Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಕರ್ನಾಟಕದ ಬಗ್ಗೆ ಅಮಿತ್ ಷಾ ದ್ವೇಷದ ರಾಜಕಾರಣ

by admin November 19, 2024
written by admin November 19, 2024 0 comments 2 minutes read
0FacebookTwitterPinterestEmail
396

ಸಹಕಾರಿ ಸಚಿವರಾದ ನಂತರ ನಬಾರ್ಡ್ ಸಾಲ ಪ್ರಮಾಣ ಇಳಿಕೆ

ಬೆಂಗಳೂರು:ಅಮಿತ್ ಷಾ ಕೇಂದ್ರ ಸಹಕಾರಿ ಸಚಿವರಾದ ನಂತರ ಕರ್ನಾಟಕಕ್ಕೆ ನೀಡುವ ನಬಾರ್ಡ್ ಸಾಲ ಪ್ರಮಾಣ ಇಳಿಕೆಯಾಗುತ್ತಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಚಲುವರಾಯಸ್ವಾಮಿ ಹಾಗೂ ಕೆ.ರಾಜಣ್ಣ, ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 9,000 ಕೋಟಿ ರೂ. ನೀಡುವಂತೆ ಕೇಳಿದರೆ, 2,340 ಕೋಟಿ ರೂ. ಮಾತ್ರ ಮಂಜೂರು ಮಾಡಲಾಗಿದೆ, ಯಾವುದೇ ಸೂಚನೆ ಇಲ್ಲದೇ ಕೃಷಿ ಸಾಲ ಮಿತಿ ಗಣನೀಯವಾಗಿ ಕಡಿಮೆಯಾಗಿದೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಪತ್ರ ಬರೆಯಲಾಗಿದೆ, ರಾಜ್ಯಕ್ಕೆ ನ್ಯಾಯ ಕೊಡಿಸಲು ಕೇಂದ್ರ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಸಹಾಯಕ್ಕೆ ಬರಬೇಕು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಿರಿಯರಾಗಿದ್ದು, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು.

ರೈತರಿಗೆ ನ್ಯಾಯ ಕೊಡಿಸಬೇಕು

ಯಾವಾಗಲೂ ರೈತರ ಪರ ಅನ್ನೋ ಕುಮಾರಸ್ವಾಮಿ ನಬಾರ್ಡ್ ಸಾಲ ಪ್ರಮಾಣದ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ, ರಾಜ್ಯಕ್ಕೆ ಬಂದು ರಾಜಕಾರಣ ಮಾಡಲಿ, ಆದರೆ, ರೈತರ ವಿಚಾರದಲ್ಲಿ ನ್ಯಾಯ ಕೊಡಿಸಬೇಕಲ್ಲವೇ ಎಂದರು.

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು, ಪ್ರತಿ ವರ್ಷ ರೈತರಿಗೆ ಸಾಲ ಸೌಲಭ್ಯ ವ್ಯವಸ್ಥೆ, ಬಿತ್ತನೆಬೀಜಕ್ಕೆ ಹಣಕಾಸಿನ ರೂಪದಲ್ಲಿ ಸಹಾಯ ಮಾಡುತ್ತೇವೆ, ಶೇಕಡ 4.5 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು, ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿವೆ, ಇವುಗಳಿಗೆ ಬಲ ತುಂಬುವುದು ನಬಾರ್ಡ್.

ನಬಾರ್ಡ್‌ನಿಂದ ರಾಜ್ಯಕ್ಕೆ ಮಂಜೂರಾದ ಅಲ್ಪಾವಧಿ ಕೃಷಿ ಸಾಲ ಪ್ರಮಾಣದ ವರ್ಷಾವಾರು ವಿವರ ನೀಡಿದ ಅವರು, 2020/21ರಲ್ಲಿ 5,500 ಕೋಟಿ ರೂ., 21/22ರಲ್ಲಿ 5,483 ಕೋಟಿ ರೂ., 22/23ರಲ್ಲಿ 5,550 ಕೋಟಿ ರೂ., 23/24 ರಲ್ಲಿ 5,600 ಕೋಟಿ ರೂ. ಬಂದಿದ್ದರೆ, ಈ ಬಾರಿ ಕೇವಲ 2,300 ಕೋಟಿ ರೂ. ಬಂದಿದೆ, 2024/25ರಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಶೇಕಡಾ 58 ಕಡಿಮೆ ಮಾಡಲಾಗಿದೆ.

ಶೂನ್ಯ ಬಡ್ಡಿ ಸಾಲ

ರೈತರಿಗೆ ನಾವು ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದೆವು, ಪ್ರಸ್ತುತ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗಿದೆ, 3 ಲಕ್ಷದಿಂದ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ ಕೊಡುತ್ತಿದ್ದೇವೆ, ದೀರ್ಘಾವಧಿ ಸಾಲ 10 ರಿಂದ 15 ಲಕ್ಷ ರೂ. ಕೊಡುತ್ತೇವೆ.

ಆದರೆ, ನಬಾರ್ಡ್‌ನಿಂದ ಈ ಬಾರಿ ಸಾಲ ಪ್ರಮಾಣದಲ್ಲಿ ಕಡಿತವಾಗಿರುವ ಪರಿಣಾಮ ಸಹಕಾರಿ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವೂ ಕಡಿಮೆಯಾಗಲಿದ್ದು, ರೈತರು ಖಾಸಗಿ ಬ್ಯಾಂಕ್ ಹಾಗೂ ಲೇವಾದೇವಿದಾರರ ಬಳಿ ಅಧಿಕ ಬಡ್ಡಿ ದರದ ಸಾಲ ಪಡೆಯಲು ಮುಂದಾಗುತ್ತಾರೆ.

ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ರೈತರು, ಸಾಲ ತೀರಿಸಲಾಗದೆ, ಸಂಕಷ್ಟಕ್ಕೆ ಸಿಲುಕುತ್ತಾರೆ, ಇದಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ.

ಅನರ್ಹ ಬಿಪಿಎಲ್ ಪಡಿತರದಾರರಿಗೆ ಕಡಿವಾಣ
ಸುಪ್ರೀಂಕೋರ್ಟ್ ಮೊರೆ

ಈ ಹಿಂದೆ ನೆರವಿಗಾಗಿ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೆವು, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಅವರೊಂದಿಗೆ ದೆಹಲಿಗೆ ತೆರಳಿ ರಾಜ್ಯ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ, ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು ಎಂದರು.

ಎನ್‌ಡಿಆರ್‌ಎಫ್‌ನಲ್ಲಿ ಬರುವ ಹಣ ಕಡಿಮೆ ಆಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ, ಕೇಂದ್ರ ಸರ್ಕಾರ, ಆರ್‌ಬಿಐ ಜೊತೆ ವ್ಯವಹರಿಸಿ ಅಲ್ಪಾವಧಿ ಕೃಷಿ ಸಾಲ ಪಡೆಯಲು ಸಹಕಾರ ನೀಡಬೇಕು, ಜಿಎಸ್‌ಟಿ ಹಣದಲ್ಲಿ ನಮಗೆ 52 ಸಾವಿರ ಕೋಟಿ ರೂ. ಬರಬೇಕಿದೆ.

ಪ್ರತಿ ವರ್ಷ ನಬಾರ್ಡ್ ಹೆಚ್ಚು ಹಣ ನೀಡುತ್ತಿತ್ತು, ಆದರೆ, ಈ ವರ್ಷ ಮಾತ್ರವೇ ಕಡಿಮೆ ಕೊಟ್ಟಿದ್ದಾರೆ, ನಬಾರ್ಡ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ, ನಾವು ಕೇಂದ್ರ ಸರ್ಕಾರವನ್ನು ಕೇಳಿದರೆ ಸ್ಪಂದನೆಯೇ ಇಲ್ಲ.

ಬಡವರ ಯೋಜನೆಯಲ್ಲೂ ಹಣ ಕಡಿತ

ಜಿಎಸ್‌ಟಿಯಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ನಮ್ಮ ರಾಜ್ಯ 4 ಲಕ್ಷದ 50 ಸಾವಿರ ಕೋಟಿ ರೂ. ತೆರಿಗೆ ಪಾವತಿಸುತ್ತದೆ, ಆದರೆ, ನಮಗೆ ಹಿಂತಿರುಗಿ ಬರುವುದು ಕೇವಲ 52 ಸಾವಿರ ಕೋಟಿ ರೂ. ಮಾತ್ರ, ಪ್ರಧಾನಿ ಆವಾಸ್ ಯೋಜನೆಯಡಿ ಹಣ ನೀಡುತ್ತದೆ, ಬಡವರ ಯೋಜನೆಯಲ್ಲೂ ಹಣ ಕಡಿತವಾಗುತ್ತದೆ, ಇದು ಸಾಮಾನ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.

ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ, ರಾಷ್ಟ್ರಮಟ್ಟದಲ್ಲಿ ಟಾಂಟಾಂ ಹೊಡೆಯುತ್ತಾರೆ, ಅದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಸಭೆಯಲ್ಲಿ ನಮಗೆ ಹಲವು ಸೂಚನೆ ಕೊಟ್ಟಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ಸರ್ಕಾರಿ ಸವಲತ್ತುಗಳ ಸಮಾವೇಶ ಮಾಡಲಿದ್ದಾರೆ, ಹಾಸನದಲ್ಲಿ ರಾಜಕೀಯ ಸಮಾವೇಶ ನಡೆಯಲಿದೆ, ಡಿಸೆಂಬರ್ 5 ರಂದು ಸಮಾವೇಶ ನಡೆಸಲು ಯೋಜನೆ ರೂಪಿಸಲಾಗುತ್ತಿದೆ, ಸಿದ್ದರಾಮಯ್ಯ ಅವರಿಗೆ ಶಕ್ತಿ ಇದೆ, ಇದು ಸಮಾನ ಮನಸ್ಕರ ಸಮಾವೇಶ, ಪಕ್ಷವನ್ನೊಳಗೊಂಡ ಸಮಾವೇಶ ಎಂದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಇ.ಡಿ. ತನಿಖೆಯಿಂದ ಯಾವುದೇ ಒತ್ತಡ ಉಂಟಾಗಿಲ್ಲ, ಸಿದ್ದರಾಮಯ್ಯ ಅವರನ್ನು ಟಗರು ಅಂತಾ ಕರೀತಾರೆ, ಎಂಟತ್ತು ಹೆಣ್ಣು ಕುರಿಗಳಿದ್ದರೆ, ಒಂದೇ ಟಗರು ಇರುತ್ತೆ, ಅದು ಸಿದ್ದರಾಮಯ್ಯ, ಅದಕ್ಕೆಲ್ಲ ಹೆದರುವುದಕ್ಕೆ ಆಗುತ್ತೇನ್ರಿ ಎಂದರು.


Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
central minister amit shahminister chaluvaraya swamyminister kn rajannanabard loan
0 FacebookTwitterPinterestEmail
admin

previous post
ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ
next post
ಅನರ್ಹ ಬಿಪಿಎಲ್ ಪಡಿತರದಾರರಿಗೆ ಕಡಿವಾಣ

You may also like

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

May 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ