ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 58 – 12 : 47
ಅಮೃತ ಘಳಿಗೆ : ಬೆಳಿಗ್ಗೆ 08 : 37 – 10 : 04
ಶುಕ್ರವಾರ, 05 ಏಪ್ರಿಲ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ : ಏಕಾದಶಿ
ನಕ್ಷತ್ರ : ಧನಿಷ್ಠ
ಯೋಗ : ಸಾಧ್ಯ
ಕರಣ : ಬಾಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 13
ಸೂರ್ಯಾಸ್ತ : ಸಂಜೆ 06 : 31
ರಾಹುಕಾಲ : 10 : 50 – 12 : 22
ಯಮಗಂಡ ಕಾಲ : 03 : 27 – 04 : 59
ಗುಳಿಕಕಾಲ : 07 : 45 – 09 : 18
ರಾಶಿ ಫಲ
ಮೇಷ : ಹೊಸ ಉದ್ಯೋಗ ದೊರೆಯಲಿದೆ. ಪ್ರೇಮಿಯೊಂದಿಗೆ ದೂರ ಪ್ರಯಾಣ ಹೊರಡುವ ಸಾಧ್ಯತೆ. ಕಲಾವಿದರಿಗೆ ಉತ್ತಮ ದಿನ.
ವೃಷಭ : ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಸಾಲ ಹಿಂದಿರುಗಿಸಲಿದ್ದೀರಿ. ಪ್ರತಿಕ್ರಿಯಿಸುವ ಮುನ್ನ ಎಚ್ಚರಿಕೆ ಇರಲಿ.
ಮಿಥುನ : ಕಾನೂನಿನ ವಿಷಯಗಳಲ್ಲಿಎಚ್ಚರವಾಗಿ ವರ್ತಿಸಿ. ಬಜೆಟ್ ವಿಚಾರದ ಬಗ್ಗೆ ಗಮನವಿರಲಿ. ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯ ಬೇಡ.
ಕಟಕ : ಸಂಗಾತಿಯೊಂದಿಗೆ ಗೌಪ್ಯತೆ ಸಲ್ಲದು. ಸ್ನೇಹಿತರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಮೊಣಕಾಲಿನ ನೋವು ಕಂಡುಬರುವ ಸಾಧ್ಯತೆಯುಂಟು.
ಸಿಂಹ : ಆಸೆಗಳು ಈಡೇರಲಿವೆ. ಮಾನಸಿಕ ಒತ್ತಡ ದೂರವಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು.
ಕನ್ಯಾ : ಕೆಲಸದಲ್ಲಿ ಒತ್ತಡ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಸಾಲ ಮಾಡುವುದರಿಂದ ದೂರವಿರಿ.
ತುಲಾ : ವಿದ್ಯಾರ್ಥಿಗಳಿಗೆ ಒತ್ತಡದ ದಿನ. ಮಕ್ಕಳ ನಡವಳಿಕೆಯ ಬಗ್ಗೆ ಎಚ್ಚರಿಕೆ ಇರಲಿ. ಅನಿರೀಕ್ಷಿತ ಖರ್ಚುಗಳನ್ನು ತಪ್ಪಿಸಿ.
ವೃಶ್ಚಿಕ : ರಿಯಲ್ ಎಸ್ಟೇಟ್ ಉದ್ಯಮಿಗಳು ನಷ್ಟ ಅನುಭವಿಸಲಿದ್ದಾರೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ.
ಧನಸ್ಸು : ಜೀವನ ಶೈಲಿಯಲ್ಲಿ ಹೊಸತನವಿರಲಿದೆ. ಸರ್ಕಾರಿ ಕೆಲಸ ಮಾಡುವವರು ಹೆಚ್ಚು ಕಷ್ಟಪಡಬೇಕಾಗುತ್ತದೆ. ಪ್ರವಾಸ ಹೊರಡುವ ಸಾಧ್ಯತೆ ಇದೆ.
ಮಕರ : ಸುಳ್ಳು ಹೇಳುವುದನ್ನು ತಪ್ಪಿಸಿ. ಕುಟುಂಬದವರ ಆರೋಗ್ಯದ ಬಗ್ಗೆ ಗಮನಹರಿಸಿ. ಸ್ವಾರ್ಥಿ ಜನರಿಂದ ತೊಂದರೆ ಅನುಭವಿಸಲಿದ್ದೀರಿ.
ಕುಂಭ : ಆನ್ ಲೈನ್ ಶಾಫಿಂಗ್ ಮಾಡಲಿದ್ದೀರಿ. ಸಂಬಂಧಿಕರಿಗೆ ಸಾಲ ನೀಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಸಭ್ಯತೆಯಿಂದ ವರ್ತಿಸುವಿರಿ.
ಮೀನ : ಸಂಗಾತಿಯೊಂದಿಗಿನ ಜಗಳವನ್ನು ತಪ್ಪಿಸಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಶಾಂತಿಯಿಂದ ವರ್ತಿಸಿ.


