ಬೆಂಗಳೂರು:ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ಇದೇ ಕಾರಣಕ್ಕಾಗಿ ಗರಿಷ್ಠ ಸಾಮರ್ಥ್ಯದ 30,000 ವಿದ್ಯುತ್ ಪರಿವರ್ತಕಗಳನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ ಖರೀದಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಅಡಚಣೆ ಆಗದಂತೆ ಕ್ರಮ
ಪ್ರಶ್ನೋತ್ತರ ವೇಳೆಯಲ್ಲಿ ಎನ್.ರವಿಕುಮಾರ್ ಹಾಗೂ ಟಿ.ಎನ್.ಜವರಾಯಿಗೌಡ ಅವರ ಪತ್ಯೇಕ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, ವಿದ್ಯುತ್ ಸರಬರಾಜಿಗೆ ಅಡಚಣೆ ಆಗದಂತೆ ನಿಯಮಿತವಾಗಿ ಎಲ್ಲ ವಿದ್ಯುತ್ ಉಪಕೇಂದ್ರಗಳ ಹಾಗೂ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಕಾರ್ಯ ಮಾಡಲಾಗುತ್ತಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವ ಇದ್ಯುತ್ ಹರಿಸುವುದರ ಜೊತೆಗೆ ಕೈಗಾರಿಕಾ ಫೀಡರ್‌ಗಳು ನಿರಂತರ ಜ್ಯೋತಿ ಅಡಿ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ನಾವು ವಿದ್ಯುತ್ ಉತ್ಪಾದನೆಗೆ ಒತ್ತು ನೀಡುತ್ತಿರುವುದರಿಂದಲೇ ಬೇಸಿಗೆಯಲ್ಲಿ ನಮಗೆ ಸಮಸ್ಯೆ ಎದುರಾಗುತ್ತಿಲ್ಲ.
ವಾಹಕ ಬದಲಾವಣೆ
ಉತ್ಪಾದನೆ ಜೊತೆಗೆ 3172 ಕಿಲೋ ಮೀಟರ್ ಎಚ್.ಡಿ. ಮಾರ್ಗ, 3237 ಕಿಲೋ ಮೋಟರ್ ಎಲ್‌ಟಿ ಮಾರ್ಗದ ವಾಹಕ ಬದಲಾವಣೆ ಮಾಡಲಾಗಿದೆ ಎಂದರು.
ರಾಜ್ಯದ ವಿದ್ಯುತ್ ಕಂಪನಿಗಳಿಗೆ 50,000 ವಿದ್ಯುತ್ ಪರಿವರ್ತಕಗಳ ಬೇಡಿಕೆ ಇದೆ, ಅವುಗಳಲ್ಲಿ 30,000 ಕವಿಕಾದಿಂದಲೂ ಉಳಿದ 20,000 ಟಿಸಿಗಳನ್ನು ಬೇರೆ ಸಂಸ್ಥೆಗಳಿಂದ ಖರೀದಿ ಮಾಡಲಾಗುವುದು.
ರಾಜ್ಯದಲ್ಲಿ 4.50 ಲಕ್ಷ ಅಕ್ರಮ ಪಂಟ್‌ಸೆಟ್‌ಗಳಿದ್ದು ಅದರಲ್ಲಿ 2.75 ಲಕ್ಷ ಪಂಟ್‌ಸೆಟ್‌ಗಳನ್ನು ಸಕ್ರಮ ಮಾಡಲಾಗಿದೆ.
ಮುಂದಿನ ಮೂರು ತಿಂಗಳಲ್ಲಿ ಬಾಕಿ ಇರುವ ಪಂಟ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳದಿದ್ದರೆ ಅಂತಹ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದರು.

