Tuesday, November 3, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, November 3, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಪ್ರಜ್ವಲ್‌ ಪೆನ್‌ಡ್ರೈವ್‌ ಹಗರಣದಲ್ಲಿ ಡಿ.ಕೆ.ಶಿ. ಷಡ್ಯಂತ್ರ

by admin November 2, 2026
written by admin November 2, 2026 0 comments 2 minutes read
0FacebookTwitterPinterestEmail
5

ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಪೆನ್‌ಡ್ರೈವ್‌ ಹಗರಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಷಡ್ಯಂತ್ರ ಇದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪೂರಕ ದಾಖಲೆಗಳನ್ನು ಇಂದಿಲ್ಲಿ ಬಿಡುಗಡೆ ಮಾಡಿದರು.

ಶಿವಕುಮಾರ್‌ ಹಾಗೂ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು, ಕಾರು ಚಾಲಕ ಕಾರ್ತಿಕ್‌ನನ್ನು ಎರಡು ಬಾರಿ ಮನೆಗೆ ಕರೆಸಿಕೊಂಡು ಅವನ ಬಳಿ ಇದ್ದ ಪೆನ್‌ಡ್ರೈವ್‌ ಪಡೆದು ಇಡೀ ದೇಶಕ್ಕೆ ಹಂಚಿ ಪ್ರಜ್ವಲ್‌ ಅವರಿಗೆ ಜೀವಾವಧಿ ಶಿಕ್ಷೆ ಆಗುವಂತೆ ಮಾಡಿದರು.

ದೇವೇಗೌಡ ಕುಟುಂಬದ ವಿರುದ್ಧ ದ್ವೇಷ

ಲೋಕಸಭಾ ಚುನಾವಣೆಗೂ ಮುನ್ನ 2023ರ ಆಗಸ್ಟ್‌ 5 ಮತ್ತು 6ರಂದು ಕಾರ್ತಿಕ್‌ನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಶಿವಕುಮಾರ್‌, ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ವಿರುದ್ಧ ದ್ವೇಷ ತೀರಿಸಿಕೊಳಲು ಬಲೆ ಹೆಣೆದರು.

ಆರೋಪದ ಜೊತೆಗೆ ಶಿವಕುಮಾರ್‌ ಮತ್ತು ಸುರೇಶ್‌ ಅವರುಗಳು ಕಾರ್ತಿಕ್‌ ಜೊತೆ ದೂರವಾಣಿಯಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎನ್ನುವುದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಅಲ್ಲದೆ, ಕಾರ್ತಿಕ್‌ ಮನೆಗೆ ಎರಡು ದಿನ ಭೇಟಿ ನೀಡಿದ ಸಂದರ್ಭಗಳ ಮೊಬೈಲ್‌ ಟವರ್ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಎಸ್‌ಐಟಿ ಏಕೆ ತನಿಖೆ ಮಾಡಿಲ್ಲ

ಪ್ರಜ್ವಲ್‌ ಪೆನ್‌ಡ್ರೈವ್‌ ಮತ್ತು ಸಿ.ಡಿ.ಗಳನ್ನು ಹಂಚಿದವರನ್ನು ರಕ್ಷಣೆ ಮಾಡಿದ ಪೋಲಿಸರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಕಗಳನ್ನು ಕೊಡಿಸುತ್ತಿದ್ದೀರಿ, ಈ ಪ್ರಕರಣದಲ್ಲಿ ಶಿವಕುಮಾರ್‌ ಕುರಿತು ಎಸ್‌ಐಟಿ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಪ್ರಕರಣ ಮಾಡಿದವರನ್ನು ಬಿಟ್ಟು ನನ್ನ ತಲೆಗೆ ಕಟ್ಟಲು ಬರುತ್ತಿದ್ದೀರಾ, ನನ್ನನ್ನು ಮುಟ್ಟಿ ನೋಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟದ ಜೊತೆ ಜೆಡಿಎಸ್‌ ಕೈಜೋಡಿಸುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಆಗುವುದನ್ನು ತಪ್ಪಿಸಿದರು ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಇಬ್ಬರೂ ಸೇರಿ ಪ್ರಜ್ವಲ್‌ ಪ್ರಕರಣ ಮುನ್ನೆಲೆಗೆ ತಂದು ನಮ್ಮ ಕುಟುಂಬಕ್ಕೆ ಮಸಿ ಬಳಿಯಲು ಮುಂದಾದರು ಎಂದು ದೂರಿದರು.

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಕಾರ್ಯಾಚರಣೆ ನಡೆಸಿದವರನ್ನು ವಿಚಾರಣೆಗೆ ಒಳಪಡಿಸದೆ, ಸ್ಟಿಂಗ್‌ ಸಿ.ಡಿ. ಕುರಿತ ವಿಧಿವಿಜ್ಞಾನ ವರದಿ ಬರುವ ಮುನ್ನವೇ ಯಾರನ್ನೋ ಸಿಲುಕಿಸಲು ಕುತಂತ್ರ ನಡೆಸಿದ್ದೀರಿ ಎಂದರು.

ಕೇರಳಂ ಮಹಿಳೆ ಕರೆಸಿ ಹೇಳಿಕೆ

ಸಿ.ಡಿ. ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್‌ ಕೊಡುವ ಉದ್ದೇಶದಿಂದ ಕೇರಳಂನಿಂದ ಮಹಿಳೆಯೊಬ್ಬರನ್ನು ಕರೆಸಿ ಹೇಳಿಕೆ ಪಡೆದಿದ್ದೀರಿ, ಪೋಲಿಸರು ಈ ಕಾರ್ಯಾಕ್ಕೆ ಮುಸ್ಲೀಂ ನಾಯಕರನ್ನೂ ಬಳಸಿದರು.

ಸರ್ಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಅವರಿಗೆ ಹಗರಣದಿಂದ ಕ್ಲೀನ್‌ಚಿಟ್‌ ನೀಡಿದಿರಿ.

ಕಾರ್ಯಾಚರಣೆ ಹಿಂದಿನ ರೂವಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ದೆಹಲಿಯ ರಿತೀಶ್‌ ಪಾಂಡೆ ಎಂಬ ವ್ಯಕ್ತಿಯನ್ನು ಕರೆತಂದು ಸುಳ್ಳು ಹೇಳಿಕೆ ಪಡೆದು ಎಲ್ಲವೂ ನಾನೇ ಮಾಡಿಸಿದ್ದು ಎಂಬಂತೆ ಸಿನೆಮಾ ಬಿಡುತ್ತಿದ್ದೀರಿ.

ಪಾಂಡೆ ಯಾರೆಂದು ಗೊತ್ತಿಲ್ಲ

ಪಾಂಡೆ ಯಾರೆಂಬುದು ನನಗೆ ಗೊತ್ತಿಲ್ಲ, ಆತನನ್ನ ಬಂಧಿಸಿದ್ದು ಗಾಜಿಯಾಬಾದ್‌ನಲ್ಲಿ, ಆರೋಪ ಮಾಡುತ್ತಿರುವುದು ನನ್ನ ಮನೆಯಿಂದ ಬಂಧಿಸಿದ್ದು ಎನ್ನುತ್ತೀರಿ.

ಕಮೀಷನರ್‌ ಸಾಹೇಬರೇ ನೀವು ಯಾರ ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ ಎಂಬ ಬಗ್ಗೆ ಎಚ್ಚರವಿರಲಿ, ನಾನು ನಿಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರೆ ನಿಮ್ಮ ಪರಿಸ್ಥಿತಿ ಎನಾಗುತ್ತದೆ, ನಾನು ಇಂತಹ ಕೆಲಸ ಮಾಡುವುದಿಲ್ಲ, ನೀವು ಮುಖ್ಯಮಂತ್ರಿ ಒತ್ತಡಕ್ಕೆ ಮಣೆದು ಹೇಳಿಕೆ ನೀಡಿದ್ದೀರಿ, ಇದು ಪುನರಾವರ್ತನೆ ಆದರೆ, ಕಾನೂನು ಸಮರಕ್ಕೆ ಸಿದ್ಧರಾಗಿ ಎಂದು ಎಚ್ಚರಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
d k shivakumar involvedh d kumaraswamy allegationprajval revanna pen drive scamwho is ritesh pande
0 FacebookTwitterPinterestEmail
admin

previous post
ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

You may also like

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

October 31, 2026

ನಿಯಮ ಮೀರಿ ಪಟಾಕಿ ಸಿಡಿಸಿದರೆ ಕಠಿಣ ಕ್ರಮ

October 30, 2026

ನವೆಂಬರ್‌ನಿಂದ ಹಾಲು-ಬಸ್‌ ಪ್ರಯಾಣ ದರ ಹೆಚ್ಚಳ

October 29, 2026

ಪರಿಷತ್‌ ಫಲಿತಾಂಶ 2028ರ ಚುನಾವಣೆ ಜನಾದೇಶ ಅಲ್ಲ

October 28, 2026

ಎಸ್‌ಐಆರ್‌ ನಂತರ 99.32 ಲಕ್ಷ ಮತದಾರರ ಹೆಸರು ಕಡಿತ

October 27, 2026

ಕಬ್ಬು ಬೆಳೆಗಾರರಿಗೆ ಸ್ಪಂದಿಸಿ ಬೇಡಿಕೆಗಳ ಈಡೇರಿಸಿ

October 26, 2026

ಸ್ಟಿಂಗ್ ಆರೋಪಿಗಳು ಸಚಿವ ಕುಮಾರಸ್ವಾಮಿ ಬಂಟರು

October 24, 2026

ಸ್ಟಿಂಗ್‌ ಕಾರಣಕರ್ತರ ವಿರುದ್ಧ ಕ್ರಮಕ್ಕೆ ಡಿಕೆಶಿಗೆ ತಾಕೀತು

October 23, 2026

ಸಚಿವರ ತಡೆದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆದೇಶ

October 22, 2026

ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

October 19, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (603)
  • ಅಂಕಣ (109)
  • ಉದ್ಯೋಗ (359)
  • ದಿನ ಭವಿಷ್ಯ (110)
  • ರಾಜಕೀಯ (2,095)
  • ರಾಜ್ಯ (2,411)
  • ರಾಷ್ಟ್ರ (2,375)
  • ವಿಶ್ಲೇಷಣೆ (202)
  • ಶಿಕ್ಷಣ (415)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಪ್ರಜ್ವಲ್‌ ಪೆನ್‌ಡ್ರೈವ್‌ ಹಗರಣದಲ್ಲಿ ಡಿ.ಕೆ.ಶಿ. ಷಡ್ಯಂತ್ರ

    November 2, 2026
  • ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

    October 31, 2026
  • ನಿಯಮ ಮೀರಿ ಪಟಾಕಿ ಸಿಡಿಸಿದರೆ ಕಠಿಣ ಕ್ರಮ

    October 30, 2026

KMS Special

  • ಪ್ರಜ್ವಲ್‌ ಪೆನ್‌ಡ್ರೈವ್‌ ಹಗರಣದಲ್ಲಿ ಡಿ.ಕೆ.ಶಿ. ಷಡ್ಯಂತ್ರ

    November 2, 2026
  • ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

    October 31, 2026
  • ನಿಯಮ ಮೀರಿ ಪಟಾಕಿ ಸಿಡಿಸಿದರೆ ಕಠಿಣ ಕ್ರಮ

    October 30, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

October 31, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ