ಬೆಂಗಳೂರು: ವಿವಿಧ ಇಲಾಖೆಗಳಲ್ಲಿನ ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಲಿಖಿತ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ ಬಳಸಿ ಉತ್ತರ ಬರೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ದಾಖಲಾಗಿರುವ ಐದು ಮೊಕದ್ದೆಮೆಗಳ ಎಲ್ಲಾ ದಾಖಲಾತಿಗಳನ್ನು ಕೂಡಲೇ ಸಿಐಡಿ ಪೊಲೀಸರಿಗೆ ವಹಿಸುವಂತೆ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕಚೇರಿ ಈ ಸಂಬಂಧ ಆದೇಶ ನೀಡಿದೆ.
ಯಾದಗಿರಿ ಜಿಲ್ಲೆಯ ಯಾಗದಿರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬ್ಲೂಟೂತ್ ಬಳಸಿ ಪರೀಕ್ಷೆ ಉತ್ತರ ಬರೆಸುತ್ತಿದ್ದ ಹಗರಣ ಕುರಿತ ಮೊಕದ್ದಮೆಗಳ ತನಿಖಾ ಉಸ್ತುವಾರಿ ಅಧಿಕಾರಿಯು ಖುದ್ದಾಗಿ ಕಡತಗಳನ್ನು ಪ್ರಕರಣದ ತನಿಖೆಗೆ ನಿಯುಕ್ತರಾಗಿರುವ ಸಿಐಡಿ ಅಧಿಕಾರಿಗೆ ವಹಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಲಾಗಿದೆ.