Tuesday, October 13, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, October 13, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

’ಬಿ’ ಯಿಂದ ’ಎ’ ಖಾತಾ ಕಾಯ್ದೆ ರಾಜ್ಯಾದ್ಯಂತ ವಿಸ್ತರಣೆ

by KM Shivaraju August 21, 2026
written by KM Shivaraju August 21, 2026 0 comments 2 minutes read
0FacebookTwitterPinterestEmail
94

ಬೆಂಗಳೂರು:ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹಾಗೂ ಮನೆಗಳನ್ನು ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ’ಬಿ’ ಖಾತಾದಿಂದ ’ಎ’ ಖಾತಾ ನೀಡುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

’ಬಿ’ ಖಾತಾದಿಂದ ’ಎ’ ಖಾತಾ ವರ್ಗಾವಣೆಗೆ ಇದ್ದ ಆತಂಕ ಮತ್ತು ಗೊಂದಲ ನಿವಾರಣೆಗೆ ಸರ್ಕಾರ ಇಂದು ವಿಧಾನಸಭೆಯಲ್ಲಿ ಕರ್ನಾಟಕ ನಗರಪಾಲಿಕೆಗಳ ವಿಧೇಯಕ 2026ಕ್ಕೆ ಅಂಗೀಕಾರ ಪಡೆದುಕೊಂಡಿತು.

ಬೆಂಗಳೂರಿನಲ್ಲಿ ಯಶಸ್ವಿ ಜಾರಿ

ಈ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದ ಎಲ್ಲಾ ನಗರಪಾಲಿಕೆಗಳು, ಪುರಸಭೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸಲಾಗುತ್ತಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೃಷ್ಣಬೈರೇಗೌಡ ವಿಧೇಯಕ ಮಂಡಿಸಿ, ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಆಸ್ತಿ ಒಡೆತನದ ಹಕ್ಕು ನೀಡಲು ಈ ತಿದ್ದುಪಡಿ ಸಹಕಾರಿ ಆಗಲಿದೆ ಎಂದು ವಿವರಿಸಿ ಅಂಗೀಕಾರ ಪಡೆದರು.

ಸರ್ಕಾರದ ಈ ನಿರ್ಧಾರದಿಂದ ರಾಜ್ಯಾದ್ಯಂತ ಕಳೆದ 30-40 ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹಾಗೂ ಮನೆಗಳನ್ನು ಹೊಂದಿದ ’ಬಿ’ ಖಾತಾದಾರರು ದೊಡ್ಡ ಸಂಕಷ್ಟದಿಂದ ಹೊರಬಂದಂತಾಗಿದೆ ಎಂದು ಬಣ್ಣಿಸಿದರು.

ಆಸ್ತಿ ಮಾಲೀಕತ್ವ ಹಕ್ಕು

ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ ಪಕ್ಕಾ ’ಎ’ ಖಾತಾ ನೀಡುವ ತೀರ್ಮಾನ ಕೈಗೊಂಡಿದ್ದೇವೆ.

ರಾಜ್ಯದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ಆಸ್ತಿ ಭದ್ರತೆ ನೀಡುವುದು ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೂಗ್ಯಾರಂಟಿ ಸಂಕಲ್ಪವಾಗಿದೆ.

ಅನಧಿಕೃತ ಬಡಾವಣೆಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರಪಾಲಿಕೆಗಳ ಕಾಯಿದೆ ನಿಯಮ 284ಕ್ಕೆ ತಿದ್ದಪಡಿ ತರಲಾಗುವುದು ಎಂದರು.

ಹಲವು ಅನಧಿಕೃತ ಬಡಾವಣೆ

ರಾಜ್ಯಾದ್ಯಂತ ನಗರ ಭಾಗಗಳಲ್ಲಿ ಹಲವಾರು ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ, ಅಕ್ರಮ ನಡೆಯುತ್ತಿದೆ ಎಂದು ತಿಳಿದೂ ಹಿಂದಿನ ಸರ್ಕಾರಗಳು ಅಕ್ರಮಗಳ ತಡೆಗೆ ಮುಂದಾಗಲಿಲ್ಲ, ಕಾನೂನು ಕಡೆಗಣಿಸಿ ಬಡಾವಣೆ ನಿರ್ಮಿಸಬಾರದು ಎಂಬ ಸಾಮಾನ್ಯ ಪ್ರಜ್ಞೆ ಬಡಾವಣೆ ನಿರ್ಮಾಣದಾರರಿಗೂ ಇಲ್ಲದ ಕಾರಣ ಆಸ್ತಿ ಮಾಲೀಕರಿಗೆ ಹತ್ತಾರು ತೊಂದರೆಗಳು ಎದುರಾಗಿವೆ.

ಅನಧಿಕೃತವಾಗಿ ನಿರ್ಮಾಣಗೊಂಡ ಕಡೆಗಳಲ್ಲಿ ಅಗಲ ರಸ್ತೆಗಳಿಲ್ಲ, ಡಾಂಬರೀಕರಣ ಮಾಡಿಲ್ಲ, ವಿದ್ಯುತ್ ಸೌಕರ್ಯ ಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮಳೆ ನೀರು ಹೋಗಲು ದಾರಿ ಮಾಡಿಲ್ಲ, ಸರಿಯಾಗಿ ಸಂಪರ್ಕ ರಸ್ತೆಗಳೂ ಇಲ್ಲ.

ಅವ್ಯವಸ್ಥೆಗಳ ಆಗರಗಳನ್ನು ನಿರ್ಮಾಣ ಮಾಡಿ ಮಾಲೀಕರಿಗೆ ಸರಿಯಾಗಿ ಆಸ್ತಿ ಮಾಲೀಕತ್ವವೂ ಸಿಗದಂತಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ,2024ರಲ್ಲಿ ನಮ್ಮ ಸರ್ಕಾರ ಬಹಳ ಕಟುವಾದ ನಿಲುವು ತೆಗೆದುಕೊಳ್ಳಲು ಸಂಕಲ್ಪ ಮಾಡಿತ್ತು, ಅನಧಿಕೃತ ಬಡಾವಣೆಗಳಿಗೆ ಸಂಪೂರ್ಣ ವಿರಾಮ ಹಾಕಿ, ಅಕ್ರಮ ತಡೆಗಟ್ಟೋ ಕೆಲಸ ಮಾಡಿದ್ದೇವೆ.

ದಶಕಗಳ ಹಿಂದಿನ ಬಡಾವಣೆ

ದಶಕಗಳ ಹಿಂದೆ ನಿರ್ಮಾಣವಾದ ಬಡಾವಣೆಗಳ ಆಸ್ತಿ ಮಾಲೀಕರಿಗೂ ಸೂಕ್ತ ಪರಿಹಾರ ನೀಡಲು ಮುಂದಾಗಿದ್ದೇವೆ, ಅಂತಹ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡಲಾಗಿತ್ತು, ಎ ಖಾತಾ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ, ಆದರೆ, ಎ ಖಾತಾ ಕೊಟ್ಟರೆ ಮಾತ್ರ ಅವರ ಮಾಲೀಕತ್ವದ ಗ್ಯಾರಂಟಿಗೆ ತೂಕವಿರುತ್ತದೆ ಎಂಬ ಕಾರಣಕ್ಕಾಗಿ ಇದೀಗ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವಾಗ ಬಿಡಲಾಗಿರುವ ರಸ್ತೆಗಳು ಈಗಲೂ ಮೂಲ ಜಮೀನು ಮಾಲೀಕರ ಹೆಸರಿನಲ್ಲೇ ಇವೆ, ಹೊಸ ತಿದ್ದುಪಡಿ ಪ್ರಕಾರ, ರಸ್ತೆಗಳನ್ನು ಸ್ಥಳೀಯ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿ ದಾಖಲೆಗಳಲ್ಲಿ ’ಸಾರ್ವಜನಿಕ ರಸ್ತೆ’ ಎಂದು ಅಧಿಕೃತವಾಗಿ ಘೋಷಿಸಲು ಕಾನೂನು ಅವಕಾಶ ಸಿಗಲಿದೆ.

ಬ್ಯಾಂಕ್‌ಗಳಿಂದ ಸುಲಭ ಸಾಲ

ಎ-ಖಾತಾ ದೊರೆಯುವುದರಿಂದ ಆಸ್ತಿ ಮಾಲೀಕರಿಗೆ ಬ್ಯಾಂಕುಗಳಿಂದ ಸುಲಭವಾಗಿ ಗೃಹ/ಆಸ್ತಿ ಸಾಲ ಸಿಗಲಿದೆ, ಜೊತೆಗೆ ಕಟ್ಟಡ ನಕ್ಷೆ ಮಂಜೂರಾತಿ ಮತ್ತು ವಾಸಯೋಗ್ಯ ಪ್ರಮಾಣಪತ್ರ ಪಡೆಯಲು ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.

ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಕಾಪಾಡುವ ಹಾಗೂ ಅವರಿಗೆ ಶಾಸನಬದ್ಧ ಹಕ್ಕು ಒದಗಿಸಲು 2026ನೇ ಸಾಲಿನ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ಮಂಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿ, ನಿವಾಸಿಗಳು ಎದುರಿಸುತ್ತಿರುವ ನಿರಂತರ ಆಡಳಿತಾತ್ಮಕ ಗೊಂದಲಗಳು ಹಾಗೂ ಡೆವಲಪರ್‌ಗಳ ಮಿತಿಮೀರಿದ ಧೋರಣೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
assemblyb khaata to a khaatabank loanminister krishna byregowdaproperty ownershipright to land ownersstate wide implementation
0 FacebookTwitterPinterestEmail
KM Shivaraju

previous post
ಕರ್ನಾಟಕಕ್ಕೆ ನ್ಯಾಯಯುತ ಅನುದಾನ ನೀಡಿ: ಡಿಕೆಶಿ
next post
ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ನಿರ್ಧಾರ

You may also like

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026

2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

October 10, 2026

ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

October 7, 2026

ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

October 6, 2026

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

October 5, 2026

ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

October 3, 2026

ಸಚಿವ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

October 1, 2026

ಜನವರಿಯಲ್ಲಿ ಪಂಚಾಯತ್‌ ಚುನಾವಣೆಗೆ ತೀರ್ಮಾನ

September 30, 2026

ನೈಸ್‌ ಯೋಜನೆ: ಡಿಕೆಶಿ ಕುಟುಂಬ 3 ಲಕ್ಷ ಕೋಟಿ ಲೂಟಿ

September 29, 2026

ವರಿಷ್ಠರ ಜೊತೆ ಡಿಕೆಶಿ ಸಂಪುಟ ಪುನರ್ ರಚನೆ ಚರ್ಚೆ

September 28, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (587)
  • ಅಂಕಣ (109)
  • ಉದ್ಯೋಗ (355)
  • ದಿನ ಭವಿಷ್ಯ (110)
  • ರಾಜಕೀಯ (2,080)
  • ರಾಜ್ಯ (2,395)
  • ರಾಷ್ಟ್ರ (2,359)
  • ವಿಶ್ಲೇಷಣೆ (202)
  • ಶಿಕ್ಷಣ (412)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026
  • ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

    October 7, 2026

KMS Special

  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026
  • ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

    October 7, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ