ಪಂಚಾಂಗ
ಶುಕ್ರವಾರ, 02 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ಸಪ್ತಮಿ
ನಕ್ಷತ್ರ : ಸ್ವಾತಿ
ಯೋಗ : ಶೂಲ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 21
ರಾಹುಕಾಲ : 11: 06- 12: 33
ಯಮಗಂಡ ಕಾಲ : 03 : 27 – 04 : 54
ಗುಳಿಕಕಾಲ : 08 : 13 – 09 : 40
ರಾಶಿ ಫಲ
ಮೇಷ : ದಿನದ ಆರಂಭ ಉತ್ತಮವಾಗಿರಲಿದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಸಾತ್ವಿಕ ಆಹಾರವನ್ನು ಸೇವಿಸಿದರೆ ಒಳ್ಳೆಯದು.
ವೃಷಭ : ತಂದೆಯೊಂದಿಗೆ ಮನಸ್ತಾಪ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ನಾಯಕತ್ವದ ಗುಣ ಈ ದಿನ ನಿಮ್ಮಲ್ಲಿ ಕಾಣಿಸುವುದು.
ಮಿಥುನ : ತಲೆ ನೋವು ಕಂಡುಬರಬಹುದು. ಕೌಟುಂಬಿಕ ಕಲಹ, ಶತ್ರುಗಳ ನಿಗ್ರಹವಾಗುತ್ತದೆ.
ಕಟಕ : ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ದೂರ ಪ್ರಯಾಣ ಸಂಭವ. ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ.
ಸಿಂಹ : ಪ್ರೇಮಿಗಳಿಗೆ ಉಡುಗೊರೆ ದೊರೆಯಬಹುದು. ಹಳೆಯ ಸಮಸ್ಯೆಗಳು ಮತ್ತೆ ಮರುಕಳುಹಿಸಬಹುದು. ಆರ್ಥಿಕ ಪ್ರಗತಿ ಕಂಡುಬರುತ್ತದೆ.
ಕನ್ಯಾ : ಪ್ರವಾಸ ಹೊರಡಲು ಯೋಜನೆ ರೂಪಿಸುತ್ತೀರಿ. ಮನೆಗೆ ಅತಿಥಿಗಳ ಆಗಮನವಾಗಬಹುದು. ಸ್ನೇಹಿತರಿಂದ ಲಾಭವಾಗುತ್ತದೆ.
ತುಲಾ : ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹೊಸ ಉದ್ಯೋಗ ಪ್ರಾರಂಭಕ್ಕೆ ಶುಭದಿನ. ಶತ್ರುಗಳ ಬಗ್ಗೆ ಹೆಚ್ಚರವಿರಲಿ.
ವೃಶ್ಚಿಕ : ಪ್ರೇಮಿಗಳಿಗೆ ಸಮಸ್ಯೆಗಳು ಎದುರಾಗಬಹುದು. ಅತಿಯಾದ ಕೋಪ ಒಳ್ಳೆಯದಲ್ಲ. ಸ್ನೇಹಿತರನ್ನು ಅನುಮಾನಿಸಬೇಡಿ.
ಧನಸ್ಸು : ಅನ್ಯರ ಕೆಲಸಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ. ರಿಯಲ್ ಎಸ್ಟೇಟ್ ನಿಂದ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಮಕರ : ಸಕಾರಾತ್ಮಕ ಆಲೋಚನೆಯು ನಿಮ್ಮನ್ನು ಗಟ್ಟಿಗೊಳಿಸುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಮಕ್ಕಳ ಬಗ್ಗೆ ಕಾಳಜಿ ಇರಲಿ.
ಕುಂಭ : ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ನಿಮ್ಮ ಮೇಲಾಧಿಕಾರಿಗೆ ತಿಳಿಸುವಿರಿ.
ಮೀನ : ನಿಮ್ಮ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಿತಶತ್ರುಗಳ ಬಾಧೆ ಕಾಡಬಹುದು.


