Monday, September 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, September 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜ್ಯರಾಷ್ಟ್ರ

ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳ ತಿದ್ದುಪಡಿಗೆ ಒಪ್ಪಿಗೆ

by cklbkrish November 9, 2023
written by cklbkrish November 9, 2023 0 comments 2 minutes read
0FacebookTwitterPinterestEmail
93
ಪರಿಷತ್ತಿನ ನಿಬಂಧನೆ ಸಂಖ್ಯೆ 4,5,6,7,9,10,17,18,20,22,24.27,32 ಮತ್ತು 33 ಕ್ಕೆ ತಿದ್ದುಪಡಿ

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಪುಷ್ಪಗಿರಿ ಮಠದ ಸಭಾಭವನದಲ್ಲಿ ಸೆಪ್ಟಂಬರ್ 3 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಧ್ಯೇಯೋದ್ದೇಶಗಳ  ತಿದ್ದುಪಡಿಯು  ಕರ್ನಾಟಕ ಸರ್ಕಾರದ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಕಾನೂನು ಬದ್ದವಾಗಿದೆ ಎಂದು ಕೂಲಂಕುಶವಾಗಿ ಪರಿಶೀಲಿಸಿ ಒಪ್ಪಿಗೆಯನ್ನು ನೀಡಿದ್ದಾರೆ. ಇದರಿಂದ ಪರಿಷತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು  ನೆರವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ಜಾರಿಯಲ್ಲಿರುವ, ಪರಿಷತ್ತಿನ ನಿಬಂಧನೆಗಳಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇರುವ ಬಗ್ಗೆ ಜೂನ್ 22 ರಂದು ತುಮಕೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಪರಿಣಿತ ಹಾಗೂ ಅನುಭವಿ ಸದಸ್ಯರನ್ನೊಳಗೊಂಡ ತಿದ್ದುಪಡಿ ಸಮಿತಿ ರಚಿಸಲು ಸರ್ವಾನುಮತದಿಂದ ನಿರ್ಣಯಕೈಗೊಳ್ಳಲಾಗಿತ್ತು. ಜೊತೆಗೆ ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರಿಗೂ  ಪತ್ರ ಬರೆದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

ಕಸಾಪದ ಹಲವು ನಿಬಂಧನೆಗಳಿಗೆ ತಿದ್ದುಪಡಿ

ಸಮಿತಿಯು ಯಾವುದೇ ಲೋಪ-ದೋಷಗಳು ಇರದಂತೆ ಹಾಗೂ ಕಾನೂನಾತ್ಮಕವಾಗಿ ಎಡರು-ತೊಡರುಗಳು ಉಂಟಾಗದಂತೆ ಈ ತಿದ್ದುಪಡಿಗಳನ್ನು ಸಿದ್ಧಪಡಿಸಿಕೊಟ್ಟಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಪರಿಷತ್ತಿನ ನಿಬಂಧನೆ ಸಂಖ್ಯೆ 4,5,6,7,9,10,17,18,20,22,24.27, 32 ಮತ್ತು 33ರುಗಳನ್ನು ತಿದ್ದುಪಡಿ ಮಾಡಲಾಗಿದ್ದು. ಈ ಮೂಲಕ ಪರಿಷತ್ತು ಸಮಕಾಲೀನ ವಿದ್ಯಮಮಾನಗಳಿಗೆ ಸ್ಪಂದಿಸುವುದು ಸಾಧ್ಯವಾಗಲಿದೆ.

ವಿದೇಶಗಳಲ್ಲಿರುವ ಕನ್ನಡ ಸಂಘಗಳ ಚಟುವಟಿಕೆಗಳನ್ನು ತನ್ನ ಕ್ರಿಯಾಶೀಲವ್ಯಾಪ್ತಿಗೆ ತರುವ ಉದ್ದೇಶದಿಂದ ಅವುಗಳನ್ನು ‘ಅಂಗಸಂಸ್ಥೆ’ ಗಳನ್ನಾಗಿ ಮಾಡಿ ಕೊಳ್ಳಲು ತಿದ್ದುಪಡಿಯು ಅನುವು ಮಾಡಿ ಕೊಡಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕಗಳನ್ನು ಸ್ಥಾಪಿಸುವದಕ್ಕಿಂತ ಇದು ಪರಿಣಾಮಕಾರಿಯಾಗಿದ್ದು, ಈ ಸಂಘ ಸಂಸ್ಥೆಗಳು ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದು ಪರಿಷತ್ತಿನ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಇದು ನೆರವು ನೀಡಲಿದೆ. ವಿಶ್ವಾದ್ಯಂತ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪರಿಷತ್ತಿಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ತಿದ್ದುಪಡಿಯನ್ನು ಮಾಡಲಾಗಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ 33 ವಿಧಿಯ ತಿದ್ದುಪಡಿಯು  ಸಮ್ಮೇಳನ ಜರುಗಲಿರುವ ಜಿಲ್ಲೆಯ ಚುನಾಯಿತ ಅಧ್ಯಕ್ಷರ ಸ್ಥಾನ ಯಾವುದೇ ಕಾರಣದಿಂದ ತೆರವಾಗಿದ್ದಲ್ಲಿ ಅಥವಾ ಜಿಲ್ಲಾಧ್ಯಕ್ಷರು ಆರೋಗ್ಯದ ಸಮಸ್ಯೆಯೂ ಸೇರಿದಂತೆ ಯಾವುದೇ ಕಾರಣದಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಮರ್ಥರಲ್ಲದ ಪಕ್ಷದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರು ಸಮಿತಿಯನ್ನು ರಚಿಸಿ ಕ್ರಿಯಾಶೀಲರಾಗಲು ಅವಕಾಶ  ನೀಡಲಿದೆ.

ಇದು ಕನ್ನಡ ಸಾಹಿತ್ಯ ಪರಿಷತ್ತಿನ ಬದ್ದತೆಗೆ ನಿದರ್ಶನವಾಗಿದ್ದು ಎಂತಹ ಸಂದರ್ಭದಲ್ಲಿಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆಯಲು ನೆರವು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಚರಿಸಲು ಸ್ಥಳ ನಿಗದಿಯಾಗಿರುವುದರಿಂದ ಸಮ್ಮೇಳನ ಸಂಘಟನೆಗೆ ಅನಿವಾರ್ಯತೆ ಇರುವ ಕಾರಣ, ಇವೆಲ್ಲವುಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಮಂಡ್ಯ ಜಿಲ್ಲಾಧ್ಯಕ್ಷರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರು ರಚಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಿಬಂಧನೆಗಳಿಗೆ ತಿದ್ದುಪಡಿಯ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
amendmentbengalurukannadasahithya parishatthukarnatakakasapakmskannadamahesh joshi
0 FacebookTwitterPinterestEmail
cklbkrish

previous post
ಸಸ್ಯಾಭಿವೃದ್ಧಿ ಅವಕಾಶಗಳ ಬಗ್ಗೆ ವಿದೇಶಗಳಿಗೆ ಅಧ್ಯಯನ ಪ್ರವಾಸ
next post
6 ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ವಿಜಯಪುರ ಸೂಕ್ತ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ