Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಶಿವಕುಮಾರ್ ಪರ 63 ಶಾಸಕರು: ಉನ್ನತ ಮೂಲಗಳ ಮಾಹಿತಿ !

by KM Shivaraju November 24, 2025
written by KM Shivaraju November 24, 2025 0 comments 2 minutes read
0FacebookTwitterPinterestEmail
134

ಸಿದ್ದರಾಮಯ್ಯ ವಿರುದ್ಧ ಬಲ ಪ್ರದರ್ಶನಕ್ಕೆ ಶಾಸಕರ ತಂಡ ದೆಹಲಿಗೆ

ಬೆಂಗಳೂರು:ಪ್ರಭಾವಿ ಸಚಿವರೂ ಸೇರಿದಂತೆ 63 ಶಾಸಕರು ಸದ್ಯಕ್ಕೆ ಶಿವಕುಮಾರ್ ಬೆಂಬಲಕ್ಕೆ ಇದ್ದಾರೆಂದು ಉನ್ನತ ಮೂಲಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ಮತ್ತು ಪಟ್ಟಿ ತಲುಪಿಸಿದೆ.

ಶಿವಕುಮಾರ್ ಬೆಂಬಲಕ್ಕೆ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ಒಬ್ಬ ಶಾಸಕರನ್ನು ಹೊರತುಪಡಿಸಿ ಹೆಚ್ಚಿನ ಬೆಂಬಲಿತರು ಇಲ್ಲ, ಉತ್ತರ ಕರ್ನಾಟಕ ಭಾಗದ ವೀರಶೈವ ಶಾಸಕರು ಉಪ ಮುಖ್ಯಮಂತ್ರಿ ಪರ ನಿಂತಿದ್ದಾರೆ.

ಗೌಪ್ಯ ಭೇಟಿ-ಮಾತುಕತೆ

ಈಗಾಗಲೇ ಬಹುತೇಕ ಸಚಿವರು ಮತ್ತು ಶಾಸಕರು ಗೌಪ್ಯವಾಗಿ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದಲ್ಲದೆ, ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ತಮಗೆ ಶಾಸಕರ ಬೆಂಬಲ ದೊರೆಯುತ್ತಿದ್ದಂತೆ, ಶಿವಕುಮಾರ್ ವರಿಷ್ಠರ ಮುಂದೆ ಬಲ ಪ್ರದರ್ಶನಕ್ಕೆ ತಂಡೋಪ ತಂಡವಾಗಿ ಬೆಂಬಲಿತ ಶಾಸಕರನ್ನು ದೆಹಲಿಯ ವರಿಷ್ಠರ ಭೇಟಿಗೆ ಕಳುಹಿಸುತ್ತಿದ್ದಾರೆ.

ಸಚಿವ ಚಲುವರಾಯಸ್ವಾಮಿ ನಾಯಕತ್ವದಲ್ಲಿ ಕಳೆದ ಗುರುವಾರ ಆಯ್ದ ಶಾಸಕರು ದೆಹಲಿಗೆ ತೆರಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ವರಿಷ್ಠರ ಸೂತ್ರದಂತೆ ಶಿವಕುಮಾರ್ ಅವರಿಗೆ ಅಧಿಕಾರ ಕೊಡಬೇಕೆಂದು ಮನವಿ ಮಾಡಿದ್ದರು.

9 ಶಾಸಕರು ತಡರಾತ್ರಿ ದೆಹಲಿಗೆ

ಇದೀಗ ಶರತ್ ಬಚ್ಚೇಗೌಡ ನಾಯಕತ್ವದಲ್ಲಿ 9 ಶಾಸಕರು ಭಾನುವಾರ ತಡರಾತ್ರಿ ದೆಹಲಿಗೆ ತೆರಳಿ, ಇಂದು ವರಿಷ್ಠರನ್ನು ಭೇಟಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕೋರಿದ್ದಾರೆ.

ಬಚ್ಚೇಗೌಡ ಜೊತೆ ಶ್ರೀನಿವಾಸ ಮಾನೆ, ನಯನಾ ಮೋಟಮ್ಮ, ಬಸವರಾಜ್ ಶಿವಗಂಗಾ, ಕದಲೂರು ಉದಯ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿದಂತೆ 9 ಮಂದಿ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.

ಮಂಥರ್ ಗೌಡ ಹಾಗೂ ತಮ್ಮಯ್ಯ ನಾಯಕತ್ವದಲ್ಲಿ 13 ಮಂದಿ ಮೊದಲ ಬಾರಿಗೆ ಆಯ್ಕೆಗೊಂಡಿರುವ ಶಾಸಕರು ಸೋಮವಾರ ತಡರಾತ್ರಿ ಅಥವಾ ಮಂಗಳವಾರ ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿ ಮಾಡಿ ಶಿವಕುಮಾರ್ ಅವರಿಗೆ ಅಧಿಕಾರ ಕೊಡಿ ಎಂದು ಒತ್ತಾಯಿಸಲಿದ್ದಾರೆ.

ಅವರ ಬಳಿ ಬೆರಳೆಣಿಕೆ ಶಾಸಕರು

ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ, ಅವರ ಬಳಿ ಬೆರಳೆಣಿಕೆಯಷ್ಟು ಸದಸ್ಯರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಮುಖ್ಯಮಂತ್ರಿ ಹೇಳಿಕೆ ಸುಳ್ಳು ಮಾಡುವುದು, ತಮಗೆ ಶಾಸಕಾಂಗ ಪಕ್ಷದಲ್ಲಿ ಬಹುಮತ ಇದೆ ಎಂದು ಸಾಬೀತುಪಡಿಸಲು, ಪರೋಕ್ಷವಾಗಿ ತಂಡೋಪ ತಂಡದಲ್ಲಿ ತಮ್ಮ ಬೆಂಬಲಿತ ಶಾಸಕರನ್ನು ದೆಹಲಿಗೆ ತೆರಳುವಂತೆ ಶಿವಕುಮಾರ್ ಮಾಡುತ್ತಿದ್ದಾರೆ.

ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವರಿಷ್ಠರ ನಿರ್ಧಾರವೇ ಅಂತಿಮ ಎಂಬುದಾಗಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಉಪಮುಖ್ಯಮಂತ್ರಿ ಮಾತ್ರ ಶಾಸಕರ ಬಲ ಹೆಚ್ಚಿಸಿಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ.

ಮುಖ್ಯಮಂತ್ರಿಗೆ 50 ಶಾಸಕರ ಪಟ್ಟಿ

ಸಂಪುಟದ 13 ಸಚಿವರು ಶಿವಕುಮಾರ್ ಪರ ಇದ್ದಾರೆ ಎಂದಿರುವ ಉನ್ನತ ಮೂಲಗಳು, ಕೆಲವರ ಹೆಸರು ಸೇರಿಸಿ 50 ಶಾಸಕರ ಪಟ್ಟಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದೆ.

ಮುಂದಿನ ಒಂದು ವಾರದಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂಬ ಮಾಹಿತಿ ನೀಡಲಾಗಿದೆ..

ಮುಖ್ಯಮಂತ್ರಿ ಅವರಿಗೆ ತಲುಪಿಸಿರುವ ಪಟ್ಟಿಯಲ್ಲಿ ಶಿವಕುಮಾರ್ ಪರವಾಗಿ ಬಾಲಕೃಷ್ಣ (ಮಾಗಡಿ), ಉದಯಕುಮಾರ್ (ಮದ್ದೂರು), ರವಿಕುಮಾರ್ ಗೌಡ (ಗಣಿಗ) (ಮಂಡ್ಯ), ಎಚ್.ಎ.ಇಕ್ಬಾಲ್ ಹುಸೇನ್ (ರಾಮನಗರ), ಮಂಥರ್ ಗೌಡ (ಮಡಿಕೇರಿ), ಶರತ್ ಬಚ್ಚೇಗೌಡ (ಹೊಸಕೋಟೆ) ಶಿವಣ್ಣ (ಆನೇಕಲ್), ಶ್ರೀನಿವಾಸ್ (ಪುಲಿಕೇಶಿನಗರ).

ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಪಿ.ಯೋಗೇಶ್ವರ್

ಎನ್.ಎ.ಹ್ಯಾರಿಸ್ (ಶಾಂತಿನಗರ), ರಾಜೇಗೌಡ (ಶೃಂಗೇರಿ), ತಮ್ಮಯ್ಯ (ಚಿಕ್ಕಮಗಳೂರು), ಡಿ.ಸುಧಾಕರ್ (ಹಿರಿಯೂರು), ಬಸವರಾಜ ಶಿವಗಂಗಾ (ಚನ್ನಗಿರಿ), ವೀರೇಂದ್ರ ಪಪ್ಪಿ (ಚಿತ್ರದುರ್ಗ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ).

ಜಯಚಂದ್ರ (ಶಿರಾ), ತನ್ವೀರ್ ಸೇಠ್ (ನರಸಿಂಹರಾಜ), ಗಣೇಶ್ ಹುಕ್ಕೇರಿ (ಚಕ್ಕೋಡಿ ಸದಲಗಾ), ಯಶವಂತರಾಯಗೌಡ ಪಾಟೀಲ್ (ಇಂಡಿ), ಲಕ್ಷ್ಮಣ ಸವದಿ (ಅಥಣಿ), ವಿನಯ್ ಕುಮಾರ್ (ಧಾರವಾಡ ಗ್ರಾಮೀಣ).

ರಂಗನಾಥ್ (ಕುಣಿಗಲ್), ರಾಜುಕಾಗೆ (ಕಾಗವಾಡ), ಮಹೇಂದ್ರ ತಮ್ಮಣ್ಣವರ್ (ಕುಡಚಿ), ಶರಣಬಸಪ್ಪ ದರ್ಶನಾಪುರ (ಶಹಪುರ), ಶಿವಾನಂದ ಪಾಟೀಲ್ (ಬಸವನ ಬಾಗೇವಾಡಿ), ಅಶೋಕ್ ಎಂ. ಮನಗೋಳಿ (ಸಿಂಧಗಿ), ಶ್ರೀನಿವಾಸ (ಗುಬ್ಬಿ).

ನಯನಾ ಮೋಟಮ್ಮ, ಚಲುವರಾಯಸ್ವಾಮಿ

ನಯನಾ ಮೋಟಮ್ಮ (ಮೂಡಿಗೆರೆ), ಶ್ರೀನಿವಾಸಯ್ಯ (ನೆಲಮಂಗಲ), ನಾ.ರಾ.ಭರತರೆಡ್ಡಿ (ಬಳ್ಳಾರಿ), ಗಣೇಶ್ (ಕಂಪ್ಲಿ), ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್), ಚಲುವರಾಯಸ್ವಾಮಿ (ನಾಗಮಂಗಲ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ).

ಅಶೋಕ್ ಕುಮಾರ್ ರೈ (ಪುತ್ತೂರು), ದೇವೇಂದ್ರಪ್ಪ (ಜಗಳೂರು), ಪ್ರಕಾಶ್ ಕೋಳಿವಾಡ (ರಾಣೆಬೆನ್ನೂರು), ಖಾನಿಜಾ ಫಾತಿಮಾ (ಕಲಬುರಗಿ ಉತ್ತರ), ಚೆನ್ನಾರೆಡ್ಡಿ (ಯಾದಗಿರಿ).

ಮಧು ಬಂಗಾರಪ್ಪ (ಸೊರಬ), ಭೀಮಣ್ಣ ನಾಯಕ್ (ಶಿರಸಿ), ಅಲ್ಲಮಪ್ರಭು ಪಾಟೀಲ್ (ಕಲಬುರಗಿ ದಕ್ಷಿಣ), ಜಿ.ಎಸ್.ಪಾಟೀಲ್ (ರೋಣ), ಸಂಗಮೇಶ್ (ಭದ್ರಾವತಿ), ಶಾಂತನಗೌಡ (ಹೊನ್ನಾಳಿ), ಬಸವನಗೌಡ ದದ್ದಲ್ (ರಾಯಚೂರು), ಕೆ.ಎಚ್.ಪುಟ್ಟಸ್ವಾಮಿಗೌಡ (ಗೌರಿಬಿದನೂರು) ಹೆಸರುಗಳು ಉನ್ನತ ಮೂಲಗಳು ನೀಡಿರುವ ಪಟ್ಟಿಯಲ್ಲಿದೆ ಎನ್ನಲಾಗಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
13 ministers with d k shivakumar63 mlas with d k shivakumarintelligence reportreport to cm siddaramaiah
0 FacebookTwitterPinterestEmail
KM Shivaraju

previous post
ಅಧಿಕಾರ ಹಸ್ತಾಂತರ ನಿರ್ಣಯ ಸಿದ್ದರಾಮಯ್ಯ ಹೆಗಲಿಗೆ
next post
ಹೈಕಮಾಂಡ್ ಮಧ್ಯಪ್ರವೇಶಕ್ಕೆ ಸಿದ್ದರಾಮಯ್ಯ ಮನವಿ

You may also like

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

May 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ