Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜ್ಯರಾಷ್ಟ್ರ

ಕರ್ನಾಟಕಕ್ಕೆ ಮತ್ತೊಂದು ಶಾಕ್

by admin November 23, 2023
written by admin November 23, 2023 0 comments 2 minutes read
1FacebookTwitterPinterestEmail
319

ಡಿ. 31ರವರೆಗೆ ನಿತ್ಯ 3216 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ

ಬೆಂಗಳೂರು: ನೈರುತ್ಯ ಮುಂಗಾರು ಹಾಗೂ ಈಶಾನ್ಯ ಹಿಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಆವರಿಸಿರುವುದರ ನಡುವೆಯು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಆರ್ ಸಿ)ಯು ತಮಿಳನಾಡಿಗೆ ನೀರು ಬಿಡುವಂತೆ ನಿರ್ದೇಶನ ನೀಡುವ ಮೂಲಕ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ.

ಈ ವರ್ಷ ನಡೆದ ಪ್ರತಿ ಸಭೆಯಲ್ಲೂ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ಮಾಡುತ್ತಾ ಬಂದಿರುವ ಸಿಡಬ್ಲ್ಯುಆರ್ ಸಿಯು ಇಂದು ನಡೆದ ಸಭೆಯಲ್ಲೂ ಅದನ್ನೇ ಮಾಡಿದೆ.

ಕಾವೇರಿ ನದಿಯಿಂದ ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರೆಗೆ  ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ  ಸೂಚನೆ ನೀಡಿದೆ.

ಕರ್ನಾಟಕದ ಜಲಾಶಯಗಳಿಂದ ನೀರು  ಬಿಡುಗಡೆ ಸಾಧ್ಯವಿಲ್ಲ

ಇಂದು ನಡೆದ ಸಿಡಬ್ಲ್ಯುಆರ್ ಸಿ ಯ 90ನೇ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಈಗ ಮಳೆಯಾಗುತ್ತಿಲ್ಲ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿರುವುದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ.

ಕಾವೇರಿ ನದಿಪಾತ್ರದ ನಾಲ್ಕು ಜಲಾಶಯಗಳಿಗೆ ಒಳಹರಿವು ಬಹತೇಕ ಸ್ಥಗಿತವಾಗಿದ್ದು, ಸಂಗ್ರಹವಾಗಿರುವ ನೀರು ಸಹ ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರು, ಬೆಳೆಗಳಿಗೆ  ಸಾಲುವುದಿಲ್ಲ. ಇಂತಹ  ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು  ಹರಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂಬ ಕರ್ನಾಟಕದ ವಾದವನ್ನು ಸಿಡಬ್ಲ್ಯುಆರ್ ಸಿ ಪರಿಗಣಿಸಿಲ್ಲ.

ಕರ್ನಾಟಕವು ಸಿಡಬ್ಲ್ಯುಆರ್ ಸಿ ಮುಂದೆ  ರಾಜ್ಯದ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಅಂದರೆ, ನವೆಂಬರ್ 22  ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ. 52.24ರಷ್ಟಿದೆ.

38 ದಿನಗಳವರೆಗೆ ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸಲು ಸಿಡಬ್ಲ್ಯುಆರ್ ಸಿ ಶಿಫಾರಸು

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್  ಒಂದರಿಂದ ತಮಿಳುನಾಡಿನಲ್ಲಿ ಮಳೆಯು ಸಾಮಾನ್ಯವಾಗಿದೆ. ಆದ್ದರಿಂದ ಈಶಾನ್ಯ ಹಿಂಗಾರು ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತು ಮೆಟ್ಟೂರು ಜಲಾಶಯದ ಕೆಳಗಿನ ಪ್ರದೇಶಗಳಲ್ಲಿ ತೃಪ್ತಿಕರ ಮಳೆಯ ಪರಿಸ್ಥಿತಿ ಲಭ್ಯವಿರುತ್ತದೆ ಎಂಬ ಸೂಚನೆಗಳಿವೆ.

ತಮಿಳುನಾಡಿನ ಕುರುವಾಯಿ ಬೆಳೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಟಾವಿಗೆ ಬಂದಿತ್ತು. ಈ ಬೆಳೆಗೆ ನೀರಿನ ಅವಶ್ಯಕತೆ ಇರುವುದಿಲ್ಲ. ಸಾಂಬಾ ಬೆಳೆ  ಕೂಡ ಕೊಯ್ಲು ಹಂತವನ್ನು ತಲುಪಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕೊನೆಗೊಳ್ಳಲಿದೆ  ಎಂದು ಹೇಳಿದೆ.

ಕರ್ನಾಟಕದ 4 ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಅಂದರೆ ನವೆಂಬರ್ 21ರಲ್ಲಿನ ಮಾಹಿತಿ ಪ್ರಕಾರ ಕರ್ನಾಟಕದ 4 ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹವು ನೀರಾವರಿ, ಕುಡಿಯುವ ಮತ್ತು ಇತರ ಅಗತ್ಯಗಳ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ತಿಳಿಸಿದೆ.

ಜಲಾನಯನ ಪ್ರದೇಶದಿಂದ  ಸ್ವಾಭಾವಿಕವಾಗಿ ಅನಿಯಮಿತವಾಗಿ ಲಭ್ಯವಾಗುವ ನೀರನ್ನು ಹೊರತುಪಡಿಸಿ ಬಿಳಿಗುಂಡ್ಲು ಜಲ ಮಾಪನ ಕೇಂದ್ರ ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ,  ಕರ್ನಾಟಕದ ಜಲಾಶಯದಿಂದ ಯಾವುದೇ  ಪ್ರಮಾಣದ ನೀರು ಬಿಡುಗಡೆಗೆ ನಿರ್ದೆಶನವನ್ನು ನೀಡದಂತೆ ಸಮಿತಿಯನ್ನು ಕೋರಿದೆ.

30 ದಿನಗಳ ಕಾಲ ಕರ್ನಾಟಕವು 5000 ಕ್ಯೂಸೆಕ್ ನೀರು ಬಿಡಬೇಕು

ಆದರೆ, ನೆರೆಯ ತಮಿಳುನಾಡು ಮುಂದಿನ 30 ದಿನಗಳ ಕಾಲ ಕರ್ನಾಟಕವು 5000 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿದೆ.

ಎರಡು ರಾಜ್ಯಗಳ ಮನವಿಯನ್ನು ಆಲಿಸಿದ ಸಿಡಬ್ಲ್ಯುಆರ್ ಸಿ ಅಂತಿಮವಾಗಿ, ನವೆಂಬರ್ ತಿಂಗಳ ಉಳಿದ ಅವಧಿಗೆ ಹಾಗೂ ಡಿಸೆಂಬರ್ ತಿಂಗಳ ಪೂರ್ಣ ಅವಧಿಗೆ ಕರ್ನಾಟಕವು, ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಸಿಡಬ್ಲ್ಯುಡಿಟಿ ಯ ಆದೇಶದ ಪ್ರಕಾರ ನಿಗದಿತ ಪ್ರಮಾಣದ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು ಹೇಳಿದೆ. ಅಂದರೆ ನವೆಂಬರ್ 24 ರಿಂದ  ಡಿಸೆಂಬರ್ 31ರವರೆಗೆ (38 ದಿನಗಳು) ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸಲು  ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Cauverycwrckarnatakakmskmskannadarecommendations’tamilnadwater release
1 FacebookTwitterPinterestEmail
admin

previous post
ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ
next post
ಬೆಂಗಳೂರಿನ ಚಿರತೆ ಪಡೆ 2 ದಿನಗಳಲ್ಲಿ ಕಾರ್ಯಾರಂಭ

You may also like

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

May 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ