ಭಕ್ತರ ಸುರಕ್ಷತೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ
ಬೆಂಗಳೂರು: ದೀಪಾವಳಿ ಹಬ್ಬದ ಜಾತ್ರಾ ಪುಯುಕ್ತ ಆಗಮಿಸುವ ಭಕ್ತರ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಮಾದರಿಯ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಗಳನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ನಿಷೇಧಿಸಲಾಗಿದೆ.
ನವೆಂಬರ್ 11 ರಿಂದ ನ.14 ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಲಿರುವ ದೀಪಾವಳಿ ಜಾತ್ರೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಬೆಟ್ಟಕ್ಕೆ ಆಗಮಿಸುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮಾದರಿಯ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ ವಾಹನಗಳನ್ನು ನ. 11ರ ಸಂಜೆ 6 ಗಂಟೆಯಿಂದ ನ.14ರ ಸಂಜೆ 7 ಗಂಟೆಯವರೆಗೆ ತಾತ್ಕಾಲಿವಾಗಿ ನಿರ್ಬಂಧಿಸಿರುವ ಚಾಮರಾಜ ನಗರ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿದ್ದಾರೆ.

ನ. 11ರ ಸಂಜೆ 6 ಗಂಟೆಯಿಂದ ನ.14ರ ಸಂಜೆ 7 ಗಂಟೆಯವರೆಗೆ
ದ್ವಿಚಕ್ರ, ಆಟೋರಿಕ್ಷಾ ವಾಹನಗಳ ನಿಲುಗಡೆಗಾಗಿ ಹನೂರು ತಾಲೂಕು ಕೌದಳ್ಳಿ ಗ್ರಾಮದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ವಾಹನ ಸವಾರರು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಲು ನಿಗದಿತ ದರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಸಹಕರಿಸಬೇಕಾಗಿ ಚಾಮರಾನಗರ ಜಿಲ್ಲಾ ಪೊಲೀಸ್ ವತಿಯಿಂದ ಕೋರಲಾಗಿದೆ.


