Friday, September 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Friday, September 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

by KM Shivaraju September 17, 2026
written by KM Shivaraju September 17, 2026 0 comments 1 minutes read
0FacebookTwitterPinterestEmail
8

ಬೆಂಗಳೂರು:’ಆಡಳಿತ ವಿಕೇಂದ್ರೀಕರಣ ಹಾಗೂ ಜನರ ಮನೆ ಬಾಗಿಲಿಗೆ ಸರ್ಕಾರ’ ಧ್ಯೇಯದೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಭೆಯನ್ನು ಕರಾವಳಿ ತೀರದ ಮಂಗಳೂರಿನಲ್ಲಿ ನಾಳೆ, ಶುಕ್ರವಾರ ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಜಾಸೌಧದಲ್ಲಿ ಮಂತ್ರಿಮಂಡಲ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ, ಮಲೆನಾಡು ಮತ್ತು ಕರಾವಳಿ ತೀರದ ಜನರಿಗೆ ಸ್ಪಂದಿಸುವ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಿದ್ದಾರೆ.

ಪ್ರಜಾಸೇವಾ ಇಲಾಖೆ

ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಬೇಕೆಂಬ ಗುರಿಯೊಂದಿಗೆ ಪ್ರತ್ಯೇಕ ಪ್ರಜಾಸೇವಾ ಇಲಾಖೆ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರು ಜಿಲ್ಲಾ, ತಾಲ್ಲೂಕು ಕೇಂದ್ರ, ಹೋಬಳಿ ಹಾಗೂ ಪಂಚಾಯತ್ ಮಟ್ಟದಲ್ಲಿ ತಿಂಗಳಲ್ಲಿ ಎರಡು ಬಾರಿ ಸಭೆಗಳನ್ನು ನಡೆಸಿ ಜನಸಾಮಾನ್ಯರ ಕಷ್ಟಗಳನ್ನು ಆಲಿಸಿ, ಪರಿಹಾರ ಒದಗಿಸುವ ಉದ್ದೇಶ ಈ ಇಲಾಖೆಯದ್ದಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸ್ವತಃ ವಿಜಯನಗರ ಜಿಲ್ಲೆಯಲ್ಲಿ ಪ್ರಜಾಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇದುವರೆಗೂ 50,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಶೇ.60ರಷ್ಟು ವಿಲೇವಾರಿಯಾಗಿದೆ.

ಜಿಲ್ಲಾ ಮಟ್ಟಕ್ಕೆ ವಿಧಾನಸೌಧ

ಈ ಯಶಸ್ಸಿನಿಂದ ಉತ್ತೇಜಿತರಾಗಿ ಮುಖ್ಯಮಂತ್ರಿ ಅವರು, ವಿಧಾನಸೌಧವನ್ನೇ ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವ ತೀರ್ಮಾನಕ್ಕೆ ಬಂದಿದ್ದಾರೆ.

ಇದರ ಮೊದಲ ಭಾಗವಾಗಿ ಮಂಗಳೂರಿನಲ್ಲಿ ಮೊದಲ ಸಂಪುಟ ಸಭೆ ನಡೆಯುತ್ತಿದೆ.

ನಂತರದ ದಿನಗಳಲ್ಲಿ, ಎಲ್ಲಿ ಸಮಸ್ಯೆಗಳು ಹೆಚ್ಚು ಇರುವುದೋ ಅಲ್ಲಿ ಮಂತ್ರಿಮಂಡಲ ಸಭೆ ನಡೆಸಿ, ಅಲ್ಲಿಯೇ ಪರಿಹಾರ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.

ಬರ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲೆಂದೇ ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದ್ದಾರೆ.

ಮುಖ್ಯಮಂತ್ರಿ ಖುದ್ದು ಪ್ರವಾಸ

ಅದಕ್ಕೂ ಮುನ್ನ ಹೈದರಾಬಾದ್ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ತಾವೇ ಖುದ್ದಾಗಿ ಸಂಚರಿಸಿ ಸಮಸ್ಯೆಗಳನ್ನು ಆಲಿಸಲು ಬುಧವಾರದಿಂದ ಪ್ರವಾಸ ಪ್ರಾರಂಭಿಸಿದ್ದಾರೆ.

ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ ಮಂತ್ರಿಮಂಡಲ ಸಭೆಗಳನ್ನು ನಡೆಸಿದ ಖ್ಯಾತಿ ಸಲ್ಲುತ್ತದೆ.

ನಂತರದ ದಿನಗಳಲ್ಲಿ ಜೆ.ಎಚ್.ಪಟೇಲರು, ’ನಾನಿದ್ದಲ್ಲೇ ಸರ್ಕಾರ ಮತ್ತು ಆಡಳಿತ’ ಎಂಬ ಧ್ಯೇಯವಾಕ್ಯದೊದಿಗೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಪ್ರಮುಖ ನಿರ್ಧಾರಗಳನ್ನು ತುಮಕೂರು ರಸ್ತೆಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲೇ ಹೆಚ್ಚು ಸಂಪುಟ ಸಭೆಗಳನ್ನು ನಡೆಸುವ ಮೂಲಕ ತಮ್ಮ ಜನಸೇವಾ ಕೈಂಕರ್ಯ ಕೈಗೊಂಡಿದ್ದರು.

ನಿಸರ್ಗದ ಮಡಿಲಲ್ಲಿ ಸಭೆ

ಅಲ್ಲದೆ, ಅಧಿಕಾರಿಗಳು ಮತ್ತು ಸಚಿವರನ್ನು ಒಳಗೊಂಡ ಸಂಪುಟ ಸಭೆಗಳನ್ನು ತಿಪ್ಪಗೊಂಡನಹಳ್ಳಿ ಅಣೆಕಟ್ಟೆಯ ನಿಸರ್ಗದ ಮಡಿಲಲ್ಲಿ ನಡೆಸಿದ ಖ್ಯಾತಿ ಪಟೇಲ್ ಅವರದು.

ನಂತರ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರುಗಳು ಬೆಳಗಾವಿ, ಕಲಬುರಗಿ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧೆಡೆ ಮಂತ್ರಿಮಂಡಲ ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯ ಮಾಡಿದ್ದರು.

ಇದೀಗ ಶಿವಕುಮಾರ್ ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟದಲ್ಲೂ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದು, ಮೊದಲ ಸಭೆ ಕರಾವಳಿ ತೀರದಲ್ಲಿ ನಡೆಯುತ್ತಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cabinet meetingcm d k shivakumarfridaygovt. to people's doormangalurusouth canara
0 FacebookTwitterPinterestEmail
KM Shivaraju

previous post
ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

You may also like

ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

September 16, 2026

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

September 15, 2026

ಕಾಂಗ್ರೆಸ್ ಹಗರಣಗಳ ತನಿಖೆಗೆ ಇ.ಡಿ. ಚೀಫ್ ಎಂಟ್ರಿ !

September 12, 2026

ಇ.ಡಿ. ರಾಡಾರ್‌ನಲ್ಲಿ ಇನ್ನೂ ಮೂರ‍್ನಾಲ್ಕು ಸಚಿವರು

September 11, 2026

ಮುಂದಿನ 500 ದಿನ ಆಡಳಿತದಲ್ಲಿ 6 ಲಕ್ಷ ಉದ್ಯೋಗ

September 10, 2026

ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇ.ಡಿ. ತೂಗುಕತ್ತಿ

September 9, 2026

ತಮಿಳುನಾಡಿಗೆ 15 ದಿನ 6 ಸಾವಿರ ಕ್ಯೂಸೆಕ್ ನೀರು ಬಿಡಿ

September 8, 2026

ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಅಹಿಂದ ಬಿರುಕು

September 7, 2026

ಬಂಡವಾಳ ಹೂಡಿಕೆಗೆ ಭಾರತ ಅತ್ಯುತ್ತಮ ರಾಷ್ಟ್ರ

September 7, 2026

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (569)
  • ಅಂಕಣ (109)
  • ಉದ್ಯೋಗ (351)
  • ದಿನ ಭವಿಷ್ಯ (110)
  • ರಾಜಕೀಯ (2,062)
  • ರಾಜ್ಯ (2,377)
  • ರಾಷ್ಟ್ರ (2,341)
  • ವಿಶ್ಲೇಷಣೆ (202)
  • ಶಿಕ್ಷಣ (410)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

    September 17, 2026
  • ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

    September 16, 2026
  • ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

    September 15, 2026

KMS Special

  • ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

    September 17, 2026
  • ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

    September 16, 2026
  • ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

    September 15, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

September 16, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ