Saturday, September 19, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, September 19, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಅಡ್ಡ ಮತದಾನ: ಬಿಜೆಪಿ ಸತ್ಯ ಶೋಧನಾ ಸಮಿತಿ

by KM Shivaraju June 19, 2026
written by KM Shivaraju June 19, 2026 0 comments 1 minutes read
0FacebookTwitterPinterestEmail
93

ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಘಟನೆಯನ್ನು ಪಕ್ಷದ ದೆಹಲಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ.

ಅಡ್ಡ ಮತದಾನ ಕುರಿತಂತೆ ರಾಜ್ಯ ನಾಯಕರಿಂದ ವರದಿ ಕೇಳಿರುವ ವರಿಷ್ಠರು, ರಾಜ್ಯ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂವರು ಸದಸ್ಯರ ಸಮಿತಿ

ಅಡ್ಡ ಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವಿಕತೆ ತಿಳಿಯಲು, ಪಕ್ಷದ ಮಾಜಿ ಪ್ರಧಾನಕಾರ್ಯದರ್ಶಿ ಹಾಗೂ ಹಾಲಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಮೂವರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಲಾಗಿದೆ.

ಮಾಜಿ ಸಚಿವ ಎನ್.ಮಹೇಶ್, ವಿಧಾನಸಭಾ ಸದಸ್ಯ ಮಹೇಶ್ ಟೆಂಗಿನಕಾಯಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಘಟನೆ ಬಗ್ಗೆ ಪೂರ್ಣ ಮಾಹಿತಿ ಸಿದ್ಧಪಡಿಸಿ, ಜೂನ್ 27ರಂದು ದೆಹಲಿಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸೂಚಿಸಿದ್ದಾರೆ.

ವರಿಷ್ಠರಿಗೆ ಅಗರ್ವಾಲ್ ವರದಿ

ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ತಮ್ಮ ಪಕ್ಷದ ಶಾಸಕರ ಅಡ್ಡ ಮತದಾನ ರಾಜ್ಯ ನಾಯಕತ್ವದ ವೈಫಲ್ಯ ಎಂದಿದ್ದಾರೆ, ಅಲ್ಲದೆ, ಈ ಕುರಿತಂತೆ ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.

ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದಾರೆ, ಪಕ್ಷದ ಅಧ್ಯಕ್ಷರು ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ.

ಶಾಸಕರು ಬಣಗಳಾಗಿ ವಿಭಜನೆಯಾಗಿದ್ದಾರೆ, ಹೀಗಾಗಿ ಪಕ್ಷದ ಶಿಸ್ತು ಇಲ್ಲಿ ಕೆಲಸ ಮಾಡುತ್ತಿಲ್ಲ, ಶಾಸಕರ ಅಡ್ಡ ಮತದಾನಕ್ಕೆ ನಾಯಕತ್ವದ ವೈಫಲ್ಯವೇ ಕಾರಣ ಎಂದು ತಮ್ಮ ವರದಿಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.

ನಬಿನ್‌ರಿಂದ ಪ್ರಾಥಮಿಕ ಮಾಹಿತಿ

ರಾಧಾ ಮೋಹನ್ ದಾಸ್ ಅಗರ್ವಾಲ್ ಮಾಹಿತಿ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗುರುವಾರ ರಾತ್ರಿಯೇ ವಿಜಯೇಂದ್ರ ಅವರನ್ನು ಸಂಪರ್ಕಿಸಿ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಪಡೆದರು.

ನಂತರ ಸತ್ಯಾಸತ್ಯತೆ ಅರಿಯಲು ಶೋಧನಾ ಸಮಿತಿ ರಚಿಸುತ್ತೇವೆ, ವರದಿ ಸಿದ್ಧಗೊಳ್ಳುತ್ತಿದ್ದಂತೆ ದೆಹಲಿಗೆ ಬನ್ನಿ ಎಂದು ಸೂಚಿಸಿದರು.

ತಿಂಗಳ 25ರೊಳಗೆ ವರದಿ

ತ್ರಿಸದಸ್ಯ ಸಮಿತಿ ಪಕ್ಷದ ಎಲ್ಲಾ ಶಾಸಕರು ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ವರದಿ ಸಿದ್ಧಪಡಿಸಬೇಕು, ಈ ಸಮಯದಲ್ಲಿ ಅಡ್ಡ ಮತದಾನಕ್ಕೆ ಕಾರಣವಾದ ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಲು ಸೂಚನೆ ನೀಡಿದ್ದು, ಈ ತಿಂಗಳ 25ರೊಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ.

ರಾಧಾಮೋಹನ್ ದಾಸ್ ಸಲಹೆ ಮೇರೆಗೆ ಅಶೋಕ್ ಗುರುವಾರ ರಾತ್ರಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮೈತ್ರಿಕೂಟದ ಶಾಸಕರಿಂದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
b y vijayendrabjp central leadersbjp fact finding committeecouncil electioncross votingr ashokradha mohan das agarval
0 FacebookTwitterPinterestEmail
KM Shivaraju

previous post
ಪರಿಷತ್: ಕಾಂಗ್ರೆಸ್, ಬಿಜೆಪಿ ಗೆಲುವು; ಜೆಡಿಎಸ್ ಸೋಲು
next post
ಮೇಕೆದಾಟುಗೆ ತಮಿಳುನಾಡು ಸಿಎಂ ವಿಜಯ್ ಕ್ಯಾತೆ

You may also like

ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಸಾಧ್ಯ

September 19, 2026

3,705 ಕೋಟಿ ರೂ. ನೀಡಿ: ಕೇಂದ್ರಕ್ಕೆ ಕರ್ನಾಟಕ ಒತ್ತಾಯ

September 18, 2026

ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

September 17, 2026

ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

September 16, 2026

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

September 15, 2026

ಕಾಂಗ್ರೆಸ್ ಹಗರಣಗಳ ತನಿಖೆಗೆ ಇ.ಡಿ. ಚೀಫ್ ಎಂಟ್ರಿ !

September 12, 2026

ಇ.ಡಿ. ರಾಡಾರ್‌ನಲ್ಲಿ ಇನ್ನೂ ಮೂರ‍್ನಾಲ್ಕು ಸಚಿವರು

September 11, 2026

ಮುಂದಿನ 500 ದಿನ ಆಡಳಿತದಲ್ಲಿ 6 ಲಕ್ಷ ಉದ್ಯೋಗ

September 10, 2026

ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇ.ಡಿ. ತೂಗುಕತ್ತಿ

September 9, 2026

ತಮಿಳುನಾಡಿಗೆ 15 ದಿನ 6 ಸಾವಿರ ಕ್ಯೂಸೆಕ್ ನೀರು ಬಿಡಿ

September 8, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (571)
  • ಅಂಕಣ (109)
  • ಉದ್ಯೋಗ (352)
  • ದಿನ ಭವಿಷ್ಯ (110)
  • ರಾಜಕೀಯ (2,064)
  • ರಾಜ್ಯ (2,379)
  • ರಾಷ್ಟ್ರ (2,343)
  • ವಿಶ್ಲೇಷಣೆ (202)
  • ಶಿಕ್ಷಣ (410)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಸಾಧ್ಯ

    September 19, 2026
  • 3,705 ಕೋಟಿ ರೂ. ನೀಡಿ: ಕೇಂದ್ರಕ್ಕೆ ಕರ್ನಾಟಕ ಒತ್ತಾಯ

    September 18, 2026
  • ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

    September 17, 2026

KMS Special

  • ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಸಾಧ್ಯ

    September 19, 2026
  • 3,705 ಕೋಟಿ ರೂ. ನೀಡಿ: ಕೇಂದ್ರಕ್ಕೆ ಕರ್ನಾಟಕ ಒತ್ತಾಯ

    September 18, 2026
  • ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

    September 17, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ...

September 19, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ