Tuesday, October 13, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, October 13, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸರ್ಕಾರದ ವೈಫಲ್ಯ: ಸೆ.1ರಿಂದ ಬಿಜೆಪಿ ಪಾದಯಾತ್ರೆ

by admin August 25, 2026
written by admin August 25, 2026 0 comments 2 minutes read
0FacebookTwitterPinterestEmail
84

ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಹಣ ಲೂಟಿ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ, ಸರ್ಕಾರದ ವೈಫಲ್ಯ ಜನರಿಗೆ ತಿಳಿಸಲು ಬಿಜೆಪಿ ಸೆಪ್ಟೆಂಬರ್ 1ರಿಂದ 10 ದಿನ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.

ರಾಯಚೂರಿನಿಂದ ಆರಂಭಗೊಳ್ಳುವ ಪಾದಯಾತ್ರೆ 200 ಕಿಲೋ ಮೀಟರ್ ಕ್ರಮಿಸಿ ಬಳ್ಳಾರಿ ತಲುಪಿ, ಸಮಾರೋಪಗೊಳ್ಳಲಿದೆ.

ಜೆಡಿಎಸ್ ಬೆಂಬಲ

ನಾಗೇಂದ್ರ ತವರು ಜಿಲ್ಲೆಯಲ್ಲೇ ಈ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಪಾದಯಾತ್ರೆ ಮತ್ತು ಸಮಾವೇಶಕ್ಕೆ ಮಿತ್ರ ಪಕ್ಷ ಜೆಡಿಎಸ್ ಬೆಂಬಲ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಯಚೂರು ಪಾದಯಾತ್ರೆಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದರು.

ರಾಜ್ಯದ ಅಭಿವೃದ್ಧಿ ನಿರ್ಲಕ್ಷ್ಯ, ರೈತರ ಸಂಕಷ್ಟ, ಬಡವರಿಗೆ ಯೋಜನೆ ನೀಡಿಲ್ಲ, ಉದ್ಯೋಗಾವಕಾಶ ಸೃಷ್ಟಿಯಲ್ಲಿ ವೈಫಲ್ಯ, ಮೀಸಲಾತಿ ಜಾರಿ, ಹೊಸ ನೇಮಕಾತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸದಿರುವ ಕುರಿತು ಜನರಿಗೆ ತಿಳಿಸಿ ಸರ್ಕಾರದ ಬಂಡವಾಳ ಬಯಲು ಮಾಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಭ್ರಷ್ಟಾಚಾರದಲ್ಲಿ ಮುಳುಗಿದೆ

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದ್ದು, ಇವರ ಬಣ್ಣ ಬಯಲು ಮಾಡುವುದು ಪಾದಯಾತ್ರೆ ಉದ್ದೇಶ.

ಸತ್ಯ ಎದುರಿಸಲಾಗದೆ ಕಾಂಗ್ರೆಸ್ ಸರ್ಕಾರ ಅನಿರ್ದಿಷ್ಟಾವಧಿಗೆ ವಿಧಾನಮಂಡಲ ಅಧಿವೇಶನ ಮುಂದೂಡಿ ಪಲಾಯನ ಮಾಡುವ ಮೂಲಕ ಜನರ ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ಅನ್ಯಾಯ ಮಾಡಿದೆ.

ಅಧಿವೇಶನ ಆರಂಭಕ್ಕೂ ಮುನ್ನವೇ ವಾಲ್ಮೀಕಿ ನಿಗಮ ಹಗರಣದ ಆರೋಪಿ, ಕಳಂಕಿತ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲು, ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದೆವು.

ಸರ್ಕಾರ ಪಲಾಯನ

ಸರ್ಕಾರ ಅಧಿವೇಶನ ಮೊಟಕು ಮಾಡಿ ಓಡಿ ಹೋಗಿದೆ, ರಾಜ್ಯದಲ್ಲಿ ಭೀಕರ ಬರ ಇದೆ, ಕೆಪಿಎಸ್‌ಸಿ ಹಗರಣ, ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕ ಸಮಸ್ಯೆ, ಬಿಡದಿ ಟೌನ್‌ಶಿಪ್, ನೈಸ್ ಮುಂತಾದ ಸಮಸ್ಯೆ ಕುರಿತು ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆವು.

ಚರ್ಚೆಗೆ ಅವಕಾಶ ನೀಡಿದರೆ ಕಾಂಗ್ರೆಸ್ ಸರ್ಕಾರದ ಮುಖವಾಡ ಬಯಲಾಗುತ್ತದೆ ಎಂದು ಹೆದರಿ ಮುಖ್ಯಮಂತ್ರಿ ಓಡಿ ಹೋಗಿದ್ದಾರೆ.

ವಾಲ್ಮೀಕಿ ನಿಗಮ ಹಗರಣದಿಂದಾಗಿ ಬೋವಿ ಸಮಾಜದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು, ಅವರು ಬರೆದ ಡೆತ್‌ನೋಟ್ ಎಲ್ಲ ಸತ್ಯವನ್ನೂ ಹೇಳುತ್ತಿದೆ, ಸಚಿವರ ಮೌಖಿಕ ಆದೇಶದ ಮೇರೆಗೆ ನಿಗಮದ ಹಣ ವರ್ಗಾವಣೆ ಮಾಡಿದ್ದಾಗಿ ನಮೂದಿಸಿದ್ದಾರೆ.

ಸಚಿವ ನಾಗೇಂದ್ರ ಆರೋಪಿ

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ, ಈಗಿನ ಮುಖ್ಯಮಂತ್ರಿ ಶಿವಕುಮಾರ್ ಸಂಪುಟದ ಶಿವಲಿಂಗೇಗೌಡ ಸಹಾ ನಾಗೇಂದ್ರ ಆರೋಪಿ ಎಂಬುದಾಗಿ ಒಪ್ಪಿಕೊಂಡಿದ್ದು, ಇಷ್ಟಾದರೂ ಸರ್ಕಾರ ಭಂಡತನ ತೋರುತ್ತಿದೆ.

ರಾಜ್ಯದ ಸಮಸ್ಯೆಗಳ ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ನೀಡದೆ ಸರ್ಕಾರ ಸಮಯ ವ್ಯರ್ಥ ಮಾಡಿತು.

ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ ಸಹಾ ನೀಡುತ್ತಿಲ್ಲ, ಕಲ್ಯಾಣ ಯೋಜನೆ ಸೇರಿದಂತೆ ಹಲವು ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ.

ರಿಯಲ್ ಎಸ್ಟೇಟ್ ಆಸಕ್ತಿ

ಬಿಡದಿ ಟೌನ್‌ಶಿಪ್, ಕನಕಪುರ ವಿಮಾನ ನಿಲ್ದಾಣ, ನೈಸ್ ಯೋಜನೆ ಮೂಲಕ ರಿಯಲ್ ಎಸ್ಟೇಟ್ ಕಡೆಗೇ ಶಿವಕುಮಾರ್ ಆಸಕ್ತಿ ಇದ್ದು, ಜೊತೆಗೆ ಈಗ ಉದ್ಯಾನಗಳ ಜಾಗ ಕಬಳಿಸಲು ಮುಂದಾಗಿದ್ದಾರೆ, ಒಂದು ಕಡೆ ಕೋಟಿ ಸಸಿ ನೆಡುವ ದಾಖಲೆ, ಮತ್ತೊಂದು ಕಡೆ ರಿಯಲ್ ಎಸ್ಟೇಟ್‌ಗೆ ಉತ್ತೇಜನ, ಇದು ಮುಖ್ಯಮಂತ್ರಿಯ ದ್ವಂದ್ವ ನೀತಿಯಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಶಿವಕುಮಾರ್ ಬಹಳ ಉತ್ಸಾಹ ತೋರಿದರು, ಎರಡೂವರೆ ತಿಂಗಳ ನಂತರ ಕಳೆಗುಂದಿದ್ದಾರೆ, ಸಚಿವ ಸಂಪುಟ ವಿಸ್ತರಣೆ, ಖಾತೆ ಪಟ್ಟಿ ಬಿಡುಗಡೆ, ಖಾತೆ ಹಂಚಿಕೆಗೆ ಅಸಮಾಧಾನ, ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನಿಸು ಶಮನಕ್ಕೆ ಪರದಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪಾದಯಾತ್ರೆ ಸಾಗುವ ಮಾರ್ಗದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
200 kmb y vijayendrabjp-jdscm d k shivakumarcongrescorrupt govt.padayatrer.ashokrayachuru to ballarirunaway from assembly session
0 FacebookTwitterPinterestEmail
admin

previous post
ಮುಖ್ಯಮಂತ್ರಿ ಶಿವಕುಮಾರ್‌ಗೆ ಸಚಿವ ನಾಗೇಂದ್ರ ಕಂಟಕ !
next post
ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನಿರ್ಧಾರ

You may also like

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026

2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

October 10, 2026

ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

October 7, 2026

ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

October 6, 2026

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

October 5, 2026

ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

October 3, 2026

ಸಚಿವ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

October 1, 2026

ಜನವರಿಯಲ್ಲಿ ಪಂಚಾಯತ್‌ ಚುನಾವಣೆಗೆ ತೀರ್ಮಾನ

September 30, 2026

ನೈಸ್‌ ಯೋಜನೆ: ಡಿಕೆಶಿ ಕುಟುಂಬ 3 ಲಕ್ಷ ಕೋಟಿ ಲೂಟಿ

September 29, 2026

ವರಿಷ್ಠರ ಜೊತೆ ಡಿಕೆಶಿ ಸಂಪುಟ ಪುನರ್ ರಚನೆ ಚರ್ಚೆ

September 28, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (587)
  • ಅಂಕಣ (109)
  • ಉದ್ಯೋಗ (355)
  • ದಿನ ಭವಿಷ್ಯ (110)
  • ರಾಜಕೀಯ (2,080)
  • ರಾಜ್ಯ (2,395)
  • ರಾಷ್ಟ್ರ (2,359)
  • ವಿಶ್ಲೇಷಣೆ (202)
  • ಶಿಕ್ಷಣ (412)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026
  • ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

    October 7, 2026

KMS Special

  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026
  • ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

    October 7, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ