Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಮುಖ್ಯಮಂತ್ರಿ ಸ್ಥಾನ ಒದ್ದು ಕಿತ್ತುಕೊಳ್ಳುವುದು ಯಾವಾಗ

by admin December 12, 2024
written by admin December 12, 2024 0 comments 2 minutes read
0FacebookTwitterPinterestEmail
218

ಬೆಳಗಾವಿ:ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಒದ್ದು ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸಭೆಯಲ್ಲೇ ಹೇಳಿದ ಪ್ರಸಂಗ ಇಂದು ಜರುಗಿತು.

ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಅಗಲಿದ ಮಾಜಿ ಶಾಸಕರಿಗೆ ಸಂತಾಪ ಸೂಚನೆ ಕಲಾಪದಲ್ಲಿ ಮಾತನಾಡಿದ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಗುಣಗಾನ ಮಾಡುತ್ತಾ, ಅವರ ಆಡಳಿತಾವಧಿಯಲ್ಲಿ ಧಮ್ಕಿ ಹಾಕಿ ಮಂತ್ರಿ ಸ್ಥಾನ ಪಡೆದುಕೊಂಡೆ.

ಸರ್ಕಾರ ರಚನೆ ಸಂದರ್ಭದಲ್ಲಿ ಕೇವಲ ಎಂಟು ಮಂದಿಯನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ವರಿಷ್ಠರು ಅವಕಾಶ ನೀಡಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ.

ಮುಂದೆ ಅವಕಾಶ ಸಿಗದು

ಆ ಸಂದರ್ಭದಲ್ಲಿ ನನ್ನ ಗುರುಗಳಾದ ಜ್ಯೋತಿಷಿ ದ್ವಾರಕನಾಥ್ ಅವರ ಬಳಿ ವಿಷಯ ಹಂಚಿಕೊಂಡಾಗ, ’ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು, ಇಲ್ಲವಾದರೆ ಮುಂದೆ ಅವಕಾಶ ಸಿಗದು ಎಂದು ಸಲಹೆ ಮಾಡಿದರು.

ಗುರುಗಳ ಮಾತಿನಂತೆ ಜಯಚಂದ್ರ ಅವರೊಂದಿಗೆ ಕೃಷ್ಣ ಅವರನ್ನು ತಡರಾತ್ರಿ ಭೇಟಿ ಮಾಡಿ ನಮ್ಮನ್ನು ಮಂತ್ರಿಮಂಡಲದಿಂದ ಏಕೆ ಬಿಟ್ಟಿದ್ದೀರಿ, ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ, ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ಹೆಗಲಿಗೆ-ಹೆಗಲು ಕೊಟ್ಟು ದುಡಿದೆ, ಸರ್ಕಾರ ರಚನೆಯಲ್ಲಿ ನನಗೆ ಅವಕಾಶ ನೀಡಲಿಲ್ಲವೆಂದರೆ ಜನ ಏನೆಂದುಕೊಳ್ಳುತ್ತಾರೆ.

ನಾನೂ ಜೊತೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಸರ್ಕಾರ, ಇಲ್ಲವಾದರೆ ಸರ್ಕಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಪಂಚಮಸಾಲಿ ಹೋರಾಟ: ಲಾಠಿ ಚಾರ್ಜ್‌ಗೆ ಖಂಡನೆ
ರುದ್ರ ತಾಂಡವ ಮಾಡುತ್ತಿದ್ದೀಯಾ

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, ಏನು ರುದ್ರ ತಾಂಡವ ಮಾಡುತ್ತಿದ್ದೀಯಾ, ಬೆಳಗ್ಗೆ ನೋಡೋಣ ಎಂದರು.

ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿತ್ತು, ಮತ್ತೆ ಬೆಳಗ್ಗೆ ಹೋದಾಗ ನಿನಗೆ ಗ್ರಹಗತಿ ಸರಿಯಿಲ್ಲ, ಮುಂದೆ ಅಕವಾಶ ಸಿಗಲಿದೆ ಎಂದರು.

ನಾನು ಜ್ಯೋತಿಷ್ಯ ಕೇಳಿದ್ದೇನೆ, ನನಗೆ ಈ ರೀತಿ ಹೇಳಿದ್ದಾರೆ, ಬೇಕಾದರೆ, ಅವರನ್ನೇ ಕೇಳಿ, ನಾನು ಮಂತ್ರಿಯಾಗಬೇಕು ಅಷ್ಟೆ ಎಂದು ಪಟ್ಟು ಹಿಡಿದೆ.

ಮಂತ್ರಿಮಂಡಲಕ್ಕೆ ಸೇರ್ಪಡೆ

ನಂತರ ಕೃಷ್ಣ ಅವರು, ಪ್ರಮಾಣವಚನ ಸಮಯನ್ನೇ ಮುಂದೂಡಿ ವರಿಷ್ಠರ ಮನವೊಲಿಸಿ, ನಮ್ಮನ್ನೂ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡರು ಎಂದರು.

ಶಿವಕುಮಾರ್ ಅವರ ಹೇಳಿಕೆ ವೇಳೆ ಮಧ್ಯೆ ಪ್ರವೇಶಿಸಿದ ಅಶೋಕ್, ಈಗಲೂ ಅದೇ ಪರಿಸ್ಥಿತಿ ಇದೆ, ಯಾವಾಗ ಒದ್ದು ಮುಖ್ಯಮಂತ್ರಿ ಹುದ್ದೆ ಕಿತ್ತುಕೊಳ್ಳುತ್ತೀರಾ ಎಂದು ಮುಖ್ಯಮಂತ್ರಿ ಆಸನ ತೋರಿಸಿ ಕೇಳಿದರು.

ನಿಮಗೆ ಯಾರು ಭವಿಷ್ಯ ಹೇಳಿದ್ದಾರೋ, ಅವರು ನನಗೂ ನಿಮಗೆ ಹೇಳಿದ್ದನ್ನೇ ಹೇಳಿದ್ದಾರೆ, ನನಗೂ ವಿಷಯ ಗೊತ್ತು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ
ಗ್ರಹಗತಿ ಸರಿಯಿಲ್ಲ

ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಅದಕ್ಕೂ ಮೊದಲು ಅಧಿಕಾರ ಪಡೆಯಬೇಕು ಎಂದಿದ್ದಾರೆ, ನಿಮ್ಮ ಹಿಂದಿನ ರೌದ್ರಾವತಾರವನ್ನು ಯಾವಾಗ ತಳೆದು ಅಧಿಕಾರ ಕಿತ್ತುಕೊಳ್ಳುತ್ತೀರಾ ಎಂದರು.

ಇಷ್ಟೆಲ್ಲಾ ಚರ್ಚೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಆಸೀನರಾಗಿರಲಿಲ್ಲ.

ಸಭಾಧ್ಯಕ್ಷರು, ಅಶೋಕ್ ಮತ್ತು ಶಿವಕುಮಾರ್ ನಡುವಿನ ಸಂವಾದದಲ್ಲಿ ಮಧ್ಯೆ ಪ್ರವೇಶಿಸಿ, ಅಶೋಕ್ ಕೇಳಿದ ಎರಡು-ಮೂರು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಬೇಡಿ, ನಿಮ್ಮ ಕಚೇರಿಗೆ ಕರೆದು ಮಾತನಾಡಿ ಎಂದು ರೂಲಿಂಗ್ ನೀಡುವುದಾಗಿ ತಿಳಿಸಿದರು.

ನಾಲ್ಕು ದಶಕಗಳ ಒಡನಾಟ

ಈ ಸಂದರ್ಭದಲ್ಲಿ ಮಾತು ಮುಂದುವರೆಸಿದ ಶಿವಕುಮಾರ್, ಕಳೆದ ನಾಲ್ಕು ದಶಕಗಳ ಕೃಷ್ಣ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿ, ’ಅವರು ಏನೇನು ಹೇಳಿದ್ದರೂ ಅವೆಲ್ಲವೂ ಇದುವರೆಗೆ ಆಗಿದೆ’.

’ಮುಂದೇನು ಆಗುತ್ತೇನೆ ಎಂದೂ ಹೇಳಿದ್ದಾರೆ, ಅದೂ ಆಗುತ್ತೆ, ಆದರೆ, ಅದೆಲ್ಲವನ್ನೂ ಇಲ್ಲಿ ತಿಳಿಸಲು ಹೋಗುವುದಿಲ್ಲ, ನನ್ನ ಕೊಠಡಿಯಲ್ಲಿ ಮಾತನಾಡೋಣ ಬನ್ನಿ’ ಎಂದು ವಿಷಯಕ್ಕೆ ತೆರೆ ಎಳೆದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
assemblycm postr ashok and d k shivakumar dialogue
0 FacebookTwitterPinterestEmail
admin

previous post
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ
next post
ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ

You may also like

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

July 18, 2026

ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ

July 17, 2026

ಸಂಭಾವ್ಯ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ

July 16, 2026

ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಶಿವಕುಮಾರ್

July 15, 2026

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ

July 14, 2026

ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

July 13, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ