Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಅಮಿತ್ ಷಾ ಅವರ ಆತಂಕ ಏನು?

by admin April 8, 2024
written by admin April 8, 2024 0 comments 4 minutes read
0FacebookTwitterPinterestEmail
384

ಬೆಂಗಳೂರು:ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಆತಂಕದಲ್ಲಿದ್ದರಂತೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ ಹದಿನಾರು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವರದಿ ಕೈ ಸೇರಿದ್ದೇ ಇದಕ್ಕೆ ಕಾರಣ.

ರಾಜ್ಯದಲ್ಲಿರುವ ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ ಹದಿನಾರರಲ್ಲಿ ಬಿಜೆಪಿ ಮೈತ್ರಿಕೂಟ ಮುಂದಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ಹನ್ನೆರಡು ಕ್ಷೇತ್ರಗಳಲ್ಲಿ ಮುಂದಿದೆ ಎಂಬುದು ಅಮಿತ್ ಷಾ ಕೈಲಿರುವ ರಿಪೋರ್ಟು.

ಹನ್ನೆರಡು ಮಂದಿಯ ಪಡೆ ಇಡೀ ರಾಜ್ಯಾದ್ಯಂತ ಸುತ್ತಿ ನೀಡಿರುವ ಈ ವರದಿ ಹಂಡ್ರೆಡ್ ಪರ್ಸೆಂಟ್ ಪಕ್ಕಾ ಎಂಬುದು ಅಮಿತ್ ಷಾ ಅವರ ನಂಬಿಕೆ.

ಹೀಗಾಗಿ ಕಳೆದ ವಾರ ಕರ್ನಾಟಕಕ್ಕೆ ಬಂದವರು, ಕ್ಯಾ ಬೋಲ್ತೇ ಹೈ ತುಮ್ಹಾರಾ ರಿಪೋರ್ಟ್ ಅಂತ ರಾಜ್ಯದ ನಾಯಕರಿಗೆ ಕೇಳಿದ್ದಾರೆ. ಆದರೆ ರಾಜ್ಯದ ನಾಯಕರು ಮಾತ್ರ, ಸಾರ್ ನಾವು ಸ್ಪರ್ಧಿಸಿದ ಇಪ್ಪತ್ತೈದು ಕ್ಷೇತ್ರಗಳ ಪೈಕಿ ಹದಿನೆಂಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆದರೆ ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ ಮತ್ತು ಗುಲ್ಬರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಈಗ ನಾವು ಗೆಲ್ಲುವ ಕ್ಷೇತ್ರಗಳ ಜತೆ ಜೆಡಿಎಸ್ ಮುಂದಿರುವ ಮಂಡ್ಯ, ಹಾಸನ, ಕೋಲಾರ ಸೇರಿದರೆ ನಮ್ಮ ಗಳಿಕೆ ಇಪ್ಪತ್ತೊಂದಕ್ಕೆ ಏರುತ್ತದೆ ಎಂದಿದ್ದಾರೆ.

ಹೀಗೆ ಅವರು ಹೇಳುವುದನ್ನೆಲ್ಲ ಕೇಳಿಸಿಕೊಂಡ ಅಮಿತ್ ಷಾ ಅವರು, ನೀವು ತೋರಿಸುತ್ತಿರುವ ವಿಶ್ವಾಸ ದೊಡ್ಡದು. ಆದರೆ ಪರಿಸ್ಥಿತಿ ಅಷ್ಟು ಸುಲಭವಾಗಿದೆ ಅನ್ನಿಸುತ್ತಿಲ್ಲ. ನಮಗಿರುವ ಮಾಹಿತಿಯ ಪ್ರಕಾರ ಬಿಜೆಪಿ ಮೈತ್ರಿಕೂಟ ಹದಿನಾರಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಕಷ್ಟ. ಆದರೆ ಪಕ್ಷದಲ್ಲಿರುವ ಒಳಜಗಳವನ್ನು ನಿವಾರಿಸಿಕೊಂಡರೆ ನಾವು ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಬಹುದು.

ಏಕೆಂದರೆ ಇವತ್ತು ಕಾಂಗ್ರೆಸ್ ಮುಂಚೂಣಿಯಲ್ಲಿರುವ ಹನ್ನೆರಡು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಅದು ಅಲ್ಪ ಅಂತರದ ಮುನ್ನಡೆ ಪಡೆದಿದೆ. ಹೀಗಾಗಿ ಮತ್ತಷ್ಟು ಬಲ ಹಾಕಿದರೆ ಮೈತ್ರಿಕೂಟ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದು ಅಂತ ಅಮಿತ್ ಷಾ ಸ್ಪಷ್ಟವಾಗಿ ಹೇಳಿದ್ದಾರೆ.

ಅವರು ನೀಡಿದ ಎಚ್ಚರಿಕೆಯ ಮಾತುಗಳನ್ನು ರಾಜ್ಯದ ಬಿಜೆಪಿ ನಾಯಕರು ಸೀರಿಯಸ್ಸಾಗಿ ರಿಸೀವ್ ಮಾಡಿಕೊಂಡಿದ್ದಾರಾದರೂ ಸ್ವತಃ ಅಮಿತ್ ಷಾ ಅವರಿಗೆ ತುಂಬ ನಂಬಿಕೆ ಬರುತ್ತಿಲ್ಲ.

ಯಾಕೆಂದರೆ ಒಗ್ಗಟ್ಟಿನ ಮಂತ್ರ ಜಪಿಸಿ ಹೋರಾಡಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಗೆದ್ದು ಪಕ್ಷ ಅಧಿಕಾರ ಹಿಡಿಯಬೇಕಿತ್ತು. ಆದರೆ ಅದೇಕೆ ಸಾಧ್ಯವಾಗಲಿಲ್ಲ, ಹೀಗಾಗಿ ಅವತ್ತು ಶುರುವಾದ ಅನೈಕ್ಯತೆ ಈ ಚುನಾವಣೆಯಲ್ಲೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋದರೂ ಅಚ್ಚರಿಯಿಲ್ಲ ಎಂಬುದು ಅವರ ಚಿಂತೆ.

ಅಂದ ಹಾಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಟಿಕೆಟ್ ಪಡೆದಿದ್ದು ಹೇಗೆ, ಅದರಲ್ಲಿ ಬಹುತೇಕರು ಗೆದ್ದಿದ್ದು ಹೇಗೆ, ಎಂಬ ಸೂಕ್ಷ್ಮವನ್ನು ಅರಗಿಸಿಕೊಳ್ಳಲು ಅಮಿತ್ ಷಾ ಅವರಿಗೆ ಅರ್ಥವಾಗುತ್ತಿಲ್ಲ.

ಇದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಳೇಟು ಕೊಡಲು ಸಜ್ಜಾಗಿರುವವರು ಯಾರು, ಅವರ ಹಿಂದಿರುವ ನಾಯಕರು ಯಾರು, ಎಂಬ ವಿವರವೂ ಅಮಿತ್ ಷಾ ಅವರ ಕೈಲಿದೆ.

ಅರ್ಥಾತ್, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸೋಲಿಗೆ ನಾವೇ ಕಾರಣ, ಈಗ ಲೋಕಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗುತ್ತಿರುವುದಕ್ಕೂ ನಾವೇ ಕಾರಣ ಎಂಬುದು ಅಮಿತ್ ಷಾ ಅವರಿಗೆ ಪಕ್ಕಾ ಆಗಿದೆ. ಹೀಗಾಗಿ ಕೊಡಬೇಕಾದ ಎಚ್ಚರಿಕೆ ಕೊಟ್ಟು ಅವರೇನೋ ದಿಲ್ಲಿಗೆ ಹಿಂತಿರುಗಿದ್ದಾರೆ. ಆದರೆ ಬಿಜೆಪಿ ಮೈತ್ರಿಕೂಟ ಕರ್ನಾಟಕದಲ್ಲಿ ಇಪ್ಪತ್ತರ ಗಡಿ ತಲುಪುತ್ತದೆ ಎಂಬ ವಿಷಯದಲ್ಲಿ ಅವರಿಗೆ ನಂಬಿಕೆ ಬರುತ್ತಿಲ್ಲ.

ಸಂಪುಟಕ್ಕೆ ’ಕೈ’ಹಾಕಲ್ಲ

ಈ ಮಧ್ಯೆ ಕರ್ನಾಟಕದ ನೆಲೆಯಿಂದ ಶುಭ ಸುದ್ದಿಗಳು ಬರುತ್ತಿದ್ದರೂ ದಿಲ್ಲಿಯ ಕಾಂಗ್ರೆಸ್ ವರಿಷ್ಟರಿಗೆ ಆತಂಕ ಶುರುವಾಗಿದೆ. ದಿಲ್ಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟ ಬಂದು ಕಳಿತರೆ ಸರಿ, ಹಾಗಾಗದೆ ಪುನಃ ನರೇಂದ್ರ ಮೋದಿ ಸರ್ಕಾರವೇ ಸೆಟ್ಲಾದರೆ ರಾಜ್ಯ ಸರ್ಕಾರ ಅಲುಗಾಡಲಿದೆ ಎಂಬುದು ಈ ನಾಯಕರಿಗಿರುವ ಮೆಸೇಜು.

ಅವರಿಗೆ ತಲುಪುತ್ತಿರುವ ಮಾಹಿತಿಯ ಪ್ರಕಾರ, ಮುಂಬೈ-ಕರ್ನಾಟಕ ಭಾಗದ ಹಿರಿಯ ಸಚಿವರೊಬ್ಬರು ನಿರಂತರವಾಗಿ ಮಹಾರಾಷ್ಟ್ರದ ಬಿಜೆಪಿ ನಾಯಕ ಫಡ್ನವೀಸ್ ಮತ್ತು ಗೋವಾದ ಪ್ರಮೋದ್ ಸಾವಂತ್ ಅವರ ಸಂಪರ್ಕದಲ್ಲಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್‌ನಲ್ಲಿರುವ ಹಲವು ಅತೃಪ್ತ ಶಾಸಕರು ಈ ನಾಯಕರ ಸಂಪರ್ಕದಲ್ಲಿರುವಂತೆ ಮಾಡಿದ್ದಾರೆ.

ದಿಲ್ಲಿಯ ಕಾಂಗ್ರೆಸ್ ನಾಯಕರ ಪ್ರಕಾರ, ಕರ್ನಾಟಕ ಸರ್ಕಾರವನ್ನು ಅಲುಗಾಡಿಸುವ ಆಟ ಜುಲೈ ಹೊತ್ತಿಗೆ ವೇಗ ಪಡೆಯಬಹುದು. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಬರಲಿ, ಆದರೆ ಮಂತ್ರಿಮಂಡಲ ಪುನರ್ ರಚನೆಗೆ ಕೈ ಹಾಕುವುದು ಬೇಡ ಎಂಬುದು ಅವರ ಯೋಚನೆ.

ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಮಂತ್ರಿಗಳು ಸೂಚಿಸಿದವರಿಗೆ ಟಿಕೆಟ್ ಕೊಡುವುದು, ಚುನಾವಣೆಯಲ್ಲಿ ಈ ಕ್ಯಾಂಡಿಡೇಟುಗಳು ಸೋತರೆ ಸಂಬಂಧ ಪಟ್ಟ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡುವುದಾಗಿ ಹೆದರಿಸಿದ್ದೇನೋ ಸರಿ. ಆದರೆ ಈ ತಂತ್ರಕ್ಕೆ ಹಾಕಿದರೆ ಮಂತ್ರಿಗಿರಿ ಕಳೆದುಕೊಂಡವರು ಬಿಜೆಪಿ ಕಡೆ ಹೋಗಬಹುದು. ಹೀಗಾಗಿ ಚುನಾವಣೆಯ ಫಲಿತಾಂಶ ಬಂದ ನಂತರ ನಾಲ್ಕೈದು ತಿಂಗಳ ಮಟ್ಟಿಗಾದರೂ ಪುನರ್ರಚನೆಯ ಗೋಜಿಗೆ ಹೋಗದಿರುವುದೇ ಒಳ್ಳೆಯದು ಎಂಬುದು ವರಿಷ್ಟರ ಯೋಚನೆ.

ಈಶ್ವರಪ್ಪ ’ಅಮಿತ’ ಟೆಕ್ನಿಕ್

ಇನ್ನು ಬಂಡಾಯವೆದ್ದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮನ ಒಲಿಸುವ ಕೊನೆಯ ಯತ್ನವೂ ವಿಫಲಗೊಂಡಿದೆ.

ಎಷ್ಟೇ ಆದರೂ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ತ್ರಿಮೂರ್ತಿಗಳಲ್ಲಿ ಈಶ್ವರಪ್ಪ ಒಬ್ಬರು. ಈ ಸಂದರ್ಭದಲ್ಲಿ ಅವರು ಪಕ್ಷದಿಂದ ಹೊರ ಹೋಗುವುದು ಸರಿಯಲ್ಲ ಅಂತ ಯಡಿಯೂರಪ್ಪ ಬಳಗದ ನಾಯಕರೊಬ್ಬರು ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದಾರೆ. ಸಾರ್, ನಿಮ್ಮ ಜತೆ ಮಾತನಾಡಬೇಕು, ಭೇಟಿಗೆ ಅವಕಾಶ ಕೊಡಿ ಎಂದಿದ್ದಾರೆ.

ಆಗೆಲ್ಲ ವಿಶ್ವಾಸದಿಂದಲೇ ಮಾತನಾಡಿಸಿದ ಈಶ್ವರಪ್ಪ ಅವರು, ನಾಳೆ ಶಿವಮೊಗ್ಗದ ಹರ್ಷ ಹೋಟೆಲ್ಲಿಗೆ ಬನ್ನಿ ಮಾತನಾಡೋಣ ಎಂದಿದ್ದಾರೆ.

ಹಾಗಂತಲೇ ಮೊನ್ನೆ ಶನಿವಾರ ಈ ನಾಯಕರು ಹರ್ಷ ಹೋಟೆಲ್ಲಿಗೆ ಹೋದರೆ ಈಶ್ವರಪ್ಪ ಬೆಂಬಲಿಗರ ಜತೆ ಸಭೆ ನಡೆಸುತ್ತಿರುವುದು ಗೊತ್ತಾಗಿದೆ. ಹಾಗಂತಲೇ ಅಲ್ಲಿದ್ದ ಅವರ ಆಪ್ತರ ಮೂಲಕ ಹೇಳಿ ಕಳಿಸಿದರೆ, ಈಗ ಮಾತನಾಡುವುದೇನಿಲ್ಲ, ಭೇಟಿ ಮಾಡುವುದು ಬೇಕಿಲ್ಲ ಅಂತ ಈಶ್ವರಪ್ಪ ಹೇಳಿ ಕಳಿಸಿದ್ದಾರೆ.

ಹೀಗೆ ಸಭೆಯ ಒಳ ಹೋಗಿ ಸಂದೇಶ ತಂದವರು, ಈಶ್ವರಪ್ಪ ಸಾಹೇಬರು ಶಿವಮೊಗ್ಗದಲ್ಲಿ ಗೆದ್ದು ಮೋದಿಯವರ ಕೈಲಿ ಹಾರ ಹಾಕಿಸ್ಕೊಂಡು ಬಿಜೆಪಿಗೇ ವಾಪಸ್ಸು ಬರ್ತಾರೆ ಎಂದರಂತೆ.

ಯಾವಾಗ ಈಶ್ವರಪ್ಪ ಈ ಮೆಸೇಜು ಕೊಟ್ಟರೋ, ಅಲ್ಲಿಗೆ ಅವರ ಮನ ಒಲಿಕೆಯ ಕೊನೇ ಪ್ರಯತ್ನವೂ ವಿಫಲವಾಗಿದೆ.

ಅಂದ ಹಾಗೆ ಕೆಲ ದಿನಗಳ ಮುನ್ನ ಈಶ್ವರಪ್ಪ ಅವರನ್ನು ದಿಲ್ಲಿಗೆ ಕರೆಸಿದ್ದ ಅಮಿತ್ ಷಾ ಅವರು, ನಿಮ್ಮ ಬಳಿ ಮಾತನಾಡುವುದೇನಿಲ್ಲ ಅಂತ ಭೇಟಿಗೂ ಅವಕಾಶ ನೀಡದೆ ವಾಪಸ್ ಕಳಿಸಿದ್ದರು. ಈಗ ಈಶ್ವರಪ್ಪ ಅವರು ಯಡಿಯೂರಪ್ಪ ಆಪ್ತರಿಗೆ ಇದೇ ಬಗೆಯ ಉತ್ತರ ನೀಡಿ ವಾಪಸ್ ಕಳಿಸಿದ್ದಾರೆ. ಸಂಧಾನದ ಬಾಗಿಲನ್ನು ವಿದ್ಯುಕ್ತವಾಗಿ ಮುಚ್ಚಿದ್ದಾರೆ.

ಘಟಿಸಲಿದೆ ’ಕಲ್ಯಾಣ’ ಕ್ರಾಂತಿ?

ಈ ಮಧ್ಯೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಲ್ಯಾಣ ಕ್ರಾಂತಿ ಘಟಿಸುವ ಲಕ್ಷಣಗಳು ಕಾಣುತ್ತಿವೆ.ಕಾರಣ, ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ತಮಗೆ ನೀಡಿದ ಟಿಕೆಟ್‌ನ್ನು ಎಂಟು ಕೋಟಿ ರೂಪಾಯಿಗೆ ಮಾರಿಕೊಳ್ಳಲು ಒಬ್ಬ ಅಭ್ಯರ್ಥಿ ಪ್ರಯತ್ನಿಸಿದ್ದಾರೆ ಎಂಬ ಮಾಹಿತಿ.

ಮೂಲಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದ ನಾಯಕರೊಬ್ಬರಿಗೆ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಮುಂದುವರಿದರೆ ತಾವು ಕಣಕ್ಕಿಳಿಯುವುದು ಕಷ್ಟವಾಗಬಹುದು ಎಂಬುದು ಅವರ ಆತಂಕ.

ಹೀಗಾಗಿ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗುವ ಮುನ್ನವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಹೊರಟಿರುವ ಆ ಅಭ್ಯರ್ಥಿ, ಪಕ್ಷದ ಟಿಕೆಟ್ ಪಡೆಯಲು ತಮ್ಮಂತೆಯೇ ಪ್ರಯತ್ನ ನಡೆಸಿದ್ದ ನಾಯಕರ ಬಳಿ ಡೀಲು ಕುದುರಿಸಲು ಮುಂದಾಗಿದ್ದಾರೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ನಿಮಗೇ ಟಿಕೆಟ್ ಕೊಡಿಸಲು ರೆಡಿ, ಇದಕ್ಕೆ ಪ್ರತಿಯಾಗಿ ನೀವು ನನಗೆ ಎಂಟು ಕೋಟಿ ರೂಪಾಯಿ ಕೊಡಬೇಕು ಅಂತ ಹೇಳಿದ್ದಾರೆ.

ಇವರ ಮಾತು ಕೇಳಿದ ಆ ಆಕಾಂಕ್ಷಿ, ಅಷ್ಟು ರೊಕ್ಕ ಎಲ್ಲೈತಣ್ಣ, ಬೇಕಿದ್ದರೆ ನಾಲ್ಕು ಕೋಟಿ ಕೊಡುತ್ತೇನೆ ಎಂದಿದ್ದಾರೆ.

ಹೀಗೆ ಇಬ್ಬರು ಸ್ಥಳೀಯ ನಾಯಕರ ಮಧ್ಯೆ ನಡೆದ ಟಿಕೆಟ್ ಡೀಲಿನ ಮಾತುಕತೆ ಈಗ ಆಡಿಯೋ ಬಾಂಬ್ ಆಗಿ ರೆಡಿಯಾಗಿದೆ.

ಒಂದು ವೇಳೆ ಈ ಬಾಂಬು ಸಿಡಿದರೆ ಕೇವಲ ರಾಯಚೂರು ಮಾತ್ರವಲ್ಲ, ಇಡೀ ರಾಜ್ಯವನ್ನು ಅಚ್ಚರಿಗೆ ದೂಡಲಿದೆ.

ಪ್ರಜ್ವಲ್‌ಗೆ ಬಿಜೆಪಿ ಕಿರಿಕಿರಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಟಕ್ಕರ್ ಕೊಡಲು ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್ ನಾಯಕರಿಗೆ ಹಾಸನ ಕ್ಷೇತ್ರ ಟಫ್ ಆಗುವ ಲಕ್ಷಣಗಳು ಕಾಣುತ್ತಿವೆ.

ಕಾರಣ, ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ಕೊಡುವ ವಿಷಯದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಉತ್ಸಾಹ ತೋರಿಸುತ್ತಿಲ್ಲ.

ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಸಕಲೇಶಪುರದ ಸಿಮೆಂಟ್ ಮಂಜು, ಅರಕಲಗೂಡಿನ ಯೋಗಾ ರಮೇಶ್ ಅವರಂತಹ ನಾಯಕರು ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಆಸಕ್ತಿ ತೋರುತ್ತಿಲ್ಲ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಇತರ ಕ್ಷೇತ್ರಗಳ ಅಸಮಾಧಾನಿತರನ್ನು ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಅಸಮಾಧಾನಿತರನ್ನೂ ಯಡಿಯೂರಪ್ಪ ಸಮಾಧಾನಿಸಿದ್ದಾರೆ.

ಇದೇ ರೀತಿ ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸೇರಿದಂತೆ ಹಲ ನಾಯಕರು ಬಂದು ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆ.

ಆದರೆ ಇದೇನೇ ಮಾಡಿದರೂ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಪ್ರಜ್ವಲ್ ರೇವಣ್ಣ ಪರ ಹೋರಾಡುವ ಉಮೇದು ಕಾಣುತ್ತಿಲ್ಲ.

ಬಿಜೆಪಿ ಪಾಳಯದ ನಿರುತ್ಸಾಹ ಹೀಗೆ ಕಣ್ಣಿಗೆ ಕಾಣುತ್ತಿದ್ದರೆ ಕಾಂಗ್ರೆಸ್ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಸುತ್ತಿದೆ. ಈ ಸಲ ಪಕ್ಷದ ಕ್ಯಾಂಡಿಡೇಟು ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬಹುದು ಎಂಬ ಮಾತು ಆವರಿಸುತ್ತಿದೆ.

ಪರಿಣಾಮ, ಜೆಡಿಎಸ್-ಬಿಜೆಪಿ ಮೈತ್ರಿ ಶುರುವಾದಾಗ ಪ್ರಜ್ವಲ್ ರೇವಣ್ಣ ಗೆಲ್ಲುವುದು ಸುಲಭ ಅಂದುಕೊಂಡವರಿಗೆ ಫಲಿತಾಂಶ ಉಲ್ಟಾ ಅಗಬಹುದು ಎಂಬ ಶಂಕೆ ಕಾಡುತ್ತಿದೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Amit Shahbjp - jdscabinetcongresks eshwarappaprajval revanna
0 FacebookTwitterPinterestEmail
admin

previous post
ದಿನ ಭವಿಷ್ಯ : ಸೋಮವಾರ, 08 ಏಪ್ರಿಲ್ 2024
next post
5, 8, 9, 11ನೇ ತರಗತಿ: ಫಲಿತಾಂಶ ಪ್ರಕಟಣೆಗೆ ತಡೆ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ