Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ರಾಜ್ಯಸಭೆಗೆ ಹೋಗುತ್ತಾರಾ ಸೋಮಣ್ಣ?

by admin January 1, 2024
written by admin January 1, 2024 0 comments 4 minutes read
2FacebookTwitterPinterestEmail
193

ರಾಜ್ಯ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರಿಗೆ ಮೊನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನು ಮಾಡಿದ್ದರು.

ವಿಧಾನಸಭಾ ಚುನಾವಣೆಯ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಕುದಿಯುತ್ತಿರುವ ಸೋಮಣ್ಣ ಅವರನ್ನು ಸಮಾಧಾನಿಸುವುದು ನಡ್ಡಾ ಅವರ ಉದ್ದೇಶ.

ಅಂದ ಹಾಗೆ ಸೋಮಣ್ಣ ಎಪಿಸೋಡನ್ನು ಸೆಟ್ಲ್ ಮಾಡಲು ಮೋದಿ-ಅಮಿತ್ ಷಾ ಜೋಡಿ ತಮಗೆ ಜವಾಬ್ದಾರಿ ನೀಡಿದ್ದರಿಂದ ನಡ್ಡಾ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.ಹಾಗಂತಲೇ ಮೂರು ವಾರಗಳ ಹಿಂದೆ ಸೋಮಣ್ಣ ಅವರನ್ನು ನಡ್ಡಾ ಸಂಪರ್ಕಿಸಿದ್ದರಾದರೂ ಆ ಮಾತುಕತೆ ವಿಫಲವಾಗಿತ್ತು.

ಕಾರಣ ತಮ್ಮನ್ನು ಸಂಪರ್ಕಿಸಿದ ನಡ್ಡಾ ಅವರು;ನಿಮಗೇನೇ ಬೇಸರವಿರಲಿ, ಅದನ್ನು ಸರಿ ಮಾಡೋಣ, ಅದಷ್ಟು ಬೇಗ ದಿಲ್ಲಿಗೆ ಬಂದು ಬಿಡಿ,ವಿವರವಾಗಿ ಮಾತನಾಡೋಣ ಅಂತ ಆಹ್ವಾನ ನೀಡಿದಾಗ ಸೋಮಣ್ಣ ಕೆರಳಿಬಿಟ್ಟಿದ್ದರು.

ಅಷ್ಟೇ ಅಲ್ಲ, ನಾನು ದಿಲ್ಲಿಗೆ ಬಂದು ನಿಮ್ಮ ಜತೆ ಮಾತನಾಡಿದರೆ ವಿಷಯ ಸೆಟ್ಲಾಗಲ್ಲ ಸಾರ್, ಇವತ್ತು ನನ್ನ ಅಸಮಾಧಾನಕ್ಕೇನು ಕಾರಣ ಅಂತ ಗೊತ್ತಾಗಬೇಕಿದ್ದರೆ ನಿಮ್ಮ ಜತೆಗಿನ ಮಾತುಕತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೂ ಕರೆಸಿ. ನಡೆದಿದ್ದೇನು ಇವರು ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ನನ್ನನ್ನು ಹೇಗೆ ಸೋಲಿಸಿದರು ಅಂತ ನಾನು ದಾಖಲೆ ಸಮೇತ ಹೇಳುತ್ತೇನೆ.ಆನಂತರ ಈ ವಿಷಯದಲ್ಲಿ ನೀವೇ ತೀರ್ಮಾನ ತೆಗೆದುಕೊಳ್ಳಿ.ಒಂದು ವೇಳೆ ಈ ಮಾತುಕತೆಗೆ ಅವರಿಬ್ಬರು ಬರದೆ ನಾನೊಬ್ಬನೇ ಬಂದರೆ ಫಲವಿಲ್ಲ ಅಂತ ನೇರಾನೇರವಾಗಿ ಹೇಳಿಬಿಟ್ಟಿದ್ದರು.

ಯಾವಾಗ ಸೋಮಣ್ಣ ಗರಂ ಆಗಿರುವುದು ಗೊತ್ತಾಯಿತೋ ಅಗ ನಡ್ಡಾ ಅವರು ಹೆಚ್ಚು ಮಾತನಾಡದೆ ಲೈನು ಕಟ್ ಮಾಡಿದ್ದರು.

ಇದಾದ ನಂತರ ನಡ್ಡಾ ಅವರನ್ನು ಭೇಟಿ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಲ್ಲಿಗೆ ಹೋದರಲ್ಲ ಆ ಸಂದರ್ಭದಲ್ಲಿ ಕೆಲ ಪತ್ರಕರ್ತರೊಂದಿಗೆ ಔಪವಾರಿಕವಾಗಿ ಮಾತನಾಡಿದ ಅವರು;ಅಯ್ಯೋ ನಮಗೆ ಸೋಮಣ್ಣ,ಯತ್ನಾಳ್ ಅವರೆಲ್ಲ ಲೆಕ್ಕವೇ ಅಲ್ಲ ಬಿಡ್ರೀ,ಕರ್ನಾಟಕದಲ್ಲಿ ಬಿಜೆಪಿ ಅಂದ್ರೆ ಯಡಿಯೂರಪ್ಪ.ಯಡಿಯೂರಪ್ಪ ಅಂದ್ರೆ ಬಿಜೆಪಿ ಅಷ್ಟೇ ಅಂತ ಹೇಳಿದ್ದರಂತೆ.

ಹೀಗೆ ದಿಲ್ಲಿಯಲ್ಲಿ ವಿಜಯೇಂದ್ರ ನಿಮ್ಮನ್ನು ಉಚಾಯಿಸಿ ಮಾತನಾಡಿದ್ದಾರೆ ಅಂತ ಆಪ್ತರು ಮೆಸೇಜು ಕೊಟ್ಟಾಗ ಸೋಮಣ್ಣ ಇನ್ನಷ್ಟು ಕಿಡಿಕಿಡಿಯಾಗಿದ್ದು ನಿಜ.

ಹೀಗಾಗಿ ದಿಲ್ಲಿಯ ನಾಯಕರ ಜತೆ ಮಾತನಾಡುವ ಆಸಕ್ತಿ ಕಳೆದುಕೊಂಡ ಸೋಮಣ್ಣ,ಮುಂದೇನು ಮಾಡಬೇಕು ಎಂಬ ಯೋಚನೆಗಿಳಿದಾಗ ಕಾಂಗ್ರೆಸ್ ಪಕ್ಷದ ನಾಯಕರು ಅವರಿಗೆ ತಗಲಿಕೊಂಡಿದ್ದಾರೆ.

ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತುಮಕೂರಿನಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಚಿಂತೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಸೋಮಣ್ಣ ಭರವಸೆಯಾಗಿ ಕಂಡಿರುವುದು ಸಹಜ.ಹಾಗಂತಲೇ,ಸೋಮಣ್ಣ ಅವ್ರೇ,ನೀವು ಪಕ್ಷಕ್ಕೆ ಬಂದು ಪಾರ್ಲಿಮೆಂಟ್ ಕ್ಯಾಂಡಿಡೇಟ್ ಆದರೆ ನಿರಾಯಾಸವಾಗಿ ಗೆಲ್ಲುತ್ತೀರಿ ಅಂತ ಹೇಳತೊಡಗಿದ್ದಾರೆ.

ಹೀಗೆ ಕಾಂಗ್ರೆಸ್ ನಾಯಕರ ಒತ್ತಾಯ ಹೆಚ್ಚಾದ ಬೆನ್ನಲ್ಲೇ ಮೊನ್ನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಪುನ: ಸೋಮಣ್ಣ ಅವರಿಗೆ ಫೋನು ಮಾಡಿದ್ದಾರೆ.

ಅವರು ಲೈನಿಗೆ ಬಂದು ದಿಲ್ಲಿಗೆ ಬರಲು ಆಹ್ವಾನಿಸಿದರೆ ಸೋಮಣ್ಣ ಯಥಾ ಪ್ರಕಾರ,ಸಾರ್ ಮಾತುಕತೆಗೆ ನಾನು ಮಾತ್ರ ಬಂದರೆ ಸಾಲದು.ಜತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ಬರಬೇಕು.ಅಲ್ಲಿಯ ತನಕ ನಾನೂ ಬರಲ್ಲ ಎಂದಿದ್ದಾರೆ.

ಆಗೆಲ್ಲ ಬೇಸರದ ಧ್ವನಿಯಲ್ಲಿ ಮಾತನಾಡಿದ ನಡ್ಡಾ ಅವರು,ಸೋಮಣ್ಣ ಅವ್ರೇ ಪದೇ ಪದೇ ಯಾಕೆ ಯಡಿಯೂರಪ್ಪ,ವಿಜಯೇಂದ್ರ ಅವರೂ ಬರ್ಲಿ ಅಂತ ಪಟ್ಟು ಹಿಡಿಯುತ್ತೀರಿ ಮೊನ್ನೆ ನಾನು ಕೂಡಾ ಅವರ ಜತೆ ಮಾತನಾಡಿದ್ದೇನೆ. ಸೋಮಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಸೋತರು, ಯಾಕೆ ಸೋತರು, ಅಂತ ಅವರಿಗೆ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದೇನೆ.

ಅಷ್ಟೇ ಅಲ್ಲ,ಯಾವ ಕಾರಣಕ್ಕೂ ಮುಂದೆ ಇಂತದ್ದೆಲ್ಲ ಆಗಬಾರದು.ಇದು ಸರಿಯಲ್ಲ ಅಂತ ನೇರವಾಗಿ ಹೇಳಿದ್ದೇನೆ.ಈಗ ಅವರೂ ಕೂಡಾ:ಸೋಮಣ್ಣ ಎಪಿಸೋಡನ್ನು ಹೇಗಾದರೂ ಸೆಟ್ಲ್ ಮಾಡಿ ಎಂದಿದ್ದಾರೆ.ಅದಕ್ಕಿಂತ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ಎಲ್ಲವೂ ಸುಸೂತ್ರವಾಗಿ ಬಗೆಹರಿಯಬೇಕು ಅಂತ ಪ್ರೈಮ್ ಮಿನಿಸ್ಟರು,ಹೋಮ್ ಮಿನಿಸ್ಟರು ಬಯಸಿದ್ದಾರೆ.
ಹೀಗಾಗಿ ಇವತ್ತು ಯಾವುದೇ ನೋವುಗಳಿದ್ದರೂ ಅದನ್ನು ಪಕ್ಷದ ಹಿತಾಸಕ್ತಿಯ ದೃಷ್ಟಿಯಿಂದ ನೀವು ಮರೆಯಬೇಕು.ಮೋದಿಯವರು ಪ್ರಧಾನಿ ಆಗಬೇಕು ಅಂತ ಬಯಸುವವರು ನೀವು.ಹೀಗಾಗಿ ಯೋಚಿಸಿ.ಜನವರಿ ಎರಡನೇ ವಾರ ದಿಲ್ಲಿಗೆ ಬನ್ನಿ ಅಂದಿದ್ದಾರೆ.

ನಡ್ಡಾ ಅವರಾಡಿದ ಮಾತು ಕೇಳಿ ಸ್ವಲ್ಪ ಹೊತ್ತು ಮೌನವಾದ ಸೋಮಣ್ಣ: ಆಗ್ಲಿ ಬಿಡಿ ಸಾರ್, ನೀವು ಡೇಟು ಕೊಡಿ.ದಿಲ್ಲಿಗೆ ಬರುತ್ತೇನೆ ಎಂದಿದ್ದಾರೆ.

ಅವರ ಮಾತು ಕೇಳಿ ಸಮಾಧಾನಗೊಂಡ ನಡ್ಡಾ ಅವರು,ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ನೀವು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ರೆಡಿಯಾಗಿ. ಉಳಿದಿದ್ದನ್ನು ನಮಗೆ ಬಿಡಿ ಎಂದಿದ್ದಾರೆ.

ಆದರೆ ಆ ಬಗ್ಗೆ ಆಸಕ್ತಿ ತೋರದ ಸೋಮಣ್ಣ,ಅದನ್ನೆಲ್ಲ ದಿಲ್ಲಿಗೆ ಬಂದಾಗ ಮಾತನಾಡುತ್ತೇನೆ ಸಾರ್.ಈಗಲೇ ಯಾವ ತೀರ್ಮಾನ ಬೇಡ ಎಂದಿದ್ದಾರೆ.

ಅಲ್ಲಿಗೆ ಕಳೆದ ಏಳು ತಿಂಗಳಿನಿಂದ ಬಗೆಹರಿಯದೆ ಉಳಿದಿದ್ದ ಸೋಮಣ್ಣ ಅನ್ ಹ್ಯಾಪ್ಪಿ ಎಪಿಸೋಡು ಸಧ್ಯದಲ್ಲೇ ಸೆಟ್ಲಾಗುವ ಲಕ್ಷಣಗಳು ಕಾಣಿಸಿಕೊಂಡಿವೆ.

ಅಂದ ಹಾಗೆ ಜನವರಿ ಎರಡನೇ ವಾರ ದಿಲ್ಲಿಗೆ ತೆರಳಲಿರುವ ಸೋಮಣ್ಣ ಅವರು ನಡ್ಡಾ ಅವರ ಮುಂದೆ ತಮ್ಮ ಮನಸ್ಸನ್ನು ತೋಡಿಕೊಳ್ಳಲಿದ್ದಾರೆ.ಈಗಿರುವ ಮಾಹಿತಿಯ ಪ್ರಕಾರ:ಸೋಮಣ್ಣ ಅವರಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸಿಲ್ಲ. ಬದಲಿಗೆ ರಾಜ್ಯಸಭೆಗೆ ಹೋಗುವುದು ಅವರ ಇರಾದೆ.

ಈ ಪ್ರಪೋಸಲ್ಲಿನೊಂದಿಗೆ ದಿಲ್ಲಿಗೆ ಧಾವಿಸಲಿರುವ ಅವರಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಗ್ರೀನ್ ಸಿಗ್ನಲ್ ಕೊಡುವ ವಿಶ್ವಾಸ ಇದೆಯಂತೆ.

ಹೆಗಡೆ-ಕಾಗೇರಿ ಬಿಗ್ ಫೈಟ್

ಈ ಮಧ್ಯೆ ಬಿಜೆಪಿಯಲ್ಲಿ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಬಿಗ್ ಫೈಟ್ ಶುರುವಾಗಿದೆ.

ಅಂದ ಹಾಗೆ ಪಾರ್ಲಿಮೆಂಟಿನಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಂತಕುಮಾರ್ ಹೆಗಡೆ ಇತ್ತೀಚಿನ ದಿನಗಳಲ್ಲಿ ಶಸ್ತ್ರಸನ್ಯಾಸದ ಸುಳಿವು ನೀಡಿದ್ದರು.

ಯಾವಾಗ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಲಕ್ಷಣ ಕಾಣತೊಡಗಿತೋ, ಆಗ ಫೀಲ್ಡಿಗಿಳಿದ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಾದ್ಯಂತ ರಣರಣ ಸುತ್ತಾಡತೊಡಗಿದರು. ಹೀಗೆ ಅವರು ಆಕ್ಟೀವ್ ಆದರಲ್ಲ, ಆಗ ಇದ್ದಕ್ಕಿದ್ದಂತೆ ಅನಂತಕುಮಾರ್ ಹೆಗಡೆಯವರ ಆಪ್ತರು ತಳಮಳಗೊಂಡರು.

ಅಂದ ಹಾಗೆ ಸದಾ ಕಾಲ ಹಿಂದೂ ಹುಲಿಯ ಪೋಷಾಕು ತೊಟ್ಟು, ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಾ ಬಂದಿರುವ ಅನಂತಕುಮಾರ್ ಹೆಗಡೆ, ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಕೂಗು ಹೊಸತಲ್ಲವಾದರೂ, ಅವರ ಜಾಗಕ್ಕೆ ಕಾಗೇರಿ ಬರುವ ಸೂಚನೆ ಕಾಣುತ್ತಿದ್ದಂತೆಯೇ ಈ ಆಪ್ತರು ಹುಯಿಲೆಬ್ಬಿಸತೊಡಗಿದರು. ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್ನಿನಲ್ಲಿ ನೀವು ಮತ್ತೆ ಸ್ಪರ್ಧಿಸಬೇಕು ಅಂತ ಅನಂತಕುಮಾರ ಹೆಗಡೆ ಅವರನ್ನು ಒತ್ತಾಯಿಸತೊಡಗಿದರು.

ಯಾವಾಗ ಈ ಕೂಗು ಶುರುವಾಯಿತೋ, ಆಗ ಅನಂತಕುಮಾರ ಹೆಗಡೆ ಕೂಡಾ, ಎಲೆಕ್ಷನ್ನಿನಲ್ಲಿ ಮತ್ತೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.ಇಂತಹ ಅಭಿಪ್ರಾಯವನ್ನು ನಿರ್ಲಕ್ಷಿಸುವುದು ಮೂರ್ಖತನವಾಗುತ್ತದೆ ಎಂದು ಬಿಟ್ಟರು.

ಇದರ ಪರಿಣಾಮವಾಗಿ ಏನಾಗಿದೆ ಎಂದರೆ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹೆಗಡೆ ವರ್ಸಸ್ ಕಾಗೇರಿ ನಡುವೆ ಬಿಗ್ ಫೈಟ್ ಶುರುವಾಗಿದೆ.

ಅಂದ ಹಾಗೆ ಬಿಜೆಪಿ ಮೂಲಗಳ ಪ್ರಕಾರ, ಈ ಬಾರಿ ಅನಂತಕುಮಾರ್ ಹೆಗಡೆ ಅವರಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡುವ ವಿಷಯದಲ್ಲಿ ಪಕ್ಷದ ನಾಯಕರಿಗೆ ಆಸಕ್ತಿ ಇಲ್ಲ. ಕಾರಣ ಸಂದರ್ಭ ಬಂದರೆ ಯಾವ ನಾಯಕರನ್ನಾದರೂ ಅವರು ಉಚಾಯಿಸಬಲ್ಲರು. ವಿವಾದಗಳಲ್ಲೇ ಮುಳುಗಿ ಬಿಸಿ ಕಾಯಿಸಿಕೊಳ್ಳಬಲ್ಲರು. ಹೀಗಾಗಿ ಅವರ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡುವುದು ಬೆಸ್ಟು ಎಂಬ ಅಭಿಪ್ರಾಯ ಬಹುತೇಕ ನಾಯಕರಲ್ಲಿದೆ.

ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಸಿಗುತ್ತದೋ, ಕಾದು ನೋಡಬೇಕು.

ಮಂಡ್ಯದಲ್ಲಿ ’ರಮ್ಯ’ ಕ್ಯಾಂಡಿಡೇಟು ಸಿಗುತ್ತಿಲ್ಲ

ಇನ್ನು ಪಾರ್ಲಿಮೆಂಟ್ ಚುನಾವಣೆ ಹತ್ತಿರವಾಗುತ್ತಿದ್ದರೂ ಕರ್ನಾಟಕದ ಕೈ ಪಾಳಯಕ್ಕೆ ಕ್ಯಾಂಡಿಡೇಟುಗಳ ಕೊರತೆ ಕಾಡುತ್ತಿದೆ.
ಇದು ಒಂದೆರಡು ಕ್ಷೇತ್ರಗಳ ಕತೆಯಲ್ಲ,ರಾಜ್ಯದ ಡಜನ್ ಗೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ವಿನ್ನಿಂಗ್ ಕ್ಯಾಂಡಿಡೇಟುಗಳು ಸಿಗುತ್ತಿಲ್ಲ.

ಈ ಮಧ್ಯೆ ಮಂಡ್ಯ ಪಾರ್ಲಿಮೆಂಟು ಕ್ಷೇತ್ರದ ಕತೆ ಮಾತ್ರ ಇನ್ನಷ್ಟು ವಿಚಿತ್ರವಾಗಿದೆ.ಯಾಕೆಂದರೆ ಅಲ್ಲಿ ಗೆಲ್ಲುವ ಶಕ್ತಿ ಇರುವ ಕ್ಯಾಂಡಿಡೇಟ್ ಇದ್ದಾರೆ.ಆದರೆ ಅವರಿಗೆ ಪಕ್ಷದ ಟಿಕೆಟ್ ಕೊಡುವ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರ್ಯಾರಿಗೂ ಒಲವಿಲ್ಲ.

ಅಂದ ಹಾಗೆ ಈ ಕ್ಯಾಂಡಿಡೇಟು ಬೇರೆ ಯಾರೂ ಅಲ್ಲ, ಚಿತ್ರನಟಿ, ಮಾಜಿ ಸಂಸದೆ ರಮ್ಯಾ.ಇವತ್ತೂ ಟಿಕೆಟ್ ಕೊಟ್ಟರೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕ್ಯಾಂಡಿಡೇಟನ್ನು ಅಲುಗಾಡಿಸಬಲ್ಲ ವರ್ಚಸ್ಸು ರಮ್ಯಾ ಅವರಿಗಿದೆ.ಆದರೆ ಪಕ್ಷದ ರಾಜ್ಯ ಘಟಕದಿಂದ ಹಿಡಿದು,ಜಿಲ್ಲಾ ಘಟಕದ ತನಕ ಬಹುತೇಕ ನಾಯಕರು ಇದನ್ನು ಲೆಕ್ಕಕ್ಕೇ ಇಡುತ್ತಿಲ್ಲ.

ಕಾರಣ, ರಮ್ಯಾ ಅವರು ಸಂಸದೆಯಾಗಿ ದಿಲ್ಲಿ ತಲುಪಿಕೊಂಡರೆ ಅವರನ್ನು ನಿಯಂತ್ರಿಸುವುದು ಕಷ್ಟ ಎಂಬ ಮುನ್ನೆಚ್ಚರಿಕೆ.

ಹೀಗಾಗಿ ವಿನ್ನಿಂಗ್ ಕ್ಯಾಂಡಿಡೇಟ್ ಕಾಣಿಸದಿದ್ದರೂ ರಮ್ಯಾ ಪರವಾಗಿ ಯಾರೂ ಬ್ಯಾಟ್ ಮಾಡುತ್ತಿಲ್ಲ. ಬದಲಿಗೆ ಮಂಡ್ಯ ಕ್ಷೇತ್ರದ ಕ್ಯಾಂಡಿಡೇಡಿನ ಆಯ್ಕೆ ಜವಾಬ್ದಾರಿಯನ್ನು ಪಕ್ಷದ ಹೈಕಮಾಂಡ್ ಹೆಗಲ ಮೇಲೆ ಹಾಕಿ ಎಲ್ಲರೂ ಕೈ ತೊಳೆದುಕೊಂಡಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bjpcongresdelhirajyasbhart vittal murthysomannavishweswara hegade kageri
2 FacebookTwitterPinterestEmail
admin

previous post
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ
next post
ಸರ್ಕಾರಿ ಹೈಟೆಕ್ ಮದ್ಯ ಮಾರಾಟ ಮಳಿಗೆ

You may also like

ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

March 9, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

March 9, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ