Tuesday, August 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, August 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯ

ಸಂಪುಟ ಸೇರ್ಪಡೆಗೂ ಮ್ಯಾನೇಜ್ ಮೆಂಟ್ ಕೋಟಾ : ಹೆಚ್ ಡಿಕೆ ಆರೋಪ

by KM Shivaraju June 22, 2026
written by KM Shivaraju June 22, 2026 0 comments 1 minutes read
0FacebookTwitterPinterestEmail
82

ಬೆಂಗಳೂರು : ಸಂಪುಟ ಸೇರ್ಪಡೆಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಸೂಲಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.

ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಲು ಮ್ಯಾನೇಜ್‌ಮೆಂಟ್ ಇಲ್ಲವೆ ಪೇಮೆಂಟ್ ಕೋಟಾದಲ್ಲಿ ಸಚಿವರಾಗಲು ಲಾಭಿ ನಡೆದಿದೆ ಎಂದು ದೂರಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು, ಮ್ಯಾನೆಜ್‌ಮೆಂಟ್ ಕೋಟಾಕ್ಕೆ ಶೇಕಡ 5 ರಷ್ಟು, ಪೇಮೆಂಟ್ ಕೋಟಾಕ್ಕೆ ಶೇಕಡ 95 ರಷ್ಟು ಸೀಟ್‌ಗಳನ್ನು ನಿಗದಿಪಡಿಸಲಾಗಿದೆ. ಈ ಸೀಟುಪಡೆಯಲು ಯಾರು ಅರ್ಹರಿರುತ್ತಾರೋ ಅಂಥವರು ಮಾತ್ರ ಮಂತ್ರಿಯಾಗಲು ಸಾಧ್ಯ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಕೋಟಾ ತುಂಬಲು ಶಾಸಕರುಗಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ದೂರಿದರು. ಸರ್ಕಾರಿ ಹಾಗೂ ಆಡಳಿತ ಮಂಡಳಿ ಕೋಟಾ ಎಂದು ನಾವು ವೃತ್ತಿ ಶಿಕ್ಷಣ ಪ್ರವೇಶ ಕಾಲೇಜುಗಳಲ್ಲಿ ಕೇಳಿದ್ದೆವು. ಆದರೆ ಸಂಪುಟ ಸೇರ್ಪಡೆಗೂ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ರಿಯಲ್ ಎಸ್ಟೇಟ್ ದಂಧೆಗಾಗಿ ಬಿಡದಿ ಟೌನ್ ಶಿಪ್ ಕೈಗೆತ್ತಿಕೊಂಡಿರುವ ಮುಖ್ಯಮಂತ್ರಿ ಶಿವಕುಮಾರ್ ರೈತರಿಂದ ಭೂಮಿ ಪಡೆಯಲು ಮಾಡಲು ಗೂಂಡಾಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರ್‌ಗಳನ್ನು ನೇಮಕ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಬೇಕಾದ ಎಲ್ಲಾ ವ್ಯವಹಾರಗಳು, ನಾಗರಭಾವಿಯಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿದಾರರು ಹಾಗೂ ಗೂಂಡಾಗಳು ರೈತರನ್ನು ಎದುರಿಸಿ, ಬೆದರಿಸಿ, ಅವರ ಜಮೀನುಗಳನ್ನು ಬರೆಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ತಾಕತ್ತಿದ್ದರೆ, ಬೈರಮಂಗಲ ಜನರ ಬಳಿಯೇ ಹೋಗೋಣ ಬನ್ನಿ, ಅಲ್ಲಿಯೇ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ, ಶಿವಕುಮಾರ್‌ಗೆ ಆಹ್ವಾನ ನೀಡಿದ್ದಾರೆ.

2007 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಕೈಗೆತ್ತಿಕೊಳ್ಳಬೇಕೆಂಬ ನಿರ್ಧಾರ ಕೈಗೊಂಡಿದ್ದೆ, ಅಂತಹ ಸಮಯದಲ್ಲಿ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಅಲ್ಲಿನ ರೈತರು ಜಮೀನು ಕಳೆದುಕೊಳ್ಳುವ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟು, ಈ ಯೋಜನೆ ಕೈಬಿಡುವಂತೆ ವಿಧಾನಸಭೆಯಲ್ಲೇ ಒತ್ತಾಯಿಸಿದ್ದರು.

ರೈತರ ಮಾತಿಗೆ ಮಣಿದು, ನಾನು ಯೋಜನೆಯನ್ನು ಕೈಬಿಡುವುದಾಗಿ ಅಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದೆ ಎಂಬ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಿದರು. ರಿಯಲ್ ಎಸ್ಟೇಟ್‌ಗಾಗಿ ಶಿವಕುಮಾರ್ ನನ್ನ ಮೇಲೆ ಗೂಬೆ ಕೂರಿಸಿ, ಯೋಜನೆ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
allegescabinetcabinet incrementChief Ministerdk shivakumarHdhdkkumaraswamyManagement quotaserious allegationunion minister
0 FacebookTwitterPinterestEmail
KM Shivaraju

previous post
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಬ್ರೇಕ್
next post
ಸರ್ಕಾರಿ ನೌಕರರ ಶಿಸ್ತುಪಾಲನೆ ಕಳ್ಳಾಟಕ್ಕೆ ಬ್ರೇಕ್

You may also like

ಆಪ್ತ ಸಚಿವರೊಂದಿಗೆ ಸಿದ್ದರಾಮಯ್ಯ ಗೌಪ್ಯ ಸಭೆ

August 18, 2026

ಕಲಾಪ ನುಂಗಿದ ಸಚಿವ ನಾಗೇಂದ್ರ ರಾಜೀನಾಮೆ ಪಟ್ಟು

August 17, 2026

ರಾಜಕೀಯ ಚದುರಂಗ ಗೆದ್ದು ಮತ್ತೆ ಅಧಿಕಾರಕ್ಕೆ ಬರುವೆ

August 14, 2026

ಮುಖ್ಯಮಂತ್ರಿ ಆಸನಕ್ಕೆ ಶಿರಬಾಗಿದ ಶಿವಕುಮಾರ್

August 13, 2026

ಗುಟ್ಕಾ, ತಂಬಾಕು ಮಿಶ್ರಿತ ಮಸಾಲಾ ಮಾರಾಟ ಬಂದ್

August 12, 2026

ಡಬಲ್ ಬಿಲ್ ಅಧಿಕಾರಿಗಳನ್ನು ಬಡಿದುಹಾಕುತ್ತೇನೆ

August 11, 2026

ಸಂಪುಟಕ್ಕೆ ಸಣ್ಣ ಸರ್ಜರಿ ಅನುಮತಿಗೆ ಡಿಕೆಶಿ ದೆಹಲಿಗೆ

August 8, 2026

ವಾಹನಗಳಿಗೆ ರಾಜ್ಯ ಸರ್ಕಾರಿ ಸಂಸ್ಥೆ ವಿಮೆ ಕಡ್ಡಾಯ

August 7, 2026

ಶಾಸಕರ ಬಂಡಾಯ ಶಮನಕ್ಕೆ ಸಂಪುಟಕ್ಕೆ ಸಣ್ಣ ಸರ್ಜರಿ !

August 6, 2026

ಶಾಸಕರ ಬಂಡಾಯ ಶಮನಕ್ಕೆ ಅಖಾಡಕ್ಕಿಳಿದ ಡಿಕೆಶಿ

August 5, 2026

Social Networks

Facebook Twitter Instagram Linkedin Youtube Email Rss

KMS Analysis

  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026

Categories

  • Special Story (541)
  • ಅಂಕಣ (109)
  • ಉದ್ಯೋಗ (344)
  • ದಿನ ಭವಿಷ್ಯ (110)
  • ರಾಜಕೀಯ (2,034)
  • ರಾಜ್ಯ (2,349)
  • ರಾಷ್ಟ್ರ (2,314)
  • ವಿಶ್ಲೇಷಣೆ (199)
  • ಶಿಕ್ಷಣ (404)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಆಪ್ತ ಸಚಿವರೊಂದಿಗೆ ಸಿದ್ದರಾಮಯ್ಯ ಗೌಪ್ಯ ಸಭೆ

    August 18, 2026
  • ಕಲಾಪ ನುಂಗಿದ ಸಚಿವ ನಾಗೇಂದ್ರ ರಾಜೀನಾಮೆ ಪಟ್ಟು

    August 17, 2026
  • ರಾಜಕೀಯ ಚದುರಂಗ ಗೆದ್ದು ಮತ್ತೆ ಅಧಿಕಾರಕ್ಕೆ ಬರುವೆ

    August 14, 2026

KMS Special

  • ಆಪ್ತ ಸಚಿವರೊಂದಿಗೆ ಸಿದ್ದರಾಮಯ್ಯ ಗೌಪ್ಯ ಸಭೆ

    August 18, 2026
  • ಕಲಾಪ ನುಂಗಿದ ಸಚಿವ ನಾಗೇಂದ್ರ ರಾಜೀನಾಮೆ ಪಟ್ಟು

    August 17, 2026
  • ರಾಜಕೀಯ ಚದುರಂಗ ಗೆದ್ದು ಮತ್ತೆ ಅಧಿಕಾರಕ್ಕೆ ಬರುವೆ

    August 14, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಆಪ್ತ ಸಚಿವರೊಂದಿಗೆ ಸಿದ್ದರಾಮಯ್ಯ ಗೌಪ್ಯ ಸಭೆ

August 18, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ