35
ದಾವಣಗೆರೆ:ಯಾವುದೇ ಒಬ್ಬ ಮುಖಂಡ ಅಥವಾ ವ್ಯಕ್ತಿಯಿಂದ ಪಕ್ಷ ನಡೆಯುವುದಿಲ್ಲ ಎಂಬುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸಾಮೂಹಿಕ ನಾಯಕತ್ವ, ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ, ನನ್ನಿಂದಲೇ ಎಲ್ಲ ಎಂಬ ಭ್ರಮೆ ಬೇಡ.
ಕೇರಳ ವಿಧಾನಸಭಾ ಚುನಾವಣೆ
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಜಮೀರ್ ಅಹಮದ್ ಖಾನ್ ತೊಡಗಿಸಿಕೊಂಡಿದ್ದಾರೆ.
ಅಲ್ಲಿಂದ ಹಿಂದಿರುಗಿದ ನಂತರ ಇಲ್ಲಿಯ ಉಪಚುನಾವಣೆಗೆ ಹೇಗೆ ಬಳಸಬೇಕೆಂಬ ತೀರ್ಮಾನ ಮಾಡುತ್ತೇವೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ, ಸ್ಥಳೀಯವಾಗಿ ನಮ್ಮ ಪಕ್ಷದಲ್ಲಿ ಆ ಸಮುದಾಯದ ಮುಖಂಡರಿದ್ದಾರೆ, ಒಬ್ಬರಿಂದಲೇ ಮತ ಬರುತ್ತದೆ ಎಂಬ ಭ್ರಮೆ ನಮಗಿಲ್ಲ ಎಂದರು.


