ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 08 – 12 : 56
ಭಾನುವಾರ, 3 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಸಪ್ತಮಿ/ ಅಷ್ಟಮಿ
ನಕ್ಷತ್ರ : ಅನುರಾಧ
ಯೋಗ : ಹರ್ಷಣ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 34
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 04: 59 – 06: 29
ಯಮಗಂಡ ಕಾಲ : 12 : 32 – 02: 01
ಗುಳಿಕಕಾಲ : 03 : 30 – 04: 59
ರಾಶಿ ಫಲ
ಮೇಷ : ಒಂಟಿತನ ಅನುಭವಿಸಲಿದ್ದೀರಿ. ಉದ್ಯೋಗದಲ್ಲಿ ಅಡೆತಡೆ. ಉದಾಸೀನ ಮನೋಭಾವದಿಂದ ಕೂಡಿರುತ್ತೀರಿ.
ವೃಷಭ : ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಹೊರಗಿನ ಆಹಾರ ಸೇವಿಸದಿರಿ. ಅನಾರೋಗ್ಯದ ಸಮಸ್ಯೆ ಕಾಡಬಹುದು.
ಮಿಥುನ : ಸಂಗಾತಿಯ ಸಲಹೆಯಿಂದ ಪ್ರಯೋಜನ ಪಡೆಯುತ್ತೀರಿ. ಸ್ವಂತ ತಪ್ಪಿನ ಬಗ್ಗೆ ಅರಿವಿರಲಿ. ಉದ್ಯೋಗದಲ್ಲಿ ಬಡ್ತಿ ಪಡೆಯುವ ನಿರೀಕ್ಷೆಯಲ್ಲಿರುತ್ತೀರಿ.
ಕಟಕ : ಅನ್ಯರಿಗೆ ಸಲಹೆ ನೀಡದಿರಿ. ಹಾಳಾಗಿದ್ದ ಸಂಬಂಧಗಳು ಸರಿ ಹೋಗಲಿವೆ. ಪ್ರೇಮಿಗಳಿಗೆ ಉತ್ತಮ ದಿನ.
ಸಿಂಹ : ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವ್ಯಾಪಾರದಲ್ಲಿ ಪ್ರಗತಿ ಕುಂಠಿತ. ಪಿತ್ರಾರ್ಜಿತ ಆಸ್ತಿ ದೊರೆಯಲಿದೆ.
ಕನ್ಯಾ : ಒಳ್ಳೆಯ ಸುದ್ದಿಗಳು ಕೇಳಿಬರಲಿವೆ. ನಿಮ್ಮವರಿಗೆ ಉಡುಗೊರೆಯನ್ನು ನೀಡುತ್ತೀರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ.
ತುಲಾ : ನವದಂಪತಿಗಳಿಗೆ ಉತ್ತಮ ದಿನ. ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.
ವೃಶ್ಚಿಕ : ಕುಟುಂಬದಲ್ಲಿ ಸಂತೋಷಕರ ವಾತಾವರಣವಿರಲಿದೆ. ಪ್ರೇಮಿಗಳು ವಿವಾಹವಾಗುವ ಸಂಭವವುಂಟು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಧನಸ್ಸು : ಕೋಪದ ಮೇಲೆ ನಿಯಂತ್ರಣವಿರಲಿ. ತಲೆನೋವಿನ ಸಮಸ್ಯೆ ಕಾಡಬಹುದು. ಹೊಸ ಸ್ನೇಹಿತರ ಭೇಟಿ ಸಾಧ್ಯತೆ.
ಮಕರ : ಮಕ್ಕಳ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೀರಿ. ಐಷಾರಾಮಿ ವಸ್ತುಗಳಿಗಾಗಿ ಹಣ ವ್ಯಯ ಮಾಡುವಿರಿ. ಹಳೆಯ ಹೂಡಿಕೆಯಿಂದ ಲಾಭ ಗಳಿಸುವಿರಿ.
ಕುಂಭ : ಸಮಯಕ್ಕೆ ಸರಿಯಾಗಿ ಕಾರ್ಯ ಪೂರ್ಣಗೊಳಿಸುತ್ತೀರಿ. ಕುಟುಂಬದವರೊಂದಿಗೆ ಪೂರ್ಣ ಸಮಯ ಕಳೆಯುತ್ತೀರಿ. ಮನೋರಂಜನೆ ಕಡೆ ಆಸಕ್ತಿ ತೋರುವಿರಿ.


