Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್ ಶಿಪ್

by cklbkrish November 11, 2023
written by cklbkrish November 11, 2023 0 comments 3 minutes read
2FacebookTwitterPinterestEmail
81
ಕೋಲಾರ- ಚಿಕ್ಕಬಳ್ಳಾಪುರ  ಹಾಲು ಮಹಾಮಂಡಲ  ಪ್ರತ್ಯೇಕಗೊಳಿಸಲು ಮಂಜೂರಾತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಂಗಾರಪೇಟೆ: ಬಾರಿಯ ಬಜೆಟ್ ನಲ್ಲಿ ಕೆಜಿಎಫ್ ನಲ್ಲಿರುವ 965  ಕೈಗಾರಿಕಾ ಪ್ರದೇಶದವನ್ನು ಬಿ ಇ ಎಂಎಲ್ ನಿಂದ ಹಿಂಪಡೆದು ಅಲ್ಲಿ ಹೊಸ  ಕೈಗಾರಿಕಾ ಟೌನ್ಸ್ ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಬಂಗಾರಪೇಟೆ ತಾಲ್ಲೂಕುಗಳಿಗೆ  ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ  ಉದ್ಘಾಟನೆ ನೆರವೇರಿಸಿ ಅವರು  ಮಾತನಾಡಿದರು.

ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ

ಹಿಂದೆ ಪ್ರತ್ಯೇಕವಾಗಿದ್ದ ಒಂದು ಮಾಡಲಾಗಿದ್ದ ಕೋಲಾರ- ಚಿಕ್ಕಬಳ್ಳಾಪುರ  ಹಾಲು ಒಕ್ಕೂಟ ವನ್ನು ಒಂದು ಮಾಡಲಾಗಿತ್ತು.  ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ.   ಪ್ರತಿ ತಿಂಗಳು ವಿದ್ಯುತ್ ಬಿಲ್ಲು ಕಟ್ಟುವುದನ್ನು ತಪ್ಪಿಸಲು 50 ಎಕರೆ ಜಾಗದಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸಲು ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ  ರೈತರಿಗೆ  ಅನುಕೂಲವಾಗಲಿದೆ ಎಂದರು.

ಬರಗಾಲವಿದ್ದರೂ 2263 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದೇವೆ. ಕೆ.ಹೆಚ್.ಮುನಿಯಪ್ಪ ಅವರು ಸಚಿವರಾಗಿದ್ದಾಗ 83 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವುದಕ್ಕಾಗಿ ಹಾಗೂ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀನಿವಾಸಗೌಡರ ಕೊಡುಗೆ ಸ್ಮರಿಸಬೇಕು

ಒಂದು ಕಾಲದಲ್ಲಿ ಕೋಲಾರ, ಬಂಗಾರಪೇಟೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡುವ ಪರಿಸ್ಥಿತಿ ಇತ್ತು. ಕುಡಿಯುವ ನೀರು ಸಿಗುತ್ತಿರಲಿಲ್ಲ. ಅದಕ್ಕೆ ಯೋಚಿಸಿ ಮಾರ್ಕಾಂಡೇಯ ನದಿಗೆ ಯರಗೊಳ್ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಿ  ನೀರು ಶೇಖರಿಸಿ ಮೂರೂ ಪಟ್ಟಣಗಳಿಗೆ ಕುಡಿಯುವ  ನೀರು ಕೊಡುವ ಯೋಜನೆ ರೂಪಿಸಲಾಯಿತು.

ಇದು ಇಂದು ಕಾರ್ಯಗತ ಆಗುತ್ತಿರುವುದರ ಹಿಂದಿರುವ ಮಾಜಿ ಸಚಿವ ಶ್ರೀನಿವಾಸಗೌಡ ಅವರ ಕೊಡುಗೆಯನ್ನು  ಹಾಗೂ ಟೀಚರ್ ಚಂದ್ರಪ್ಪ, ನಾರಾಯಣಸ್ವಾಮಿ ಅವರನ್ನು ಸ್ಮರಿಸಬೇಕು. ಯರಗೋಳ್ ಯೋಜನೆ 2006 ರಲ್ಲಿ ಪ್ರಾರಂಭವಾದರೂ, ಕಾರ್ಯಗತವಾಗಲಿಲ್ಲ.  ಬಂಗಾರಪೇಟೆ  ಶಾಸಕ ನಾರಾಯಣಸ್ವಾಮಿಯವರು ಒತ್ತಾಯ ಮಾಡಿ ಚಾಲನೆ ನೀಡಿದರು. ಹಾಗಾಗಿ ಇದಕ್ಕೆ ಚಾಲನೆ ದೊರಕುತ್ತಿದೆ.

38.1 ಗಜ ಆಳದಲ್ಲಿ ನೀರು ನಿಲ್ಲಲಿದೆ. ಈ ಮೂರು ಪಟ್ಟಣಗಳಿಗೆ ನೀರು ಸಾಕಾಗುತ್ತದೆ ಎನ್ನುವುದು ನನ್ನ ಭಾವನೆ. ಕೆಜಿಎಫ್ ಶಾಸಕಿ ರೂಪ ಅವರೂ ಕೆಜಿಎಫ್ ಗೆ ಯರಗೋಳ್ ಯೋಜನೆಯಿಂದ  ನೀರು ಒದಗಿಸಲು ಕೋರಿದ್ದು, ಈ ಬಗ್ಗೆ ಚರ್ಚೆ ಮಾಡಿ ನೀರು ಸಿಕ್ಕರೆ ಎಷ್ಟೇ ಖರ್ಚಾದರೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.

2223  ಕೋಟಿ ರೂ.ಗಳ ಬೃಹತ್  ಮೊತ್ತದ ಕಾಮಗಾರಿಗಳು

ಒಂದು ಕ್ಷೇತ್ರದಲ್ಲಿ 2223  ಕೋಟಿ ರೂ.ಗಳ ಬೃಹತ್  ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿದೆ. ಜನಪ್ರತಿನಿಧಿಗಳಾದ ರಮೇಶ್ ಕುಮಾರ್, ನಂಜೇಗೌಡ, ನಾರಾಯಣಸ್ವಾಮಿ, ಕೆ.ಹೆಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಇವರೆಲ್ಲರೂ ಕೆ.ಸಿ.ವ್ಯಾಲಿಯಾಗಬೇಕು, ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸುತ್ತಿದ್ದರು ಎಂದು ತಿಳಿಸಿದರು.

ಯರಗೋಳು ಯೋಜನೆಗೆ  23 ಸಾವಿರ ಕೋಟಿ ರೂ ವೆಚ್ಚ

ಕೋಲಾರ, ಚಿತ್ರದುರ್ಗ  ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಕರ್ನಾಟಕ. ಹೆಚ್.ಎನ್.ವ್ಯಾಲಿ, ಕೆ.ವ್ಯಾಲಿ, ಪುಷ್ಪಾವತಿ ವ್ಯಾಲಿ ಜಾರಿ ಮಾಡಿದ ನಾವು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಾಯ ಮಾಡಿದ್ದು ಮಹಾಜನತೆ.

ಯೋಜನೆ ಕಾರ್ಯಸಾಧುವಾಗಿದ್ದರೆ ಎಷ್ಟೇ ಖರ್ಚಾದರೂ  ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಯರಗೋಳು ಯೋಜನೆಗೆ  23 ಸಾವಿರ ಕೋಟಿ ರೂ ವೆಚ್ಚವಾಗಿದೆ. ಕೆ.ಸಿ.ವ್ಯಾಲಿಗೆ 1800 ಕೋಟಿ ರೂ ಹಾಗೂ ಹೆಚ್.ಎನ್.ವ್ಯಾಲಿಗೆ 800 ಕೋಟಿ ರೂ.ವೆಚ್ಚವಾಗಿದ್ದು, ಇದು ಅಭಿವೃದ್ಧಿ ಅಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಕೆರೆಗಳು ತುಂಬಿರುವುದರಿಂದ ಕೋಲಾರದಲ್ಲಿ ಹಣ್ಣು, ತರಕಾರಿ, ರೇಷ್ಮೆ  ಬೆಳೆಯುತ್ತಿದ್ದಾರೆ. 1200 ಅಡಿಗಳವರೆಗೆ ಕೊರೆದರೂ ನೀರು ಸಿಗದ ಕಾಲವೊಂದಿತ್ತು. ಆದ್ದರಿಂದ ನೀರು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂದು ಒತ್ತಾಯಿಸಿದ್ದರು.

ಇಲ್ಲಿ ಯಾವುದೇ ಪ್ರಮುಖ ನದಿ ಇಲ್ಲದಿರುವುದರಿಂದ ಕೆರೆಗಳು ತುಂಬುವುದು ಅವಶ್ಯ. ಕುಡಿಯುವ ನೀರು ನೀಡುವುದು ಅತ್ಯಂತ ಅಗತ್ಯ ಎಂದು ಮನಗಂಡು ಮಂಜೂರು ಮಾಡಲಾಯಿತು. ಯರಗೊಳ್ ಯೋಜನೆಗೆ ಅಂದು 13 ಕೋಟಿ, ಇಂದು 23 ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಎಲ್ಲಾ ಯೋಜನೆಗಳನ್ನು ಈ ಅವಧಿ ಮುಗಿಯುವುದರೊಳಗೆ  ಪೂರ್ಣಗೊಳಿಸಲಾಗುವುದು ಎಂದರು.

ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ

 ನೀರನ್ನು ಪರೀಕ್ಷೆ ಮಾಡಿಸಿದ್ದು ಹಾನಿಕಾರಕ ಪದಾರ್ಥ ಇಲ್ಲ ಎಂದು ವಿಶ್ವಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆ ನೀಡಿದ್ದಾರೆ. ಕುಮಾರಸ್ವಾಮಿ ಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೇರಳದ ಸಮಾಲೋಚಕರೂ ಕೂಡ  ಇದನ್ನು ಇತರೆ ರಾಜ್ಯಗಳಲ್ಲಿ ಅನುಕರಿಸಬೇಕು ಎಂದಿದ್ದಾರೆ.

ಕೇವಲ ರಾಜಕೀಯ ಕ್ಕಾಗಿ ಟೀಕೆ ಮಾಡಬಾರದು ಎಂದರು. ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ಜನರೇ ಮಾಲೀಕರು. ಜನರ ಸಮಸ್ಯೆಗಳಿಗೆ,  ಜನರ ವಿರುದ್ಧವಾಗಿ, ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು. ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಾರಣ

ವಿರೋಧಿಗಳೇ ಕಣ್ತೆರೆದು ನೋಡಿ

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ  ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಟೀಕಿಸುವ ವಿರೋಧಿಗಳಿಗೆ ಕಣ್ತೆರೆದು ನೋಡುವಂತೆ ತಿಳಿಸಿದ ಮುಖ್ಯಮಂತ್ರಿಗಳು,  ಕಣ್ಣು ಮುಚ್ಚಿಕೊಂಡು  , ರಾಜಕೀಯ ಕಾರಣಗಳಿಗಾಗಿ ಮಾತನಾಡಬೇಡಿ ಎಂದರು. ಇದು ಸಣ್ಣ ಅನುದಾನವಲ್ಲ. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು,ಬೆಂಗಳೂರು ಗ್ರಾಮಾಂತರ,  ಹಾಸನ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯನ್ನು ಯಾರು ಜಾರಿಗೆ ಮಾಡಿದ್ದು? ವಿರೋಧಿಸುವವರು ಮಾಡಿಕೊಟ್ಟರೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎನ್ನುವವರಿಗೆ ಇಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದರು.

ಟೀಕಿಸುವವರಿಗೆ ಹೊಟ್ಟೆಉರಿಯುವಂತೆ ಕೆಲಸ

 ಕಳೆದ ವರ್ಷವೇ ಈ ಯೋಜನೆ ಜಾರಿಯಾಗಿದ್ದರೆ ಎಲ್ಲರಿಗೂ ನೀರು ದೊರಕುತ್ತಿತ್ತು. ನಮ್ಮ ಅವಧಿಯಲ್ಲಿ ಎತ್ತಿನಹೊಳೆ ಸಂಪೂರ್ಣ ಯೋಜನೆ ಮುಗಿಸಿ ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಟ್ಟೇಕೊಡುತ್ತೇವೆ. ನಮ್ಮನ್ನು ಟೀಕಿಸುವವರಿಗೆ ಹೊಟ್ಟೆಉರಿಯುವಂತೆ  ಕೆಲಸವನ್ನು ಮಾಡುತ್ತೇವೆ ಎಂದರು.

ಕೆ. ಸಿ.ವ್ಯಾಲಿ ಯೋಜನೆ ಜಾರಿ ಮಾಡಬಾರದು. ಅದರ ಮೂಲಕ ಜನರಿಗೆ ವಿಷ ನೀಡಲಾಗುತ್ತಿದೆ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಯೋಜನೆಯಿಂದ ಕೆರೆಗಳು ತುಂಬಿವೆ. ದನಕರುಗಳಿಗೆ ಮೇವಾಗಿದೆ. ಈವರೆಗೆ  ಜನ, ದನಕರುಗಳು ಸತ್ತ ಉದಾಹರಣೆ ಇದೆಯೇ?  ಎಂದು ಮುಖ್ಯಮಂತ್ರಿ ಗಳು ಜನರನ್ನು ಕೇಳಿದಾಗ ಇಲ್ಲ ಎಂದು ಜೋರಾಗಿ ಕೂಗಿದರು. ಇದನ್ನು ಕುಮಾರಸ್ವಾಮಿಗೆ ಹೇಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bangarapetekarnatakakmskmskannadakolaramilk dairypoliticsSiddaramaiahtownship
2 FacebookTwitterPinterestEmail
cklbkrish

previous post
ಕೇಂದ್ರದಿಂದ ಪೂರಕ ಸ್ಪಂದನೆ ದೊರೆತಿಲ್ಲ
next post
ತೆಲಂಗಾಣದ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ