೆ 3 ರೂ. ಹೆಚ್ಚಳ

July 8, 2026

ಮಳೆ ಕೊರತೆ: ಬರ ಘೋಷಣೆಗೆ ಮುಖ್ಯಮಂತ್ರಿ ಚಿಂತನೆ

July 7, 2026

ಸಿದ್ದರಾಮಯ್ಯ ಮೊಮ್ಮಗನಿಗೆ ರಾಜಕೀಯ ತಾಲೀಮು

July 6, 2026

ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ

July 4, 2026

ಎಸ್‌ಐಆರ್‌ನಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಆರೋಪ

July 3, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (514)
  • ಅಂಕಣ (109)
  • ಉದ್ಯೋಗ (339)
  • ದಿನ ಭವಿಷ್ಯ (110)
  • ರಾಜಕೀಯ (2,008)
  • ರಾಜ್ಯ (2,322)
  • ರಾಷ್ಟ್ರ (2,287)
  • ವಿಶ್ಲೇಷಣೆ (198)
  • ಶಿಕ್ಷಣ (400)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

    July 13, 2026
  • ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

    July 11, 2026
  • ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

    July 11, 2026

KMS Special

  • ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

    July 13, 2026
  • ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

    July 11, 2026
  • ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

    July 11, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

July 13, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ