Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜ್ಯರಾಷ್ಟ್ರಶಿಕ್ಷಣ

ಮಾಯವಾಗುತ್ತಿರುವ ಸಂಕ್ರಾಂತಿ ಕಿಚ್ಚು!

by KM Shivaraju January 15, 2024
written by KM Shivaraju January 15, 2024 0 comments 2 minutes read
6FacebookTwitterPinterestEmail
226
ದೇಸೀ ದನಕರು ಕಣ್ಮರೆ; ವಿದೇಶಿ ಹಸುಗಳ ಲಗ್ಗೆ…

ಬೆಂಗಳೂರು: ರೈತ ಹಾಗೂ ಜಾನುವಾರುಗಳ ನಡುವೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ, ಆಧುನೀಕರಣ ಒಗ್ಗಿಕೊಂಡಂತೆ, ಯಾಂತ್ರೀಕರಣವೂ ಕೃಷಿ, ತೋಟಗಾರಿಕೆಯಲ್ಲಿ ಹಾಸುಹೊಕ್ಕಾಗಿದೆ.
ರೈತನಿಲ್ಲದೆ, ದನಕರುಗಳು ಇಲ್ಲ; ದನಕರುಗಳು ಇಲ್ಲದೆ ರೈತನಿಲ್ಲ ಎಂಬ ಮಾತು ಚಿರಪರಿಚಿತವಾಗಿತ್ತು.

ಜಾನುವಾರು ರೈತರ ಪರಮ ಮಿತ್ರವಾಗಿವೆ. ಅವಿಲ್ಲದೇ ಕೃಷಿ ಇರಲಿಲ್ಲ. ಬೇಸಾಯಕ್ಕೆ ರೈತನಷ್ಟೇ ಅವು ಕೂಡ ಹೆಗಲು ಕೊಡುತ್ತಿದ್ದವು. ಎತ್ತು, ಹಸು, ಹೋರಿ, ಎಮ್ಮೆ, ಕುರಿ, ಮೇಕೆಗಳು ರೈತರ ಜೀವನದ ಭಾಗವೇ ಆಗಿದ್ದವು. ಇಂತಹ ಜಾನುವಾರು ಇಲ್ಲದೆ, ರೈತರ ಬದುಕು ಸಾಗುತ್ತಿರಲಿಲ್ಲ. ಅವುಗಳಿಂದ ಕೃಷಿ ಬೇಕಾದ ಉಪಯುಕ್ತ ಗೊಬ್ಬರವೂ ಸಿಗುತ್ತಿತ್ತು.

ಹೈಬ್ರಿಡ್ ತಳಿಗಳ ಹಾವಳಿ; ರೈತ ಪರಾವಲಂಬಿ

ಅನಾದಿ ಕಾಲದಿಂದಲೂ ಬಳಕೆಯಲ್ಲಿದ್ದ ಮೂಲ ತಳಿಗಳ ವಿವಿಧ ಬೆಳೆಯನ್ನು ಹೈಬ್ರೀಡ್ ತಳಿಗಳು ಈಗಾಗಲೇ ಆಪೋಷನ ತೆಗೆದುಕೊಂಡಿವೆ. ಅಧಿಕ ಇಳುವರಿಯ ಆಸೆಯಿಂದ ಮೂಲತಳಿಯನ್ನೇ ಕೈ ಚೆಲ್ಲಿ ಪರಾವಲಂಬಿ ಆಗಿದ್ದೇವೆ.

ಇದರ ಜತೆಜತೆಗೆ ರಸಗೊಬ್ಬರ, ಕೀಟನಾಶಕಗಳು ಕೃಷಿಯಲ್ಲಿ ಬೆರತು ಹೋಗಿವೆ. ಇವಿಲ್ಲದೇ ಬೇಸಾಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಜಾನುವಾರುಗಳ ಸೆಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸಲಾಗುತ್ತಿತ್ತು. ಆರೋಗ್ಯಕರ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈಗ ತಳಿಯೂ ಬದಲಾಗಿದೆ, ಗೊಬ್ಬರವೂ ಬದಲಾಗಿ ವಿಷಯುಕ್ತ ಬೆಳೆ ಬೆಳೆಯುವ ಪರಿಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಪ್ರಕೃತಿಯ ವಿರುದ್ಧದ ಮಾನವನ ಅವಿರತ ಪ್ರಯತ್ನ ಫಲವೆಂದರೆ ತಪ್ಪಾಗಲಾರದು.

ಕೃಷಿ ಚಟುವಟಿಕೆಗಳಲ್ಲಿ ಜಾನುವಾರು ಬದಲಿಗೆ ಯಂತ್ರೋಪಕರಣಗಳದ್ದೇ ಕಾರುಬಾರು. ನೇಗಿಲು, ಕುಂಟೆ, ಹಲುಬೆ, ನೋಗ ಮೊದಲಾದ ಪರಿಕರಗಳು ಮೂಲೆ ಸೇರಿವೆ. ಅವುಗಳ ಬಳಕೆಯ ಸ್ಥಾನದಲ್ಲಿ ಟ್ರಾಕ್ಟರ್, ಟಿಲ್ಲರ್, ಜೆಸಿಬಿ ಸೇರಿದಂತೆ ನಾನಾ ರೀತಿಯ ಯಂತ್ರೋಪಕರಣಗಳ ಬಳಕೆ ಅನಿವಾರ್ಯ ಎನಿಸಿದೆ. ಹೀಗಾಗಿ ಜಾನುವಾರು ಅವಲಂಬನೆ ಕಡಿಮೆ ಆಗಿದೆ. ಉಳುಮೆಯಿಂದ ಒಕ್ಕಣೆಯವರೆಗೂ ಬಹುತೇಕ ರೈತರು ಯಂತ್ರಗಳನ್ನು ಅವಲಂಬಿಸಿದ್ದಾರೆ.

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಡಗರದಲ್ಲಿ ಗತಕಾಲದ ವೈಭವವನ್ನು ಮರೆತಿದ್ದೇವೆ. ಸುಗ್ಗಿಯ ಹಬ್ಬ ಸಂಕ್ರಾಂತಿ. ಇದಕ್ಕಿರುವ ವಿಶೇಷವಾದ ವೈಶಿಷ್ಟ್ಯ ಮತ್ಯಾವುದೇ ಹಬ್ಬದಲ್ಲಿ ಕಾಣುವುದಿಲ್ಲ.

ಬೇರೆ ಯಾವುದೇ ಹಬ್ಬದಲ್ಲಿ ಜನ-ಜಾನುವಾರುಗಳು ಒಟ್ಟಾಗಿ ಹಬ್ಬ ಆಚರಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗಿಂತ ಜಾನುವಾರುಗಳಿಗೆ ಮೀಸಲಿಟ್ಟ ಹಬ್ಬವಾಗಿತ್ತು.

ಆದರೆ, ಯಾಂತ್ರಿಕರಣದ ಮಹಿಮೆಯ ಫಲವಾಗಿ ಜಾನುವಾರು ಮಾಯವಾಗಿವೆ. ಹಳ್ಳಿಕಾರ್ (ನಾಟಿ), ಅಮೃತ್ ಮಹಲ್ ಮೊದಲಾದ ನೆಲಮೂಲದ ತಳಿಯ ದನಕರು, ಎತ್ತು, ಹೋರಿಗಳು ದಿನಕ್ರಮೇಣ ಕಡಿಮೆಯಾಗಿವೆ. ಊರಿನ ಪ್ರತಿಮನೆಯಲ್ಲಿ ಸಾಮಾನ್ಯವಾಗಿದ್ದ ಇವು ಈಗ ಪ್ರತಿ ಗ್ರಾಮದಲ್ಲೂ ಬೆರಳೆಣಿಕೆಯಷ್ಟು ಇವೆ. ಮುಂದೆ ಅವು ಇಲ್ಲವಾಗಬಹುದು ಎಂಬ ಆತಂಕ ಮನೆ ಮಾಡಿದೆ.

ಲಾಭದಾಯಕ ಹೈನುಗಾರಿಕೆಗೆ, ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರು ವಾಲಿದ್ದಾರೆ. ಇದರ ಪರಿಣಾಮವಾಗಿ ಅಧಿಕ ಹಾಲು ನೀಡುವ ವಿದೇಶಿ ತಳಿಯ ಹಸುಗಳು ನಗರ, ಗ್ರಾಮೀಣ ಎಂಬ ಬೇಧವಿಲ್ಲದೆ ನೋಡಬಹುದು.

ಹಿಂದೆಲ್ಲಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳನ್ನು ಶುಚಿಗೊಳಿಸಿ, ಬಣ್ಣದ ಕಾಗದ, ಬಲೂನ್, ಟೇಪು, ಬಣ್ಣಗಳಿಂದ ತರಾವೇರಿ ಸಿಂಗರಿಸಿ ಊರ ಮುಂದೆ ಎಲ್ಲರೂ ತಮ್ಮ‌‌ ತಮ್ಮ‌ ಜಾನುವಾರುಗಳೊಂದಿಗೆ ಒಂದೆಡೆ ಸೇರಿತ್ತಿದ್ದರು.

ವೈವಿಧ್ಯಮಯ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದ್ದವು ಜಾನುವಾರು. ಕೊಟ್ಟಿಗಳನ್ನೂ ಸಹ ರಂಗೋಲಿ ಹಾಕಿ ಸಿಂಗರಿಸಲಾಗುತ್ತಿತ್ತು. ಹೀಗಾಗಿ ಮನೆ ಮಂದಿ, ಜಾನುವಾರುಗಳ ಸಂಭ್ರಮದ ಹಬ್ಬವಾಗಿತ್ತು.

ವಿದೇಶಿ ಹಸುಗಳ ಮಹಿಮೆ,; ಸಂಭ್ರಮವಿಲ್ಲದ ಸಂಕ್ರಾಂತಿ

ವಿದೇಶಿ ತಳಿಯ ಸೀಮೆ ಹಸುಗಳು ಮನೆಯಲ್ಲೇ ಸಾಕಾಣೆ ಮಾಡುವುದು ಹೆಚ್ಚು‌. ಇವುಗಳನ್ನು ಕಿಚ್ಚು ಹಾಯಿಸಲು ಕರೆದೊಯ್ಯವುದು ವಿರಳ.

ಸಂಕ್ರಾಂತಿ ಮೂರ್ತಿಯನ್ನು ಪ್ರತಿವರ್ಷ ಹೊಸದಾಗಿ ಮಣ್ಣಿನಲ್ಲಿ ನಿರ್ಮಿಸಿ ಅಲಂಕರಿಸಿ, ಪೊಂಗಲ್ ನೈವೇದ್ಯ ಮಾಡಿ ಪರಸ್ಪರ ಹಂಚಿ ಸಂಭ್ರಮಿಸುತ್ತಿದ್ದರು.
ಸಂಕ್ರಾಂತಿ ಹಬ್ಬದಲ್ಲಿ ಒಂದೆಡೆಯಲ್ಲಿ ಸೇರುವ ಜಾನುವಾರು ಕಿಚ್ಚು (ಬೆಂಕಿ ದಾಟಿ) ಹಾಯ್ದು ಮನೆಗೆ ಬರಬೇಕಿತ್ತು. ( ಈ ರೀತಿ ಮಾಡುವುದರಿಂದ ಹುನ್ನಿಗಳು ಬೆಂಕಿಯ ಬಿಸಿಗೆ ನಾಶವಾಗುತ್ತವೆ ಎಂಬ ಪ್ರತೀತಿ ) ಕಿಚ್ಚು ಹಾಯುವುದರಲ್ಲೂ ಸ್ಪರ್ಧೆ, ಸಂಭ್ರಮ ಇರುತ್ತಿತ್ತು.

ಈಗ ಅದೆಲ್ಲವೂ ಮಾಯವಾಗುತ್ತಿದೆ. ಮಣಿನ ಸಂಕ್ರಾಂತಿ ಮೂರ್ತಿ ಬದಲು ಬಹುತೇಕ ಗ್ರಾಮಗಳಲ್ಲಿ ಸಿಮೆಂಟ್ ಮೂರ್ತಿ ನಿರ್ಮಾಣ ಆಗಿವೆ. ಅದೇ ರೀತಿ ಜಾನುವಾರು ಇಲ್ಲದ ಸಂಕ್ರಾಂತಿ ಆಗಿದೆ. ಸಾಂಪ್ರದಾಯಿಕ ಹಬ್ಬವಾಗಿದೆ ಅಷ್ಟೇ.

ನಗರ, ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಎಳ್ಳು ಬೀರುವುದು ಹಳ್ಳಿಯಲ್ಲೂ ಶುರುವಾಗಿದೆ. ಎಳ್ಳು, ಬೆಲ್ಲ, ಕಬ್ಬು, ಗೆಣಸು, ಕಡಲೆಕಾಯಿ ಮುನ್ನೆಲೆಗೆ ಬಂದಿವೆ. ಹೀಗೆ ಜನ-ಜಾನುವಾರುಗಳ ಸುಗ್ಗಿ ಜನರಿಗೆ ಮಾತ್ರ ಹುಗ್ಗಿ ಎಂಬಂತಾಗಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Disappearance Native CattleDisappearing Sankranti Kitchufire jumpForeign Cowskarnataka
6 FacebookTwitterPinterestEmail
KM Shivaraju

previous post
ಮಾಶಾಸನಕ್ಕಾಗಿ 5 ಕಿ.ಮೀ. ದೂರ ತೆವಳಿದ ವೃದ್ಧೆ
next post
ವಿಜಯೇಂದ್ರ ಇಲ್ಲಿಗೆ; ಯತ್ನಾಳ್‌ ದಿಲ್ಲಿಗೆ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ