Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಬೆಂಗಳೂರು ನಗರಕ್ಕೆ  ಇನ್ನೊವೇಶನ್  ಕೇಂದ್ರ ಮತ್ತೊಂದು ಗರಿ ಮೂಡಿಸಲಿದೆ

by cklbkrish November 9, 2023
written by cklbkrish November 9, 2023 0 comments 2 minutes read
2FacebookTwitterPinterestEmail
91
ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್  ಶಕ್ತಿ ಕೇಂದ್ರ

ಬೆಂಗಳೂರು: ಬೆಂಗಳೂರಿನ ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್  ಶಕ್ತಿ ಕೇಂದ್ರವಾಗಿದ್ದು, ಆರೋಗ್ಯ ಸೇವಾ ಪರಿಹಾರಗಳನ್ನು ಒದಗಿಸುವ ಮೂಲಕ ಜಾಗತಿಕವಾಗಿ ಜನರ ಬದುಕನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

 ಫಿಲಿಪ್ಸ್ ಇಂಡಿಯಾ ಇನ್ನೋವೇಶನ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು,  ಭಾರತದ ಆರೋಗ್ಯ ಕ್ಷೇತ್ರದಲ್ಲಿ ಫಿಲಿಪ್ಸ್ ಸಂಸ್ಥೆ  ಮುಂಚೂಣಿಯಲ್ಲಿದೆ. ಕಳೆದ 27 ವರ್ಷಗಳಿಂದ ಕರ್ನಾಟಕದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.

ಬೆಂಗಳೂರಿನಲ್ಲಿ ನೆಲೆಸಿರುವ ಫಿಲಿಪ್ಸ್ ಇನ್ನೊವೇಶನ್ ಕ್ಯಾಂಪಸ್ ಫಿಲಿಪ್ಸ್ ನ ಡಿಜಿಟಲ್  ಪರಿವರ್ತನೆಯನ್ನು ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಮಹತ್ವದ  ಪಾತ್ರವನ್ನು ವಹಿಸಲಿದೆ. 

6,50,000 ಚದರ ಅಡಿ ವಿಸ್ತೀರ್ಣದ ಬೆಂಗಳೂರಿನ ಈ ಬೃಹತ್ ಆವರಣದಲ್ಲಿ ಸುಮಾರು 5000 ವೃತ್ತಿಪರರು ಕಾರ್ಯನಿರ್ವಹಿಸಬಹುದಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ ಎಂದು ಹೇಳಿದರು. 

ಆರೋಗ್ಯ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿ

ರೋಗಿಯ ಚಿಕಿತ್ಸಾ ಅನುಭವವನ್ನು  ಉತ್ತಮಪಡಿಸುವ, ಉತ್ತಮ ಆರೋಗ್ಯ  ಫಲಿತಾಂತಗಳನ್ನು ನೀಡುವ, ಸಿಬ್ಬಂದಿಗೂ ಕೂಡ ಉತ್ತಮ ಅನುಭವವನ್ನು  ಕಲ್ಪಿಸುವುದಲ್ಲದೇ . ಆರೋಗ್ಯ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಜಾಗತಿಕವಾಗಿ ಟೆಕ್‍ಹಬ್ ಎಂದು ಪರಿಗಣಿಸಲ್ಪಡುವ ಬೆಂಗಳೂರು ನಗರಕ್ಕೆ  ಇನ್ನೊವೇಶನ್  ಕೇಂದ್ರ ಮತ್ತೊಂದು ಗರಿ ಮೂಡಿಸಲಿದೆ ಎಂದು ನಾನು ನಂಬಿದ್ದೇನೆ. ನೆದರ್‍ಲ್ಯಾಂಡಿನ ಪ್ರಧಾನಮಂತ್ರಿ ಮಾರ್ಕ್ ರುಟ್ ಅವರು ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಭೇಟಿ ನೀಡಿರುವುದನ್ನು ಕರ್ನಾಟಕ ಸರ್ಕಾರ ಶ್ಲಾಘಿಸುತ್ತದೆ.

 ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ. ಸಂಶೋಧನಾ ಸಂಸ್ಥೆಗಳು, ಔಷಧ ಕಂಪನಿಗಳು,  ವೈದ್ಯಕೀಯ ವಸ್ತುಗಳ ಉತ್ಪಾದನೆಗೆ ನಮ್ಮ ರಾಜ್ಯ ಹೆಸರುವಾಸಿಯಾಗಿದೆ.

ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು ನೀಡಿರುವುದು ಈ ವಲಯದ ಅಭಿವೃದ್ಧಿಗೆ ಇಂಬು ನೀಡಿರುವುದಲ್ಲದೇ ರಾಜ್ಯದ ಆರ್ಥಿಕತೆ ಪ್ರಮುಖ ಕೊಡುಗೆ ನೀಡಿದೆ.

 ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ), ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಹಾಗೂ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ( ನಿಮ್ಹಾನ್ಸ್) sಸಂಸ್ಥೆಗಳು ಅಪಾರ ಸಂಖ್ಯೆಯಲ್ಲಿ  ಅರ್ಹ ಆರೋಗ್ಯ ಸೇವಾ ವೃತ್ತಿಪರರನ್ನು ಉತ್ಪಾದಿಸುತ್ತಿದೆ.

ಆರೋಗ್ಯ ಸೇವಾ ಸಂಸ್ಥೆಗಳಿಗೆ ಕರ್ನಾಟಕ ನೆಲೆ

ಜಾಗತಿಕ ಆರೋಗ್ಯ ಸೇವಾ ಉದ್ಯಮದಲ್ಲಿ ಕ್ರಾಂತಿಯನ್ನು ತರಲು  ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲು  ಹಲವಾರು ಆರೋಗ್ಯ ಸೇವಾ ಸಂಸ್ಥೆಗಳಿಗೆ ಕರ್ನಾಟಕ ನೆಲೆಯಾಗಿದೆ.

ಕರ್ನಾಟಕದ ಸ್ಟಾರ್ಟ್ ಅಪ್ ವಾತಾವರಣದಲ್ಲಿ  ಅನೇಕ ಆರೋಗ್ಯ ಸೇವಾ ಹಾಗೂ ಜೀವ ವಿಜ್ಞಾನ ಸ್ಟಾರ್ಟ್ ಅಪ್‍ಗಳಿದ್ದು, ನಾವೀನ್ಯತಾ ಪರಿಹಾರಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ ಗಳನ್ನು ಕೂಡ ಒಳಗೊಂಡಿದೆ.  ಡಿಜಿಟಲ್ ಆರೋಗ್ಯ, ವೈಯಕ್ತಿಕ ಔಷಧ ಮತ್ತು  ಔಷಧ ಅನ್ವೇಷಣೆಯತ್ತ ಈ ಸ್ಟಾರ್ಟ್ ಅಪ್‍ಗಳು ಗಮನಹರಿಸುತ್ತಿವೆ ಎಂದರು.

ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕರ್ನಾಟಕ  ಹೂಡಿಕೆಗೆ ನೆಚ್ಚಿನ ತಾಣ

ಮುಂಚೂಣಿಯಲ್ಲಿರುವ ಭಾರತೀಯ ಹಾಗೂ ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕರ್ನಾಟಕ  ಹೂಡಿಕೆಗೆ ನೆಚ್ಚಿನ ತಾಣ ಎಂದು ಗುರುತಿಸಲ್ಪಟ್ಟಿದೆ.

ಇಂದಿನ ಅವಶ್ಯಕತೆಗಳಿಗೆ ಪೂರಕವಾಗಿರುವಂತೆ ಪ್ರತಿಭೆಗಳನ್ನು ರೂಪಿಸುವ, ಸುಧಾರಿತ ಮೂಲಸೌಕರ್ಯಗಳು,  ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹಾಗೂ ಜಾಗತಿಕ ಇನ್ನೊವೇಸನ್ ಹಬ್ ಎಂದು ಕರ್ನಾಟಕವನ್ನು ಬ್ರಾಂಡ್ ಮಾಡುವುದು  ನಮ್ಮ ಸರ್ಕಾರದ ಕೆಲವು ಆದ್ಯತೆಗಳು.

ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ, ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳಿಗೆ ಪೂರಕವಾದ ನೀತಿಗಳನ್ನು ರೂಪಿಸಲು ಸರ್ಕಾರ  ಉತ್ಸುಕವಾಗಿದೆ.

ಸ್ಟಾರ್ಟ್ ಅಪ್, ಐಟಿ, ಎವಿಜಿಸಿ, ಬಯೋಟೆಕ್ನಾಲಜಿ ಹಾಗೂ ಇಎಸ್‍ಡಿಎಂಗಳಿಗೆ ನಿರ್ದಿಷ್ಟವಾದ ನೀತಿಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ.

ನನ್ನ ಮಾತುಗಳನ್ನು ಮುಗಿಸುವ ಮುನ್ನ,  ಬೆಂಗಳೂಟು ಟೆಕ್ ಸಮ್ಮಿಟ್- 2023 ರಲ್ಲಿ ಭಾಗವಹಿಸುವಂತೆ ತಮ್ಮೆಲ್ಲರನ್ನು ನಾನು ಆಹ್ವಾನಿಸುತ್ತೇನೆ.   ಕಳೆದ 25 ವರ್ಷಗಳಿಂದ ಬೆಂಗಳೂರು ಟೆಕ್ ಸಮ್ಮಿಟ್ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ  ಕಾರ್ಯಕ್ರಮವಾಗಿದೆ.  ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿನ ಅತ್ಯುತ್ತಮವಾದವರನ್ನು ಒಂದೆಡೆ ಸೇರಿಸುವ ಪರಿಣಾಮಕಾರಿ  ವೇದಿಕೆಯಾಗಿದೆ ಎಂದು ಹೇಳಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bengaluruIndustrykarnatakakmskmskannadaSiddaramaiah
2 FacebookTwitterPinterestEmail
cklbkrish

previous post
ಕೃಷಿ ಪಂಪ್ ಸೆಟ್ ಗೆ  ಹೊಸ ವಿದ್ಯುತ್ ಸಂಪರ್ಕಕ್ಕೆ ಸಬ್ಸಿಡಿ ಕಡಿತ ಆದೇಶ ವಾಪಸ್ಸಿಗೆ ಹೆಚ್ ಡಿಕೆ ಆಗ್ರಹ
next post
ಕೃಷಿ ಪಂಪ್‌ಸೆಟ್‌ ಹೊಸ ವಿದ್ಯುತ್ ಸಂಪರ್ಕದ ಸಬ್ಸಿಡಿ ರದ್ದು

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ