Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

by KM Shivaraju June 17, 2025
written by KM Shivaraju June 17, 2025 0 comments 1 minutes read
0FacebookTwitterPinterestEmail
521

ಜೂನ್ ೨೩ರಂದು ಹಾಜರಾಗುವುದಾಗಿ ಪತ್ರ

ಬೆಂಗಳೂರು : ವಂಚನೆ ಆರೋಪಿ ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ನೀಡಿದೆ.

ಚಿನ್ನಾಭರಣ ಅಂಗಡಿ ಮಾಲಿಕರಿಗೆ ಕೋಟ್ಯಂತರ ರೂ. ವಂಚನೆ ವೇಳೆ ಸುರೇಶ್ ಹೆಸರನ್ನು ಬಳಸಿದ್ದ ಆರೋಪ ಐಶ್ವರ್ಯ ಗೌಡ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೋಲಿಸರು ತನಿಖೆ ನಡೆಸಿ, ಐಶ್ವರ್ಯ ಗೌಡ ಅವರನ್ನು ಬಂಧಿಸಿದ್ದರು.

ಕೋಟ್ಯಂತರ ರೂ. ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ. ತನಿಖೆ ನಡೆಸುತ್ತಿದ್ದು, ಐಶ್ವರ್ಯ ನೀಡಿದ ಸುಳಿವು ಮತ್ತು ದಾಖಲೆ ಆಧರಿಸಿ ಸುರೇಶ್ ವಿಚಾರಣೆಗೆ ನೋಟಿಸ್ ನೀಡಿದೆ. ಜೂನ್ ೧೯ರಂದು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದು, ಸುರೇಶ್ ಅಂದು ತಮಗೆ ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ಜೂನ್ ೨೩ರಂದು ಹಾಜರಾಗುವುದಾಗಿ ಪತ್ರ ಬರೆದಿದ್ದಾರೆ.

ಈ ಮಧ್ಯೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸುರೇಶ್, ತಮಗೂ ಐಶ್ವರ್ಯಗೌಡ ಚಿನ್ನಾಭರಣ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಅವರು ನಮ್ಮ ಕ್ಷೇತ್ರದವರಾಗಿದ್ದರಿಂದ ಒಂದೆರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ ಎಂದರು.

ಐಶ್ವರ್ಯ ಗೌಡ ಮತ್ತು ತಮ್ಮ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಇ.ಡಿ. ವಿಚಾರಣೆಗೆ ಕರೆದಿದ್ದು, ಏನು ಕೇಳುವರೆಂಬುದನ್ನು ಈಗಲೇ ಹೇಳಲಾಗದು. ಇ.ಡಿ. ವಿಚಾರಣೆಗೆ ಹಾಜರಾಗುವೆ, ಅವರು ಪ್ರಶ್ನೆಗಳನ್ನು ಕೇಳಿದ ನಂತರವಷ್ಟೇ ವಿಷಯ ಏನೆಂದು ತಿಳಿಯಲಿದೆ, ಅಲ್ಲಿವರೆಗೆ ಏನನ್ನೂ ಹೇಳಲಾಗದು ಎಂದು ಹೇಳಿದರು.

ಈ ಮಧ್ಯೆ, ಸಹೋದರ ಡಿ.ಕೆ.ಸುರೇಶ್ ಅವರಿಗೆ ಇ.ಡಿ. ಸಮನ್ಸ್ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇ.ಡಿ. ಸಮನ್ಸ್ ಬಂದಾಗ ನಮ್ಮ ಬ್ರದರ್ ಇರಲಿಲ್ಲ, ಮನೆಗೆ ಅಂಟಿಸಿ ಹೋಗ್ತೀವಿ ಎಂದರಂತೆ. ನಾನು ರಿಸೀವ್ ಮಾಡಿಕೊಳ್ಳಿ ಎಂದಿದ್ದೇನೆ. ನಮ್ಮ ಬ್ರದರ್ ಮತ್ತು ನಮ್ಮ ಹೆಸರು ಮಿಸ್‌ಯ್ಯೂಸ್ ಆಗ್ತಿದೆ ಅಂತ ಹೇಳಿದ್ರು, ಇದರ ಇನ್ವೆಸ್ಟಿಗೇಷನ್ ಆಗಬೇಕು ಅಂತ ರಿಕ್ವೆಸ್ಟ್ ಲೆಟರ್ ಕೊಟ್ಟಿದ್ದಾರೆ, ಪೋಲಿಸ್‌ನವರಿಗೆ ಕಂಪ್ಲೈಂಟ್ ಕೂಡ ಕೊಟ್ಟಿದ್ದಾರೆ.

ನಮ್ಮ ಬ್ರದರ್ ಇ.ಡಿ. ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುತ್ತಾರೆ. ಇದೇ ರೀತಿ ಮೂರ್ನಾಲ್ಕು ಜನರಿಗೆ ಮೋಸ ಆಗಿದೆ. ನಮ್ಮ ಹೆಸರು ಹೇಳಿ, ಸಿಸ್ಟರ್ ಅಂತ ಹೇಳಿದ್ದಾರೆ. ಇದರ ತನಿಖೆ ಆಗಬೇಕು ಅಂತಲೂ ಹೇಳಿದ್ದೇವೆ. ನಾವು ಇ.ಡಿ.ಗೆ ಸಹಕಾರ ಕೊಡಲು ಸಿದ್ಧರಿದ್ದೇವೆ, ನಾವು ಈ ದೇಶದ ಕಾನೂನಿಗೆ ಗೌರವ ಕೊಡುತ್ತೇವೆ, ವಿಚಾರಣೆಗೆ ಸಹಕಾರ ಕೊಡುತ್ತೇವೆ. ಸಮಾಜಕ್ಕೆ ಮೋಸ ಮಾಡುವ ಜನರ ವಿರುದ್ಧ ಕ್ರಮಕ್ಕೆ ಸಹಕಾರ ನೀಡಲು ಬದ್ಧರಾಗಿದ್ದೇವೆ. ಜನರಿಗೆ ನ್ಯಾಯ ಒದಗಿಸೋದು ನಮ್ಮ ಕರ್ತವ್ಯ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Aishwarya Gowdaappearcasecrores of rupeesDKSureshED noticeFraud accusedJewelryJune 23lettershop owner cheated
0 FacebookTwitterPinterestEmail
KM Shivaraju

previous post
ಪ್ರತಿ ಶಾಲೆಗೆ ಪರಿಸರ ಜಾಗೃತಿ ಕ್ಲಬ್ ರಚನೆ ಕಡ್ಡಾಯ
next post
ಕುಮಾರಸ್ವಾಮಿ ಭೂಒತ್ತುವರಿ ತನಿಖೆಗೆ ಹೈಕೋರ್ಟ್ ತಡೆ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ